spot_img
spot_img

ಗಬ್ಬೆದ್ದು ನಾರುತ್ತಿರುವ ಮೂಡಲಗಿ ಶೌಚಾಲಯಗಳು ಸಾರ್ವಜನಿಕರಿಗೆ ಜವಾಬ್ದಾರಿಯಿರಬೇಕು – ಮುಖ್ಯಾಧಿಕಾರಿ

Must Read

spot_img
- Advertisement -

ಮೂಡಲಗಿ – ಈ ಫೋಟೋಗಳನ್ನು ನೋಡಿ. ಇವು ಯಾವುದೋ ಮಹಾನಗರದ ಸ್ಲಮ್ ಏರಿಯಾದ ಚಿತ್ರಗಳಲ್ಲ. ಇತ್ತೀಚೆಗಷ್ಟೇ ತಾಲೂಕಾಗಿ ಹೊರಹೊಮ್ಮಿರುವ ಮೂಡಲಗಿ ನಗರದ ಸಾರ್ವಜನಿಕ ಶೌಚಾಲಯಗಳ ಶೋಚನೀಯ ಸ್ಥಿತಿಯ ಘೋರ ಚಿತ್ರಣ.

ಅಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತ ಎಂದು ಹೇಳಿ, ಎಲ್ಲೆಡೆ ಸ್ವಚ್ಛತೆ ಕಾಪಾಡಿಕೊಳ್ಳಿ, ಮನೆ ಮನೆಗೆ ಶೌಚಾಲಯ ಕಟ್ಟಿರಿ, ರೋಗಗಳಿಂದ ಮುಕ್ತಿ ಹೊಂದಿರಿ ಎಂದೆಲ್ಲ ತಮ್ಮ ಭಾಷಣದಲ್ಲಿ ಹೇಳುತ್ತಿದ್ದರೆ ಮೂಡಲಗಿ ನಗರದ ಈ ಶೌಚಾಲಯಗಳನ್ನು ಕೇವಲ ಕಣ್ಣಿಂದ ನೋಡಿದರೆ ಸಾಕು ಹೊಟ್ಟೆಯೊಳಗಿಂದ ವಾಂತಿಯೆನ್ನುವುದು ಕುತ್ತಿಗೆಗೆ ಬಂದು ಬುಳಕ್ಕನೆ ಹೊರಬೀಳುತ್ತದೆ. ಇವು ಪಾಯಖಾನೆಗಳಲ್ಲ ಪಾಯಖಾನೆಯ ಅಪರಾವತಾರಗಳು ! ಇಲ್ಲಿ ಯಾರಾದರೂ ಮಲ ವಿಸರ್ಜನೆಗೆಂದು ಹೋದರೆ ಮಲ ವಿಸರ್ಜನೆ ಆಗುತ್ತದೆಯಾ ಎಂಬುದೇ ಒಂದು ಪ್ರಶ್ನೆ. ಅದಲ್ಲದೆ ನಿರೋಗಿಗಳು ಇಲ್ಲಿ ಪ್ರತಿದಿನ ಹೋದರೆ ರೋಗಿಗಳಾಗಿ ಮಾರ್ಪಾಡಾಗುವುದು ಗ್ಯಾರಂಟಿ.

- Advertisement -

ಕೆಲವೇ ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಈ ಅಶೌಚಾಲಯಗಳ ನಿರ್ವಹಣೆಯನ್ನು ಪುರಸಭೆ ಸರಿಯಾಗಿ ನಿರ್ವಹಿಸಿಲ್ಲವೆಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಕೆಲವು ಪಾಯಖಾನೆಗಳಿಗೆ ಬಾಗಿಲೇ ಇಲ್ಲ. ಬಾಗಿಲಿದ್ದರೆ ಒಳಗೆ ಕಾಲಿಡಲೇ ಆಗುವುದಿಲ್ಲ. ಗಲೀಜು, ಕೊಳಚೆ ನೀರು, ಕಸ ಕಡ್ಡಿ, ಗುಟಖಾ ಪಾಕೀಟು, ಪ್ಲಾಸ್ಟಿಕ್ ಎಲ್ಲವೂ ಪಾಯಖಾನೆಯಲ್ಲಿ ಸಂಗ್ರಹಗೊಂಡು ಬ್ಲಾಕ್ ಆದಂತಿದೆ. ಪಾಯಖಾನೆಗಳ ಹೊರಗೆ ಕೂಡ ಎಲ್ಲಿ ಕಾಲಿಟ್ಟರೂ ಗಲೀಜೇ ಗಲೀಜು. ಇವುಗಳನ್ನು ಸ್ವಚ್ಛಮಾಡಿ ಎಷ್ಟೋ ವರ್ಷಗಳೇ ಆದಂತೆ ಕಾಣಿಸುತ್ತಿವೆ.

- Advertisement -

ಊರಲ್ಲಿ ಕೊರೋನಾ ವೈರಾಣು ಹರಡುತ್ತಿದೆ. ಜನರ ಆರೋಗ್ಯ ಹದಗೆಡುತ್ತಿದೆ. ಇದಕ್ಕೆಲ್ಲ ಈ ಪಾಯಖಾನೆಗಳ ಕಾಣಿಕೆ ಬಹಳ ದೊಡ್ಡದಿದೆ ಎನ್ನಬಹುದು. ಇದನ್ನೆಲ್ಲ ನೋಡಿಕೊಂಡು ಬರುವಷ್ಟರಲ್ಲಿಯೇ ಮೂಡಲಗಿ ಪುರಸಭೆಗೆ ಸ್ವಚ್ಛತಾ ಅಭಿಯಾನದಲ್ಲಿ ರಾಜ್ಯಕ್ಕೇ ಆರನೇ ಸ್ಥಾನ ಬಂದಿರುವ ವರದಿ !!

ಅರ್ಧ ಊರಿನಲ್ಲಿಯೇ ಸ್ವಚ್ಛತೆಯೆಂದರೆ ಏನು ಎಂದು ಕೇಳುವಂಥ ಪರಿಸ್ಥಿತಿ ಇರುವಾಗ ರೋಗ ರುಜಿನಗಳು ಹೇಗೆ ನಿಯಂತ್ರಣ ಬರಬಹುದು ಎಂದು ಯಾರಾದರೂ ಯೋಚಿಸಬಹುದಾ ? ಇಲ್ಲಿ ಗಬ್ಬೆದ್ದು ನಾರುತ್ತಿರುವ ಪಾಯಖಾನೆಗಳಷ್ಟೇ ಅಲ್ಲ ಅಲ್ಲಲ್ಲಿ ಕಸದ ಗುಡ್ಡೆಗಳೂ ಇವೆ.

ಅವುಗಳನ್ನು ತುಂಬುವ ಗೋಜಿಗೆ ಯಾರೂ ಹೋಗಿಲ್ಲ. ಕಸದ ನಿರ್ವಹಣೆ, ಕಸ ವಿಂಗಡಣೆ, ಎರೆಹುಳ ಗೊಬ್ಬರ ತಯಾರಿಕೆ, ಶೌಚಾಲಯ ಕಟ್ಟಡ ಇಂಥದರಲ್ಲಿ ರಾಜ್ಯಕ್ಕೇ ಆರನೆಯ ಸ್ಥಾನವೇನೋ ಪುರಸಭೆಗೆ ಬಂದಿದೆ ಆದರೆ ಅವುಗಳ ನಿರ್ವಹಣೆಯಲ್ಲಿ ಇಷ್ಟೊಂದು ಉದಾಸೀನವಾದರೆ ಹೇಗೆ ? ಜನರ ಆರೋಗ್ಯ ಕಾಪಾಡಬೇಕಾದವರೇ ಹೀಗೆ ಆರೋಗ್ಯದ ಜೊತೆ ಆಟವಾಡಿದರೆ ಹೇಗೆ ?

ಪಾಯಖಾನೆಗಳ ದುಸ್ಥಿತಿಯ ಬಗ್ಗೆ ಪುರಸಭೆಯ ಮುಖ್ಯಾಧಿಕಾರಿ ದೀಪಕ ಹರ್ದಿಯವರನ್ನು ಪ್ರಶ್ನಿಸಿದಾಗ ಅವರು ಹೇಳುವುದೇ ಬೇರೆ..

“ಇದು ಸಾರ್ವಜನಿಕರ ಆಸ್ತಿ. ಸಾರ್ವಜನಿಕರೇ ಶೌಚಾಲಯಗಳನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ಕೆಲವು ದುಷ್ಕರ್ಮಿಗಳು ಶೌಚಾಲಯದ ಬಾಗಿಲು ಮುರಿಯುವುದು, ಶೌಚದ ಬಾಂಡೆಯಲ್ಲಿ ಕಲ್ಲು ಹಾಕುವುದು ಮಾಡುತ್ತಾರೆ ಇದರಿಂದ ಅವು ಬ್ಲಾಕ್ ಆಗಿ ಹೊಲಸಾಗುತ್ತದೆ. ಕೆಲವು ಕಡೆ ತಮ್ಮ ಏರಿಯಾದಲ್ಲಿ ಪಾಯಖಾನೆ ಬೇಡ ಎನ್ನುವವರು ಅವುಗಳನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡುತ್ತಾರೆ. ಹೀಗಾದರೆ ಪುರಸಭೆಯವರು ಎಷ್ಟೂ ಅಂತ ಕಾವಲು ಮಾಡಲು ಆಗುತ್ತದೆ ? ” ಎಂದು ಪ್ರಶ್ನಿಸಿದರು.

ಆದರೂ ಈ ಶೌಚಾಲಯಗಳ ದುರಸ್ತಿಗೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಒಂದು ವಾರದಲ್ಲಿ ಮಂಜೂರಾಗಿ ಬರುವ ನಿರೀಕ್ಷೆಯಿದೆ. ಬಸವ ಮಂಟಪ ಹಾಗೂ ವಡ್ಡರ ಓಣಿ ರಸ್ತೆಯ ಪಕ್ಕ ಎರಡು ಶೌಚಾಲಯ ನಿರ್ಮಾಣಕ್ಕೆ ಟೆಂಡರ್ ಮಂಜೂರಾಗಿ ಬಂದಿದ್ದರೂ ಸಾರ್ವಜನಿಕರ ವಿರೋಧದಿಂದಾಗಿ ನಿರ್ಮಾಣ ಮುಂದೆ ಹೋಗುತ್ತಿದೆ ಎಂದು ಮುಖ್ಯಾಧಿಕಾರಿ ಹೇಳಿದರು.

ಪಾಯಖಾನೆ ಸ್ವಚ್ಛ ಮಾಡಲು ಕಾರ್ಮಿಕರನ್ನು ನೇಮಿಸುವ ಕುರಿತು ಪ್ರಶ್ನಿಸಿದಾಗ, ಅವರಿಗೆ ಸಂಬಳ ಯಾರು ಕೊಡಬೇಕು, ಎಲ್ಲಿಂದ ಕೊಡಬೇಕು ? ಶೌಚ ಉಪಯೋಗಿಸಲು ಒಂದು ರೂಪಾಯಿ ಶುಲ್ಕ ಇಟ್ಟರೆ ಯಾರೂ ಬರುವುದಿಲ್ಲ ಎಂದು ಹರ್ದಿಯವರು ಹೇಳಿದರು.

ಆದರೂ ಜನರ ಆರೋಗ್ಯಕ್ಕೆ ಸ್ವಚ್ಛತೆ ಮುಖ್ಯ. ಅದನ್ನು ಕಾಪಾಡಲಿಕ್ಕೆ ಪುರಸಭೆಯವರೇ ಮನಸು ಮಾಡಬೇಕು.

ಶೌಚಾಲಯಗಳ ನಿರ್ವಹಣೆಗೆ ಇಬ್ಬರು ಕಾರ್ಮಿಕರನ್ನು ನೇಮಕ ಮಾಡಿಕೊಂಡು ಅವುಗಳನ್ನು ಸ್ವಚ್ಛವಾಗಿಡಬಹುದು. ಇದರ ಬಗ್ಗೆ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಬಹುದು. ಇದಲ್ಲದೆ ವಾರ್ಡ್ ಗಳ ಸದಸ್ಯರೂ ಕೂಡ ಈ ಬಗ್ಗೆ ಜನಜಾಗೃತಿ ಉಂಟುಮಾಡಬೇಕು. ತಂತಮ್ಮ ವಾರ್ಡ್ ಗಳಲ್ಲಿ ಸ್ವಚ್ಛತೆ ಹಾಗೂ ಜನರ ಆರೋಗ್ಯದ ಕುರಿತು ಆಗಬೇಕಾದ ಕೆಲಸಗಳ ಬಗ್ಗೆ ಮುಖ್ಯಾಧಿಕಾರಿಗಳಿಗೆ ಹಾಗೂ ಆರೋಗ್ಯಾಧಿಕಾರಿಗಳಿಗೆ ಸಲಹೆ ಸೂಚನೆ ಕೊಟ್ಟು ಸಹಾಯ ಮಾಡಬೇಕೆಂಬುದು ಪತ್ರಿಕೆಯ ಕಾಳಜಿಯಾಗಿದೆ.

ಉಮೇಶ ಬೆಳಕೂಡ

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group