spot_img
spot_img

ಚಿಂತನೆ

Must Read

spot_img
- Advertisement -

ನಮ್ಮ ಭಾರತದ ಸ್ವಾತಂತ್ರ್ಯಕ್ಕಾಗಿ ಜೀವ ಭಯ ಬಿಟ್ಟು ಹೋರಾಟ ನಡೆಸಿದ ಕ್ರಾಂತಿ,ಶಾಂತಿಕಾರರ ವಿರುದ್ದ ನಮ್ಮ ಕೆಟ್ಟ ಮನಸ್ಸಿನ ಹೇಳಿಕೆಗಳನ್ನು ಕೊಟ್ಟು ನಮ್ಮನಮ್ಮಲ್ಲೇ ಬಿರುಕು ಬಿಡುವಂತೆ ಪಿತೂರಿ ನಡೆಸಿದ ಮಧ್ಯವರ್ತಿಗಳು ಅನೇಕರಿದ್ದಾರೆ.

ಆದರೆ, ನಾವೀಗ ಸ್ವಾತಂತ್ರ್ಯ ಪದವನ್ನು ಹೇಗೆ ಬಳಸಿಕೊಂಡು ಕಷ್ಟ ನಷ್ಟ ಅನುಭವಿಸಿ ವಿದೇಶಿಗಳಂತೆ ಜೀವನ ನಡೆಸಿದ್ದೇವೆಂಬ ಸತ್ಯ ಅರ್ಥ ಮಾಡಿಕೊಂಡರೆ ವಾಸ್ತವತೆಯ ಅರಿವಾಗಿ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಪುರಾಣ ಇತಿಹಾಸದ ಕಥೆಯ ವ್ಯಥೆಗೆ ಕಾರಣ ರಾಜಕೀಯ
ಪ್ರಜಾಪ್ರಭುತ್ವ. ಇಂದಿಗೂ ಅದನ್ನು ಕೆರೆದು ಕೆರೆದು ಗಾಯವನ್ನು ಹುಣ್ಣು ಮಾಡಿಕೊಂಡು ದ್ವೇಷವನ್ನು ಬೆಳೆಸಿದೆ.
ಹಾಗಾದರೆ ನಮಗೆ ಇದರಲ್ಲಿರುವ ರಾಜಯೋಗದ ವಿಚಾರ ಅರ್ಥ ಆಗಿದೆಯೆ?

- Advertisement -

ರಾಜಯೋಗ ಎಂದರೆ ನಿನ್ನ ಆತ್ಮರಕ್ಷಣೆಗಾಗಿ ನೀನು ಬದುಕು ಎಂದು. ಆದರೆ ಇಲ್ಲಿ ಜೀವತ್ಯಾಗ ಮಾಡಿದ ಮಹಾತ್ಮರನ್ನು ಕೇವಲವಾಗಿ ಕಂಡು ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡಿ ತಮ್ಮ ಸ್ವಾರ್ಥ ಹೆಚ್ಚಿಸಿಕೊಂಡು ಮಧ್ಯವರ್ತಿಗಳು
ಸುಖವಾಗಿದ್ದರೆ , ಇದರಿಂದ ಮುಂದಿನ ಪೀಳಿಗೆ ಕಲಿಯುವುದು ಏನು?

ಧರ್ಮದ ಪ್ರಕಾರ ಪ್ರಜಾಧರ್ಮ ಇಂದಿಗೆ ಅಗತ್ಯವಿದೆ. ದೇಶವನ್ನು ವಿದೇಶ ಮಾಡಲು ಹೊರಟವರಿಗೆ ಸ್ವಾತಂತ್ರ್ಯ ‌ಕೊಟ್ಟು ,ಅವರ ವ್ಯವಹಾರ,ಬಂಡವಾಳ,ಸಾಲ,ಶಿಕ್ಷಣ ಪಡೆದವರಿಗೆ ಅಂದಿನ ಪರತಂತ್ರರ ಆಡಳಿತದ ಪರಿಸ್ಥಿತಿ ಅರ್ಥ ಆಗೋದಿಲ್ಲ.
ಇಷ್ಟಕ್ಕೂ ನಾವೇನು ದೇಶಕ್ಕಾಗಿ ಮಾಡಿದ್ದೇವೆ?ಆಧ್ಯಾತ್ಮಿಕ ವಿಚಾರಗಳು ರಾಜಕೀಯಕ್ಕೆ ಬಳಸಿಕೊಂಡಾಗ ಎಷ್ಟೋ ಅಪಾರ್ಥಗಳು,ಅನ್ಯಾಯಗಳು,ಹಿಂಸೆಗಳು ನಡೆಯುತ್ತದೆ.

ಇದನ್ನು ಒಬ್ಬ ವ್ಯಕ್ತಿ ಸರಿಪಡಿಸಲು ಅಸಾಧ್ಯ. ಆ ಸಮಯದಲ್ಲಿದ್ದ ಹಿಂದೂ ಮುಸ್ಲಿಂ ಕೇವಲ ದೇಶದ ಪರವಾಗಿ
ಚಿಂತನೆ ಮಾಡದೆ ಧರ್ಮದ ಪರ ನಿಂತಿದ್ದರೆ ನಮಗೆ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ.

- Advertisement -

ಈಗಲೂ ಹಾಗೆ, ನಮಗೆ ಮುಸ್ಲಿಂರ ವ್ಯವಹಾರಜ್ಞಾನ ಬೇಕು, ಇಸ್ಲಾಂರ ಶಿಕ್ಷಣ ನೀತಿ ಬೇಕು.ಅಂದರೆ ಈಗ ನಾವು ಅವರ ಋಣದಲ್ಲಿ ಇದ್ದು ನಾವು ಸ್ವತಂತ್ರರು ಸ್ವಾವಲಂಬಿಗಳು, ಸ್ವಾಭಿಮಾನಿಗಳು ಎನ್ನುವುದರಲ್ಲಿ ಪೂರ್ಣ ಸತ್ಯವಿಲ್ಲ. ಇದೀಗ ಸಾಧ್ಯವೂ ಇಲ್ಲ. ಹೊಟ್ಟೆಗೆ ಹಾಕಿಕೊಂಡ ಆಹಾರ,ವಿಹಾರವೆ ಕಲುಷಿತವಾಗಿರುವಾಗ ಅದನ್ನು ಶುದ್ದಗೊಳಿಸಲು ಸ್ವಚ್ಚವಾದ ಶಿಕ್ಷಣ ಬೇಕಷ್ಟೆ.

ಅದು ಬಿಟ್ಟು ಎಷ್ಟೇ ಧರ್ಮದ ಪರ ನಿಂತರೂ ಮುಕ್ತಿ ಸಿಗಲು ಕಷ್ಟ. ಇದೇ ಕಾರಣಕ್ಕೆ ಪರಧರ್ಮದವರ ಸಂಖ್ಯೆ ಜಗತ್ತಿನಲ್ಲಿ
ಹೆಚ್ಚಾಗಿರೋದು. ನಾವು ಯಾರನ್ನೂ ದ್ವೇಷ ಮಾಡದೆ, ಪರಮಾತ್ಮನ ಕಾಣಲು ಮಹಾತ್ಮರು ವೈರಿಗಳನ್ನು ಪ್ರೀತಿಸು ಎಂದಿದ್ದಾರೆ. ಆದರೆ ನಮ್ಮವರೆ ನಮಗೆ ಶತ್ರುಗಳಾಗಿದ್ದರೆ
ಪರಮಾತ್ಮ ಕಾಣಲು ಸಾಧ್ಯವಿಲ್ಲ.

ದೇಶದ ಪ್ರಶ್ನೆ ಬಂದಾಗ ಇಲ್ಲಿ ಮಾನವ ಧರ್ಮ ಮುಖ್ಯ. ವಿದೇಶಿಗಳ ಹಿಂದೆ ಬಿದ್ದಿರುವ ಈಗಿನ ಶಿಕ್ಷಣವೆ ನಮ್ಮದಾಗಿಲ್ಲವಾದಾಗ ನಾವು ಯಾರಿಗೆ ಏನು ಹೇಳಲು ಸಾಧ್ಯ?
ದಯವಿಟ್ಟು ಕ್ಷಮಿಸಿ, ಇದು ಒಂದೇ ದೇಶಕ್ಕೆ ಸಂಬಂಧ ಪಟ್ಟ ವಿಚಾರವಲ್ಲ.

ಮಹಾತ್ಮರೆಲ್ಲರೂ ಆತ್ಮಾನುಸಾರ ನಡೆಯುವಾಗ ಜೀವನದಲ್ಲಿ ಶಾಂತಿ ಸಮಾಧಾನ, ಅವರವರ ಧರ್ಮ ಕರ್ಮವನ್ನಷ್ಟೇ ಪರಿಗಣಿಸಿ ಸ್ಥಿತಪ್ರಜ್ಞ ಆಗಿರುತ್ತಾರೆ.

ಶ್ರೀ ಕೃಷ್ಣನಿಗೆ ಯಾದವರನ್ನು ಒಂದು ಮಾಡಲಾಗಲಿಲ್ಲ.
ಅಂದಿನ ರಾಜಾಡಳಿತದ ರಾಜಕೀಯ ಶಿಕ್ಷಣ ಕೇವಲ ರಾಜರಿಗಷ್ಟೆ ನೀಡುತ್ತಿದ್ದರು.

ಆದರೆ ಇಂದು ಮಕ್ಕಳಿಗೆಲ್ಲಾ ನೀಡುತ್ತಿರುವ ರಾಜಕೀಯ ಶಿಕ್ಷಣದಿಂದ ಮಕ್ಕಳೆ ಪೋಷಕರನ್ನು ಹಣದಿಂದ ಆಳುವ ಮಟ್ಟಿಗೆ ಬೆಳೆದಿದ್ದಾರೆ. ಒಬ್ಬ ರೈತ ತನ್ನ ಭೂಮಿ ಸೇವೆ ಮಾಡಿ ಬೆಳೆಸಿದ ಮಕ್ಕಳಿಗೆ ರೈತನ ಭೂಮಿ ಆಸ್ತಿ ಎನಿಸದೆ, ಮಾರಿ ಬಂದ ಹಣದಲ್ಲಿ ವ್ಯವಹಾರ ನಡೆಸುತ್ತಾರೆ. ಅಂದರೆ, ಭೂ ತಾಯಿ ಸೇವೆ ಆಗಿಲ್ಲ. ಇನ್ನು ಅದನ್ನು ಸಾತ್ವಿಕತೆಗೆ ಬಳಸಿಕೊಳ್ಳುವ‌ಜ್ಞಾನವಿಲ್ಲ.

ಕೇವಲ ಹಣಕ್ಕಾಗಿ ತಂದೆಯ ಕಸುಬನ್ನು ಮುನ್ನೆಡೆಸದೆ ಬಿಟ್ಟು ಹೊರನೆಡೆದರೆ ಇದು ಧರ್ಮ ಕರ್ಮಕ್ಕೆ ಆದ ಅಪಮಾನ. ಈ ವಿಚಾರಗಳಲ್ಲಿ ಆಧ್ಯಾತ್ಮಿಕ ಸತ್ಯವಡಗಿದೆ.ಹೇಳಿದರೆ ಅರ್ಥ ಮಾಡಿಕೊಳ್ಳಲು ಜನರಿಗೆ ಕಷ್ಟವಾಗಿದೆ. ಸ್ವಾವಲಂಬನೆ ಎಂದರೆ ಬೇರೆಯವರ ಕೈ ಕೆಳಗೆ ದುಡಿಯುವುದಾದರೆ ಇಲ್ಲಿ ಎಲ್ಲಾರೂ ಸ್ವಾವಲಂಬಿಗಳೆ.ಆದರೂ ಸತ್ಯ ಧರ್ಮಕ್ಕೆ ಬೆಲೆಯಿಲ್ಲ.ಶ್ರೀ ಕೃಷ್ಣ ದೇವರನ್ನು ಪೂಜಿಸುವಾಗ ಯೋಗಶಕ್ತಿಯನ್ನು ಗಮನಿಸಬೇಕಿದೆ.

ಭೋಗಕ್ಕೆ ಮರುಳಾಗಿ ರೋಗ ಹೆಚ್ಚಾಗಲು ಕಾರಣವೆ ರಾಜಕೀಯ. ಅವರಿಗೆ ಸಾಧ್ಯವಾಗದ್ದು ನಮಗೆ ಇನ್ನು ಇಂದಿನ ಜನರನ್ನು ಒಂದಾಗಿಸೋದು ಕಷ್ಟ.

ಒಟ್ಟಿನಲ್ಲಿ ಸ್ವಾತಂತ್ರ್ಯ ಕ್ಕಾಗಿ ಜೀವ ಭಯ ಬಿಟ್ಟವರೆಲ್ಲರೂ ಮಹಾತ್ಮರೆ.

ಇಲ್ಲಿ ಆ ಧರ್ಮ ಈ. ಧರ್ಮ ಎಂದಿಲ್ಲ. ಈಗಿನ
ರಾಜಕಾರಣಿಗಳಾಗಲಿ,ಪಕ್ಷಗಳಾಗಲಿ ಒಂದೇ ಧರ್ಮದ ಪರವಾಗಿಲ್ಲ.

ಸಮ್ಮಿಶ್ರ ಜಾತಿ,ಪಂಗಡ,ಧರ್ಮ,ಶಿಕ್ಷಣ, ಪಕ್ಷದ ಭಾರತದ
ಸ್ವಾತಂತ್ರ್ಯ ಯಾರಿಗೆ ಸಿಕ್ಕಿದೆ ಎಂದು ಚಿಂತನೆ ನಡೆಸಿದರೆ ನಾವಿನ್ನೂ ಪರದೇಶದವರೆಡೆಗೆ ನಡೆದಿದ್ದೇವೆ.
ಅದಕ್ಕೆ ದೇಶ ಹೀಗಿದೆ.

ಗಾಂಧಿ ಯವರ ಹೆಸರಲ್ಲಿ ರಾಜಕೀಯ ನಡೆಸಿಕೊಂಡು ಅವರ ತತ್ವ,ಸರಳ ಜೀವನ,ದೇಶಭಕ್ತಿ ಎಲ್ಲಾ ನಾಟಕಕ್ಕೆ
ಸೀಮಿತ ವಾಗಿದೆ ಎನ್ನಬಹುದು.

ದಿನಕ್ಕೊಂದು ಸಾಮಾನ್ಯಜ್ಞಾನ

ಸಿದ್ದಿ, ಪ್ರಸಿದ್ದಿ, ಸುಪ್ರಸಿದ್ದ, ಕುಪ್ರಸಿದ್ದ ಇದರಲ್ಲಿರುವ
ಸಿದ್ದಿ,ಸಿದ್ದಗಳು ಸ್ತ್ರೀ ಪುರುಷರನ್ನು ಎಚ್ಚರಿಸುತ್ತದೆ. ಸಿದ್ದಿ ಪಡೆದ ಪುರುಷ ಯಾವುದರಲ್ಲಿ ಪ್ರಸಿದ್ದನಾಗುವನೆಂಬುದೆ ಮುಖ್ಯ. ಮಂತ್ರ,ತಂತ್ರ,ಯಂತ್ರಗಳ ಸಹಾಯದಿಂದ ಪಡೆದ ಸಿದ್ದಿ ಸ್ವತಂತ್ರ ಜ್ಞಾನದೆಡೆಗೆ ನಡೆದಾಗಲೆ ನಿಜವಾದ ಸಿದ್ದಿ .ಇಲ್ಲವಾದರೆ ಯಾವುದಕ್ಕೂ ಸಿದ್ದನಾಗಿ ನಿಲ್ಲಬಹುದು.

ಅದು,ಭ್ರಷ್ಟಾಚಾರವೋ,ಶಿಷ್ಟಾಚಾರವೋತಿಳಿಯುವುದಕ್ಕೂ
ಸಮಯವಿರುವುದಿಲ್ಲ. ಮಧ್ಯವರ್ತಿಗಳ ಕಥೆ ಇದೇ ಹೆಚ್ಚಾಗಿದೆ.
ಕುಪ್ರಸಿದ್ದರಿಗೆ ಶಕ್ತಿ ಬರಲು ಇದೇ ಕಾರಣ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group