ಚುಟುಕುಗಳು

0
1194

ಸಹಜವಾಗಲಿದೆ ಜೀವನ !!

ಈ ಕೊರೊನಾ ಕಾಲದಲ್ಲಿ..
ನಾವಾಗಬಾರದು..
ಒಬ್ಬರೇ ಏಕಾಂಗಿ!
*ಮನಸ್ಸು* ಮಂಕಾಗಿ!!
ಮೊಬೈಲ್ ಗೆ ಸಿಂಕಾಗಿ!!! 🤳🤳
(sync)

ನಾವಾಗಬೇಕು..
ಸ್ನೇಹದ ಸೊಂಕಾಗಿ!
ಲವಲವಿಕೆಯ ಲಿಂಕಾಗಿ!!(link)
*ಆತ್ಮಸ್ಥೈರ್ಯದ* ಶಂಖವಾಗಿ!!!🐚🐚

ಕಣ್ಣಿಗೆ ಕಾಣದ
ವೈರಸ್ ವೊಂದು
ಕಾಡುತ್ತಿದೆ ಧರೆಯನಿಂದು;
ಹಿಂದೆಂದೂ ಕಂಡು ಕೇಳರಿಯದ
*ಅವಲಕ್ಷಣಗಳಲ್ಲಿ!!*

ಕಣ್ಣಿಗೆ ಕಾಣದ
ದೇವರಿಂದು
ಕಾಪಾಡುತ್ತಿದ್ದಾನೆ ಧರೆಯನಿಂದು;
ಹಿಂದೆಂದೂ ಕಂಡು ಕೇಳರಿಯದ
*ಅವತಾರಗಳಲ್ಲಿ!!*

ಮಾಸ್ಕ್ ಇದ್ದರೆ
ಜೀವಕ್ಕೆ
_ರಿಸ್ಕ್ ಇಲ್ಲ!_ 😷😷

ಪ್ರೇಮವಿದ್ದರೆ
ಜೀವನವು
_ಶುಷ್ಕವಲ್ಲ!!_ 💖💖

ಕಷ್ಟಗಳ ಬಂಡೆಗಳೇ
ಉರುಳಿದರೂ!
ಜಾರಬಾರದು ನಾವು
🙇🏻‍♂️ *ಖಿನ್ನತೆಗೆ* 🙇🏻‍♀️

ಸಾಮಾಜಿಕ ಅಂತರದಲ್ಲೂ
ಸನಿಹವಾಗಬೇಕಿದೆ!
ನಾವು ಮನ-ಮನಗಳ
🎭 *ಭಿನ್ನತೆಗೆ* 🎭

ಮೊನ್ನೆ
ಮೊನ್ನೆಯ
ನಿರುದ್ಯೋಗಿ,
ಇಂದಿನ
ಅಗರ್ಭ
*ಸಿರಿದ್ಯೋಗಿ!*

ಹೂಡಿಕೆ
ಮಾಡಿದ್ದ
ತಾಳ್ಮೆಯನ್ನು
*ನಿಯತ್ತಾಗಿ !*

ಹೃದಯಕ್ಕೆ
ನಾಟುವಂತೆ
ನಾಟಿ
ಮಾಡಿದ್ದಾನೆ
ಸಸಿಯನ್ನು
ಅನವರತ
ಅನ್ನದಾತ;
ಪೂಜಿಸುತ್ತಾ
ಭೂತಾಯಿಯನ್ನು
ಬೆಳೆಯಲು
*ಫಲವತ್ತಾಗಿ!*

ಗುರುವಿನ
ಗೋತ್ರ
ಶಿಷ್ಯನ
ಬಾಳಿನ
ಸೂತ್ರ;
ಸರಿಪಡಿಸುವನು
ಶಿಷ್ಯನ
ಜಾತಕ
ಮನದಲ್ಲಿ
ಮುಚ್ಚಿಟ್ಟುಕೊಂಡು
ಸೂತಕ!
ಮೊಂಬತ್ತಿಯಂತೆ
ಮಾಯವಾಗುವನು
ಶಿಷ್ಯಂದಿರ
*ಉತ್ತಿಷ್ಠತೆಗಾಗಿ!*

ನಿನ್ನೆಯ
ಗದ್ಯವನ್ನೇ
ಬರೆಯುತ್ತಿದ್ದೇನೆ;
ನಾನಿಂದು
ಪದ್ಯವಾಗಿ
ಕೊರೊನಾ
ಕಾಲದಲ್ಲಿ
ಸಕಲರ
*ಸುರಕ್ಷತೆಗಾಗಿ!*

ಸಂತೋಷ ವಾಲಿ ಬಿ ಆರ್ ಪಿ ಬೆಳಗಾವಿ