ನಾವು ಸೇವಿಸುವ ಆಹಾರ ಕೇವಲ ಜೀವರಕ್ಷಕವಾಗಿರದೇ ಆರೋಗ್ಯ, ಆಯುಷ್ಯವನ್ನೂ ನೀಡುವುದಾಗಿರಬೇಕು ಎಂಬ ಉದ್ದೇಶದಿಂದ ಎಲ್ಲರಲ್ಲಿ ಅರಿವು ಮೂಡಿಸಲು ಇಂದು ” ವಿಶ್ವ ಆಹಾರ ಸುರಕ್ಷತಾ ದಿನ ” ಆಚರಿಸಲಾಗುತ್ತಿದೆ.
ಹಿಂದಿನ ವರ್ಷವೇ ಅಂದರೆ ಜೂನ್ 7, 2019 ರಂದು ಆರಂಭಿಸಲ್ಪಟ್ಟ ಈ ದಿನವನ್ನು ನಾಗರಿಕರ ಆರೋಗ್ಯ ರಕ್ಷಣೆ ಆಹಾರದಲ್ಲಿದೆ ಎಂಬುದನ್ನು ತಿಳಿಸಲೋಸುಗ ಆಚರಿಸಲಾಗುತ್ತದೆ. ಡಾ.ಹರ್ಷವರ್ಧನ್ ಎಂಬುವವರು ” ಆಹಾರ ರಕ್ಷಣಾ ಮಿತ್ರ ” ಎಂಬ ಯೋಜನೆ ಆರಂಭಿಸಿದರು.
ವಿಶ್ವ ಆರೋಗ್ಯ ಸಂಸ್ಥೆಯು ಅಕ್ಟೋಬರ್ 16 ರಂದು ವಿಶ್ವ ಆಹಾರ ದಿನ ಆಚರಿಸಲು ಶಿಫಾರಸು ಮಾಡಿದೆ.
ಎಲ್ಲರಿಗೂ ” ವಿಶ್ವ ಆಹಾರ ಸುರಕ್ಷತಾ ದಿನ ” ದ ಶುಭಾಶಯಗಳು.
ಕೊರೋನಾದ ಈ ಸಂಕಟಮಯ ಪರಿಸ್ಥಿತಿಯಲ್ಲಿ ನಾವು ಕೆಲವು ಆಹಾರ ಸುರಕ್ಷತಾ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕಾಗಿದೆ.
* ನಮ್ಮ ದೇಹದ ಪ್ರತಿ ಕಣವೂ ನಮ್ಮ ಆಹಾರದ ಮೇಲೆ ಅವಲಂಬಿಸಿದೆ. ಆರೋಗ್ಯಕರ ಆಹಾರ ಸೇವಿಸಿರಿ.
*ಒಂದು ಸಿಪ್ ದ್ರವಾಹಾರ ಕೂಡ ನಮ್ಮ ಮಿದುಳು, ಹೃದಯ, ಸೊಂಟಗಳ ಆರೋಗ್ಯದಲ್ಲಿ ಪಾತ್ರ ವಹಿಸುತ್ತದೆ
* ರೋಗ ನಿರೋಧಕವೆನಿಸುವ ಆಹಾರ ಸೇವಿಸಿರಿ
* ಪ್ರತಿದಿನ ರಾತ್ರಿ ಅರಿಷಿಣ ಹಾಲು ರಕ್ಷಕ
* ಬೆಳಿಗ್ಗೆ ಮೊಳಕೆ ಕಾಳು, ಉತ್ತಮ ಉಪಾಹಾರ, ಮಧ್ಯಾಹ್ನ ಉತ್ತಮ ಭೋಜನ, ರಾತ್ರಿ ಮಿತ ಭೋಜನ ಆರೋಗ್ಯಕ್ಕೆ ಸಹಕಾರಿ.
* ಹೊರಗಿನ ತಿಂಡಿ ಅಂದರೆ ಪಾನಿಪುರಿ, ಗಾಡಿ ಅಂಗಡಿಯ ತಿನಿಸುಗಳು, ಬೇಕರಿ ಪದಾರ್ಥ, ಹೊಟೇಲ್ ತಿನಿಸುಗಳನ್ನು ವರ್ಜಿಸಿ
* ರಾತ್ರಿ ಒಂದು ಹೊತ್ತು ಹಸಿ ಪದಾರ್ಥ ತಿಂದರೆ ಅತ್ಯುತ್ತಮ
ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದು ಒಳ್ಳೆಯದು