ಜೈನಧರ್ಮದ ವಿಶೇಷ ದಶಲಕ್ಷಣಪರ್ವ.

Must Read

ಸರ್ವಜನ ಹಿತಾಯ ಸರ್ವಜನ ಸುಖಾಯ ಎಂಬ ದ್ಯೇಯ ವಾಕ್ಯದಲ್ಲಿ ಜೀವ ಪ್ರವರ ಮಹತ್ವವನ್ನು ಜೈನಧರ್ಮ ಸಾರುತ್ತದೆ. ಇಂತಹ ಸಂದರ್ಭದಲ್ಲಿ ಈ ಭಾದ್ರಪದ ಮಾಸದ ಪಂಚಮಿಯಿಂದ ಅನಂತ ಚತುರ್ದಶಿಯವರೆಗೆ ಜೈನಧರ್ಮವಿಶೇಷ ಆಚರಣೆ ನಡೆಯುತ್ತದೆ. ಅದು ದಶಲಕ್ಷಣ ಪರ್ವ.

ಇಂದು ಮೊದಲ ಧರ್ಮ ಉತ್ತಮ ಕ್ಷಮಾ.(ಸ್ವಯಂಭುವಾ). ಕ್ಷಮೆಯು ಎಲ್ಲ ಜೀವಿಗಳಿಗೆ ಹಿತಕಾರಿ,ಕ್ಷಮೆಯು ಪಾಪ ಪಂಕವಿದುರಿ,ಕೋಪ ತಾಪ ಹಾರಿ, ಕ್ಷಮೆ ಕೈವಲ್ಯ ನಿಧಿಗೆ ದಾರಿ.
ದಾನ ಮತ್ತು ಕಲ್ಯಾಣ ಕಾರ್ಯಗಳಿಂದ ಸ್ವರ್ಗ, ಮೋಕ್ಷ ಲಭಿಸುತ್ತದೆ. ಸಂಸಾರ ಸಾಗರ ದಾಟಿಸುವಂಥದು, ಸಕಲ ಜೀವಗಳಿಗೆ ಸುಖ ಕೊಡುವಂಥದು, ತಪಸ್ಸನ್ನು ವೃದ್ದಿಪಡಿಸುವಂತದು ಈ ಕ್ಷಮೆಯು. ಇದು ಜೈನ ಧರ್ಮದ ತಿರುಳು ಆಗಿದೆ.

“ಓಂ ಹ್ರೀಮ್ ಉತ್ತಮ ಕ್ಷಮಾ ಧರ್ಮಾಂಗಾಯ ನಮ: ಜಲ ಗಂಧಾದಿ ನಿರೂಪಾಮಿತಿ ಸ್ವಾಹಾ”

ಆದ್ದರಿಂದ, ಜೈನರಿಗೆ ಕ್ಷಮಾಪನೆ ಕೇಳುವ ದಿನ
ನಾನು ಎಲ್ಲಾ ಜೀವಿಗಳಲ್ಲಿ ಕ್ಷಮೆಯಾಚನೆ ಮಾಡುವೆನು,
ಎಲ್ಲಾ ಜೀವಿಗಳು ನನ್ನ ಮೇಲೆ ಕ್ಷಮೆ ಮಾಡಲಿ,
ನನಗೆ ಎಲ್ಲಾ ಜೀವಿಗಳಲ್ಲಿ ಮೈತ್ರಿ ಭಾವ ಉಂಟಾಗಲಿ,
ನನಗೆ ಯಾವ ಜೀವಿಗಳ ಮೇಲು ವೈರಭಾವವಿಲ್ಲ ,
ನನಗೆ ತಿಳಿದೂ ತಿಳೆಯದೆಯೋ ನನ್ನಿಂದ ಪ್ರಮಾದವಾಗಿದ್ದರೆ ನನ್ನನ್ನು ಕ್ಷಮಿಸಿ.

ಮಿಚ್ಚಾಮಿ ದುಕುಡಮ್.
ಎಲ್ಲರಿಗೂ ಜೈ ಜೀನೇಂದ್ರಗಳು.

ಲಲಿತಾ ಮ ಕ್ಯಾಸನ್ನವರ
ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ. ಹಲಗಾ,ಬೆಳಗಾವಿ.

1 COMMENT

Comments are closed.

Latest News

ಬಿಹಾರದಲ್ಲಿ ಇಂಡಿ ಮೈತ್ರಿ ಕೂಟಕ್ಕೆ ಅಧಿಕಾರ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರು : ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಆರ್ ಜೆಡಿ‌ ಮೈತ್ರಿಕೂಟ ಇಂಡಿ ಅಧಿಕಾರಕ್ಕೆ ಬರಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ‌ಸಚಿವರಾದ...

More Articles Like This

error: Content is protected !!
Join WhatsApp Group