ಬೆಂಗಳೂರು – ಡ್ರಗ್ಸ್ ಪ್ರಕರಣದಲ್ಲಿ ಬಂಧಿತಳಾಗಿ ವಿಚಾರಣೆ ಎದುರಿಸುತ್ತಿರುವ ನಟಿ ರಾಗಿಣಿ ದ್ವಿವೇದಿ ಮೂತ್ರ ಪರೀಕ್ಷೆಗೆಂದು ಕೇಳಲಾದ ಮೂತ್ರದಲ್ಲಿ ನೀರು ಕೂಡಿಸಿ ತನಿಖೆಯ ದಾರಿ ತಪ್ಪಿಸಲು ಯತ್ನಿಸಿದ್ದಾಳೆಂದು ಸಿಸಿಬಿ ಅಧಿಕಾರಿಗಳು ಆರೋಪಿಸಿದ್ದಾರೆ.
ಸೆ. 4 ರಂದು ಅರೆಸ್ಟ್ ಆಗಿದ್ದ ರಾಗಿಣಿಯ ಡೋಪಿಂಗ್ ಟೆಸ್ಟ್ ಮಾಡಲು ಮೂತ್ರ ಹಾಗೂ ಕೂದಲ ಪರೀಕ್ಷೆ ಮಾಡಬೇಕಾಗಿತ್ತು. ಮಲ್ಲೇಶ್ವರಂ ನ ಕೆ ಸಿ ಆಸ್ಪತ್ರೆಯಲ್ಲಿ ಪರೀಕ್ಷೆ ಗಾಗಿ ಮೂತ್ರದ ಸ್ಯಾಂಪಲ್ ತರಲು ಹೇಳಿದರೆ ಅದರಲ್ಲಿ ನೀರು ಮಿಕ್ಸ್ ಮಾಡಿ ತಂದಿದ್ದಾಳೆ ಎಂಬುದಾಗಿ ಆಸ್ಪತ್ರೆ ಯ ಮೂಲಗಳು ತಿಳಿಸಿವೆ.
ಮೂತ್ರದಲ್ಲಿ ನೀರು ಕೂಡಿಸುವುದರಿಂದ ಅದರ ಶಾಖ ದೇಹದ ಶಾಖಕ್ಕಿಂತಲೂ ಕಡಿಮೆಯಾಗುತ್ತದೆ ಇದರಿಂದ ತಕ್ಷಣವೇ ಗೊತ್ತಾಗುತ್ತದೆ. ವೈದ್ಯರನ್ನು ಮೂರ್ಖರನ್ನಾಗಿಸಲು ಹೋಗಿ ತಾನೇ ಮೂರ್ಖಳಾಗಿದ್ದಾಳೆ ರಾಗಿಣಿ. ಅಮೇಲೆ ಅವಳಿಗೆ ಸಾಕಷ್ಟು ನೀರು ಕುಡಿಯಲು ಹೇಳಿ ಮತ್ತೊಮ್ಮೆ ಮೂತ್ರ ತರಲು ಹೇಳಿದರು ಅದರಲ್ಲಿ ನೀರು ಮಿಕ್ಸ್ ಆಗಿಲ್ಲ ಎಂಬುದನ್ನು ತನಿಖಾಧಿಕಾರಿಗಳು ಖಚಿತಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಮೂತ್ರ ಪರೀಕ್ಷೆಯಿಂದ ಕಳೆದ ಕೆಲವು ದಿನಗಳಿಂದ ಆರೋಪಿಗಳು ಡ್ರಗ್ಸ್ ಸೇವಿಸಿರುವ ಬಗ್ಗೆ ಖಚಿತ ಮಾಹಿತಿ ಸಿಗುತ್ತದೆ ಆದರೆ ರಾಗಿಣಿ ಈ ರೀತಿ ಮಾಡಿದ್ದು ನಾಚಿಕೆಗೇಡು ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದು ಇದೇ ಕಾರಣ ಮುಂದಿಟ್ಟು ಅವಳ ಕಸ್ಟಡಿ ಅವಧಿ ಹೆಚ್ಚಳಕ್ಕೆ ಮನವಿ ಮಾಡಿದ್ದರಿಂದ ಕೋರ್ಟ್ ಮತ್ತೆ ಮೂರು ದಿನಗಳ ಬಂಧನದ ಅವಧಿ ವಿಸ್ತರಿಸಿ ಆದೇಶ ಹೊರಡಿಸಿದೆ.