spot_img
spot_img

ದಿಟ್ಟ ಆತ್ಮದ ಪತ್ರಕರ್ತ ರವಿ ಬೆಳಗೆರೆ ಇನ್ನಿಲ್ಲ

Must Read

spot_img
- Advertisement -

ಹಾಯ್ ಬೆಂಗಳೂರು ಎಂಬ ಟಾಬ್ಲಾಯ್ಡ್ ಪತ್ರಿಕೆಯ ಮೂಲಕ ಮನೆಮಾತಾಗಿದ್ದ ಪತ್ರಕರ್ತ ರವಿ ಬೆಳಗೆರೆ ನಿನ್ನೆ ರಾತ್ರಿ ನಿಧನರಾಗಿದ್ದಾರೆ.

೬೨ ವರ್ಷ ವಯಸ್ಸಿನ ರವಿ ಬೆಳಗೆರೆ ಅಸ್ವಸ್ಥತೆಯಲ್ಲೂ ಬರೆಯುವ ಕೆಲಸ ಮಾಡುತ್ತಲೇ ಹೃದಯಾಘಾತಕ್ಕೊಳಗಾಗಿದ್ದು ವಿಪರ್ಯಾಸ. ತಮ್ಮ ನೇರ, ದಿಟ್ಟ ನಿಲುವು ಬರವಣಿಗೆಗಳಿಂದ ರವಿ ನಾಡಿನ ತುಂಬ ಅಪಾರ ಓದುಗ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ತಮ್ಮ ಖಾಸ್ ಬಾತ್ ಎಂಬ ಅಂಕಣದಿಂದ ಓದುಗರ ಮನದೊಳಗೆ ಹೊಕ್ಕು ಬರೆಯುತ್ತಿದ್ದ ರವಿ ಬೆಳಗೆರೆ ಬದುಕಿನ ವಾಸ್ತವಗಳನ್ನು ಮನಮುಟ್ಟುವಂತೆ ಚಿತ್ರಿಸುತ್ತಿದ್ದರು.

ಯುವಕನಾಗಿದ್ದಾಗಿನಿಂದಲೂ ಪತ್ರಿಕಾ ರಂಗದಲ್ಲಿ ಅತ್ಯಂತ ಆಸಕ್ತಿ ರವಿ ಹೊಂದಿದ್ದರು. ಹಲವು ವರ್ಷಗಳ ಹಿಂದೆ ಕರ್ಮವೀರ ವಾರಪತ್ರಿಕೆಯಲ್ಲಿ ‘ ಪಾಪಿಗಳ ಲೋಕದಲ್ಲಿ ‘ ಎಂಬ ಸರಣಿ ಬರಹ ಆರಂಭಿಸಿದ್ದು ಭೂಗತಲೋಕದ ಘಟಾನುಘಟಿಗಳನ್ನು ನೇರವಾಗಿ ಸಂದರ್ಶಿಸಿ ಅವರ ಜೀವನದ ಅನುಭವಗಳನ್ನು ತಮ್ಮ ಕಾದಂಬರಿಯಲ್ಲಿ ಚಿತ್ರಿಸಿದ್ದರು.

- Advertisement -

ಭೀಮಾತೀರದ ಹಂತಕರು, ಡಿ ಕಂಪನಿಯಂಥ ಕಾದಂಬರಿಗಳನ್ನೂ ಅವರು ಬರೆದು ಪಾತಕ ಲೋಕದ ಭೀಕರತೆಯನ್ನು ತೆರೆದಿಟ್ಟಿದ್ದಾರೆ.

ರವಿಯವರು ಬರೆದ ಅನೇಕ ಕಾದಂಬರಿಗಳು ಹಿಟ್ ಎನಿಸಿಕೊಂಡಿವೆ. ಹಿಮಾಲಯನ್ ಬ್ಲಂಡರ್ ಎಂಬ ಕಾದಂಬರಿಯಂತೂ ನಿವೃತ್ತ ಸೇನಾಧಿಕಾರಿಯೊಬ್ಬರ ಅನುಭವಗಳ ಅನುವಾದ ರೋಮಾಂಚಕ ಕಾದಂಬರಿ.

ರವಿ ಬೆಳಗೆರೆ ಕೆಲವೊಮ್ಮೆ ಯುದ್ಧಗ್ರಸ್ತ ಪ್ರದೇಶಗಳಿಗೆ ಸ್ವತಃ ಭೇಟಿ ಕೊಟ್ಟು ಪುಸ್ತಕ ಬರೆದದ್ದೂ ಇದೆ. ಪಾಕಿಸ್ತಾನ, ಅಫಘಾನಿಸ್ತಾನದಂಥ ಸೂಕ್ಷ್ಮ ಪ್ರದೇಶಗಳಿಗೂ ಭೇಟಿಯಿತ್ತು ಯುದ್ಧದ ಸನ್ನಿವೇಶಗಳ ವರದಿ ಮಾಡಿದ್ದರು.

- Advertisement -

ಭಾರತದ ಬಿಹಾರ ಎಂಬ ರಾಜ್ಯದಲ್ಲಿನ ಅವ್ಯವಸ್ಥೆ, ದುರಾಡಳಿತ, ಅಲ್ಲಿನ ಗೂಂಡಾಗಿರಿಯ ಬಗ್ಗೆ ರವಿಯವರು ಈ ಹಿಂದೆ ಬರೆದಿದ್ದು ಅಲ್ಲಿನ ವಾಸ್ತವ ಪರಿಸ್ಥಿತಿಯನ್ನು ತೆರೆದಿಟ್ಟಿತ್ತು.

ಪ್ರೀತಿ ಪ್ರೇಮದ ಬಗ್ಗೆಯೂ ರವಿ ತುಂಬಾ ಭಾವುಕರಾಗಿ ಬರೆಯುತ್ತಿದ್ದರು. ‘ಹೇಳಿ ಹೋಗು ಕಾರಣ’ ಎಂಬಂಥ ಕಾದಂಬರಿಯಿಂದ ಅವರು ಪ್ರೇಮಲೋಕದ ಪರಿಚಯ ಮಾಡಿಸಿದ್ದರು. ಲವಲವಿಕೆ ಎಂಬ ಅವರ ಅಂಕಣ ಬರಹಗಳು ಹರಯದ ಮನಗಳಲ್ಲಿ ಬಿಸಿ ಹುಟ್ಟಿಸಿರುವುದಂತೂ ಸುಳ್ಳಲ್ಲ.

ಹಾಗೆಯೇ ‘ಓ ಮನಸೇ…’ ಎಂಬುದು ರವಿಯವರ ಇನ್ನೊಂದು ಪತ್ರಿಕೆ. ಮನಸಿನ ಆಳವನ್ನು ಪರಿಚಯಿಸುವಂತಿದ್ದ ಲೇಖನಗಳು, ಆಪ್ತ ಸಲಹೆಗಳು ಈ ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಿದ್ದವು.
೧೯೫೮ ಮಾರ್ಚ್ ೧೫ ರಂದು ಬಳ್ಳಾರಿಯಲ್ಲಿ ಜನಿಸಿದ ರವಿ ಬೆಳಗೆರೆ ಬೆಂಗಳೂರಿನಲ್ಲಿ ನೆಲೆಸಿ ಪ್ರಾರ್ಥನಾ ಶಾಲೆ ಎಂಬ ಶಾಲೆಯೊಂದನ್ನು ಆರಂಭಿಸಿ ಹಲವರಿಗೆ ಉಚಿತ ಶಿಕ್ಷಣವನ್ನೂ ನೀಡುತ್ತಿದ್ದರು.

ಹಾಯ್ ಬೆಂಗಳೂರು ಎಂಬುದು ಅವರ ಟಾಬ್ಲಾಯ್ಡ್ ಪತ್ರಿಕೆ. ಅದರಿಂದಲೇ ರಾಜ್ಯದಾದ್ಯಂತ ರವಿ ಸುಪ್ರಸಿದ್ಧರಾಗಿದ್ದರು. ಅವರ ಕಾದಂಬರಿಗಳನ್ನು ಓದುಗರು ಪ್ರಕಟಣೆಯ ಪೂರ್ವದಲ್ಲಿಯೇ ಬುಕ್ ಮಾಡಿ ಖರೀದಿಸಿ ಓದುತ್ತಿದ್ದರೆಂದರೆ ಅವರ ಜನಪ್ರಿಯತೆ ಅರ್ಥವಾಗುವಂಥದ್ದು.

ಪತ್ರಕರ್ತರಿಗೆ ಸದಾ ದಾರಿದೀಪವಾಗಿದ್ದ ರವಿ ಬೆಳಗೆರೆಯವರ ನಿಧನಕ್ಕೆ ನಮ್ಮ Times of ಕರ್ನಾಟಕ ಬಳಗದಿಂದ ಹೃದಯಪೂರ್ವಕ ಸಂತಾಪ ವ್ಯಕ್ತಪಡಿಸುತ್ತೇವೆ

- Advertisement -
- Advertisement -

Latest News

ಕವಿರತ್ನ ಕಾಳಿದಾಸ ಪ್ರಶಸ್ತಿ ಪುರಸ್ಕೃತ ಯಲ್ಲಾಲಿಂಗ ವಾಳದಗೆ ಸತ್ಕಾರ

ಮೂಡಲಗಿ: ತಾಲೂಕಿನ ಶಿವಾಪುರ(ಹ) ಗ್ರಾಮದ ಯುವ ಮುಖಂಡ ಮತ್ತು ಸಮಾಜ ಸೇವಕ ಯಲ್ಲಾಲಿಂಗ ವಾಳದ ಗೆ ಕವಿರತ್ನ ಕಾಳಿದಾಸ ಪ್ರಶಸ್ತಿ ಲಭಿಸಿದೆ. ಇತ್ತೀಚೆಗೆ ರಾಮದುರ್ಗ ತಾಲೂಕಿನ ಸುರೇಬಾನ...
- Advertisement -

More Articles Like This

- Advertisement -
close
error: Content is protected !!
Join WhatsApp Group