ನವರಾತ್ರಿಯ ಮೂರನೇ ದಿನದ ಅವತಾರ; ಚಂದ್ರ ಘಂಟಾ ದೇವಿ

Must Read

ನವರಾತ್ರಿಯ ಮೂರನೇ ದಿನದ ಅವತಾರ
ಚಂದ್ರ ಘಂಟಾ ದೇವಿ

ವಧುವಿನಂದದಿ ವಸ್ತ್ರ ಧರಿಸಿದ
ಸುಧೆಯು ಭಕುತರ ತಾಯಿ ಪಾರ್ವತಿ
ನಿಧಿಯು ಶಿವನಿಗೆ ಚಂದ್ರಘಂಟಾ ದೇವಿಗೊಂದಿಪೆನು/
ನಿದಿರೆಯಿಲ್ಲದ ಹಸಿವು ಕಾಣದ
ಮಧುರ ಸಂಗಮಗೊಳುವ ತವಕದಿ
ಮದುವೆ ಕನ್ಯೆಯು ಚಂದ್ರಘಂಟಾ ದೇವಿಗೊಂದಿಪೆನು//೧

ನೈಜ ರೂಪದಿ ಹರನು ಬರುತಿರೆ
ರಾಜಮಾತೆಯು ಮೂರ್ಚೆ ಹೋಗಲು
ರಾಜಪುತ್ರನ ವೇಷದಿಂದಲಿ ಶಿವನು ಕಾಣಿಸಲು/
ಜಾಜಿ ಮಲ್ಲಿಗೆ ಹೂವ ಮುಡಿಯುತ
ತೇಜ‌ ರೂಪದಿ ದೇವಿ ಪಾರ್ವತಿ
ರಾಜವೈಭವದಿಂದ ಮದುವೆಯ ಮಾಡಿಕೊಂಡಿರಲು/೨

ಸುತ್ತ ಕಾಡುವ ದುಷ್ಟರಳಿಸಲು
ಹತ್ತು ಕರಗಳು ಶಸ್ತ್ರ ಸಜ್ಜಿತ
ಮತ್ತೆ ವರವನು ಬೇಡುತಿರುವೆವು ಹರಸು ಚಾಮುಂಡಿ/
ನತ್ತು ಧರಿಸಿಹ ಸಿಂಹ ವಾಹನಿ
ಕುತ್ತು ಬರದಿರಲೆಮ್ಮ ಪೂಜೆಗೆ
ಹೊತ್ತು ಹೊತ್ತಿಗೆ ಚಂದ್ರಘಂಟಾ ದೇವಿಗೊಂದಿಪೆನು//೩


ಶ್ರೀಮತಿ ಬಸಮ್ಮ ಏಗನಗೌಡ್ರ ಸಹ ಶಿಕ್ಷಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚವಢಾಳ ತಾಲೂಕು ಸವಣೂರು ಜಿಲ್ಲೆ ಹಾವೇರಿ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group