ನ.24 ರಂದು ವಿಜಯದಾಸರ ಆರಾಧಾನಾ ಮಹೋತ್ಸವ ಮತ್ತು ಗೌರವ ಡಾಕ್ಟರೇಟ್ ಪುರಸ್ಕೃತ ಸಾಧಕರಿಗೆ ಅಭಿನಂದನೆ

Must Read

ಆಯೋಜನೆ : ಶ್ರೀನಿವಾಸ ಉತ್ಸವ ಬಳಗ

ದಿನಾಂಕ 24.11.2020 ಮಂಗಳವಾರದಂದು ಸಂಜೆ 5.00ಕ್ಕೆ

ಸ್ಥಳ : ಬೆಂಗಳೂರು ಬಸವನಗುಡಿ ಶ್ರೀ ದಿಗ್ವಿಜಯ ಲಕ್ಷ್ಮೀನರಸಿಂಹ ದೇವಸ್ಥಾನದ ಆವರಣದಲ್ಲಿ ಸ್ಥಾಪಿಸಿರುವ ದಾಸಸಾಹಿತ್ಯ ಪಿತಾಮಹಾ ಶ್ರೀಪುರಂದರದಾಸರ ಬೃಹತ್ ಏಕಶಿಲಾ ಪ್ರತಿಮೆಯ ಸನ್ನಿಧಾನ

ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನ ಶ್ರೀಮದ್ ಉತ್ತರಾದಿಮಠ ಮತ್ತು ಶ್ರೀನಿವಾಸ ಉತ್ಸವ ಬಳಗ (ದಾಸಸಾಹಿತ್ಯ ಪ್ರಚಾರ ಮಾಧ್ಯಮ) ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀಮದುತ್ತರಾದಿ ಮಠದ ಪರಮಪೂಜ್ಯ ಶ್ರೀಶ್ರೀ ಸತ್ಯಾತ್ಮತೀರ್ಥ ಶ್ರೀಪಾದರ ಪರಮಾನುಗ್ರಹದಿಂದ ಬೆಂಗಳೂರು ಬಸವನಗುಡಿ ಶ್ರೀ ದಿಗ್ವಿಜಯ ಲಕ್ಷ್ಮೀನರಸಿಂಹ ದೇವಸ್ಥಾನದ ಆವರಣದಲ್ಲಿ ಸ್ಥಾಪಿಸಿರುವ ದಾಸಸಾಹಿತ್ಯ ಪಿತಾಮಹಾ ಶ್ರೀಪುರಂದರದಾಸರ ಬೃಹತ್ ಏಕಶಿಲಾ ಪ್ರತಿಮೆಯ ಸನ್ನಿಧಾನದಲ್ಲಿ ಶ್ರೀ ವಿಜಯದಾಸರ ಆರಾಧಾನಾ ಮಹೋತ್ಸವ ಮತ್ತು ಗೌರವ ಡಾಕ್ಟರೇಟ್ ಪುರಸ್ಕೃತ ಸಾಧಕರಿಗೆ ಅಭಿನಂದನಾ ಸಮಾರಂಭವನ್ನು ಪ್ರಣವ ಮೀಡಿಯಾ ಹೌಸ್ ಮತ್ತು ದಾಸ ಸೌರಭ , ಕಲಬುರ್ಗಿ ಸಹಯೋಗದಲ್ಲಿ ದಿನಾಂಕ 24 ರಂದು ಸಂಜೆ 5.00ಕ್ಕೆ ಆಯೋಜಿಸಲಾಗಿದೆ. ಸಂಜೆ 5.00 ರಿಂದ 5.45- ಶ್ರೀ ವಿಜಯದಾಸರ ಮಹಿಮೆ ಕುರಿತು – ಮ.ಶಾ.ಸಂ. ಭೀಮಸೇನಾಚಾರ್ಯ ಅತನೂರು ರವರಿಂದ ಉಪನ್ಯಾಸ ; 5.45- 6.30 – ದಾಸರ ಪದಗಳ ಗಾಯನ- ವಿದುಷಿ ಶ್ರೀಮತಿ ಶುಭಾಸಂತೋಷ್ ಮತ್ತು ತಂಡದಿಂದ ನಡೆಯಲಿದೆ.

6.30- 7.30 ಅಭಿನಂದನಾ ಸಮಾರಂಭದ ಉದ್ಘಾಟನೆಯನ್ನು ಪರಮಪೂಜ್ಯ ಶ್ರೀ ಸುವಿದ್ಯೇಂದ್ರತೀರ್ಥ ಶ್ರೀಪಾದರು ನೆರವೇರಿಸಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.

ಬಿ.ಬಿ.ಎಂ.ಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಮತ್ತು ಜಯತೀರ್ಥ ವಿದ್ಯಾಪೀಠದ ಪ್ರಾಂಶುಪಾಲ ಡಾ. ಸತ್ಯಧ್ಯಾನಾಚಾರ್ಯ ಕಟ್ಟಿ ವಿಶೇಷ ಆಹ್ವಾನಿತರಾಗಿ ಭಾಗವಹಿಸುವ ಕಾರ್ಯಕ್ರಮದಲ್ಲಿ ಗಾಯನ ಸಮಾಜ ಅಧ್ಯಕ್ಷ ಡಾ|| ಎಂ.ಆರ್.ವಿ ಪ್ರಸಾದ್ ಹಾಗೂ ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಗೌರವ ಡಾಕ್ಟರೇಟ್‍ಗೆ ಭಾಜನರಾದ ಸಾಧಕರಾದ ಶ್ರೀನಿವಾಸ ಉತ್ಸವ ಬಳಗದ ಸಂಸ್ಥಾಪಕ ಟಿ.ವಾದಿರಾಜ್ , ಆಧ್ಯಾತ್ಮ ಚಿಂತಕ ಶ್ರೀ ಕಡೂರು ಶ್ರೀಧರಾಚಾರ್ಯ ಮತ್ತು ಖ್ಯಾತ ಜ್ಯೋತಿಷಿ ಕೆ.ಮುರಳಿಧರ ಭಟ್ ರವರಿಗೆ ಅಭಿನಂದಿಸಲಾಗುವುದು.

ಕೆ.ಆರ್.ಪುರಂ ಹರಿದಾಸ ಸಂಘದ ಅಧ್ಯಕ್ಷ ಡಾ. ಹ.ರಾ.ನಾಗಾರಾಜಾಚಾರ್ಯ ಅಭಿನಂದನ ನುಡಿಗಳನ್ನಾಡುವರು ಎಂದು ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿಲಾಗಿದೆ.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group