ಪುಸ್ತಕ – ಚಂದ್ರ ಪಲ್ಲವಿ
ಲೇಖಕರು – ಪ್ರಭಾಕರ ಬಿಳ್ಳೂರ
ಪುಟಗಳು – ೯೬
ದರ – ೯೦ ರೂ.
ಪ್ರಕಾಶನ – ಪೂಜ್ಯ ಮಾತಾಜಿ ಪ್ರಕಾಶನ, ೧೬೬೮/ಬಿ, ಹೊಳಿಕಟ್ಟಿ ಗಲ್ಲಿ, ಅಥಣಿ
ದಿ. ಪ್ರಭಾಕರ ಬಿಳ್ಳೂರ ಅವರ ಪುತ್ರ್ರರಾದ ಶ್ರೀ. ದೀಪಕ ಬಿಳ್ಳೂರ, ಅವರು ಉತ್ಸಾಹದಿಂದ ಲವಲವಿಕೆಯಿಂದ ಈ ಪುಸ್ತಕವನ್ನು ಪೂಜ್ಯ ಮಾತಾಜಿ ಪ್ರಕಾಶನ ಅಥಣಿಯಿಂದ ಪ್ರಕಟಿಸಿದ್ದಾರೆ.
ಪ್ರಸಿದ್ದ ವಿಮರ್ಶಕ ಕೀರ್ತಿನಾಥ ಕುರ್ತಕೋಟಿ ಹೇಳುವಂತೆ. ಉತ್ತರ ಕರ್ನಾಟಕದಲ್ಲಿಯ ನಾಟಕಗಳಲ್ಲಿ ಕನ್ನಡ, ಲಯ, ಹೃದ್ಯತೆ ಮಾರ್ಮಿಕವಾದ ಶೈಲಿಗಳು ಆದರ್ಶ ಪ್ರಾಯವಾಗಿದೆ.
ಶ್ರೀ. ಪ್ರಭಾಕರ ಬಿಳ್ಳೂರ ಅವರ ನಾಟಕದಲ್ಲಿ ಈ ಮೂರು ಕಾಣುತ್ತೇವೆ. ವಾಸ್ತವತೆಯ ಗಟ್ಟಿ ನೆಲೆಯಲ್ಲಿ ಇಂದಿನ ಸಾಮಾಜಿಕ ಜೀವನದ ನೈಜ ಚಿತ್ರಣ ನೀಡುತ್ತದೆ. ‘ಪ್ರತಿಭೆ ಕಣ್ ತೆರೆದರೆ ಬದುಕು ಸಾರ್ಥಕವಾಗುತ್ತದೆ. ಸಾಹಿತ್ಯದ ಪರಮೋದ್ದೇಶವೇ ಇದು. ಕುರ್ತಕೋಟಿಯವರ ಅಭಿಪ್ರಾಯ ನಾಟಕಕರ್ತರಿಗೆ ಅನ್ವಯಿಸುತ್ತದೆ ಎಂದು ಶ್ರೀ. ಆಗುಂಬೆ ನಟರಾಜ ಸಾಹಿತಿಗಳು ವಿಜಯನಗರ, ಬೆಂಗಳೂರು ಚಂದ್ರ ಪಲ್ಲವಿಗೆ ಸಾಹಿತಿ ಸುನಂದಾ ಎಮ್ಮಿ ಯವರು ಮುನ್ನುಡಿಯ ತೋರಣ ಕಟ್ಟಿದ್ದಾರೆ.
ಚಂದ್ರಪಲ್ಲವಿ ಒಂದು ಸುಂದರ ಸಾಮಾಜಿಕ ನಾಟಕ ಇದರಲ್ಲಿ ಹತ್ತು ಪ್ರಮುಖ ಪಾತ್ರಗಳಿವೆ. ಚಂದ್ರೇಶ ಕಥಾನಾಯಕ ರಶ್ಮೀ ಚಂದ್ರೇಶನ ಪತ್ನಿ ಪಲ್ಲವಿ, ಚಂದ್ರೇಶನ ಪ್ರೇಯಸಿ ಇಂದ್ರೇಶ ಚಂದ್ರೇಶನ ತಂದೆ, ಕಸ್ತೂರ ನಾಯಕ ರಶ್ಮಿಯ ಸಾಕು ತಂದೆ, ಶಶಾಂಕ ಅನಾಥ ಹುಡುಗ ದುರ್ಗ ಗೌಳಿ ಚಂದೂರ ಚಂದ್ರ್ಯಾ ಕಂಪೌಂಡರ ಸೋಹನಲಾಲ ದುರ್ಗಿಯ ತಂದೆ ಸಿದ್ದಪ್ಪಜ್ಜ ಇವು ಪ್ರಮುಖ ಪಾತ್ರದಲ್ಲಿ ಬಂದರೆ ಕಿರು ಪಾತ್ರದಲ್ಲಿ ಡಾಕ್ಟರ ಆಳು ಪಾರ್ವತಮ್ಮ ಪೇಪರ ಹುಡುಗರು ನಾಟಕಕ್ಕೆ ಜೀವತುಂಬಿದ್ದಾರೆ.
ಚಂದ್ರೇಶ ಪಲ್ಲವಿಯವರ ಪ್ರೇಮಸಲ್ಲಾಪ, ದೋಣಿ ದುರಂತ ಚಂದ್ರೇಶನವಿರಹ ಮಧ್ಯ ದುರ್ಗಿ ಶಶಾಂಕನ ಚರ್ಚೆ ಹಾಡುಗಳು ಓದುಗನನ್ನು ಆಳಕ್ಕೆ ಕರೆದೊಯ್ಯುತ್ತವೆ. ರಶ್ಮಿ ಮತ್ತು ಚಂದ್ರಶೇಖರ ಪ್ರೇಮಾಲಾಪ ಅವರ ಮದುವೆ ಸಿದ್ದಪ್ಪಜ್ಜ ಮತ್ತು ಶಶಾಂಕನ ಹೊಲದಲ್ಲಿಯ ಸಂಭಾಷಣೆ , ದುರ್ಗಿ ಚಂದ್ರೇಶನ ವಾಗ್ವಾದ ಚರ್ಚೆಗಳು ರಶ್ಮಿಯ ಜಾಣತನ ಪಾರ್ವತಮ್ಮನ ಹತಾಶೆ ಕೋದಂಡರಾಯ ಕಸ್ತೂರಿ ನಾಯಕನಾಗಿ ಬದಲಾದದ್ದು ಎಲ್ಲವೂ ಓದುಗರನ್ನು ಮಂತ್ರ ಮುಗ್ದರನ್ನಾಗಿಸುತ್ತದೆ.
ರಶ್ಮಿ ಪಲ್ಲವಿಯ ಪಾರ್ವತಮ್ಮನ ಮಕ್ಕಳು ನಿಷ್ಠಾವಂತ ಪೋಲಿಸ ಅಧಿಕಾರಿಯ ಪಾತ್ರ ಪ್ರಯತ್ನ ನಿಸ್ವಾರ್ಥ ಕರ್ತವ್ಯ ಪ್ರಜ್ಞೆ ಅವರ ಸಾವಿನ ದೃಶ್ಯ ಮನಕಲುಕುತ್ತದೆ. ದುರ್ಗಿ ಶಶಾಂಕನನ್ನು ಒಪ್ಪಿಸುವ ಪ್ರಸಂಗ, ಹತಾಶಳಾಗಿ ಪಲ್ಲವಿ ವಿಷ ಕುಡಿದದ್ದು, ಡಾಕ್ಟರ ಪ್ರಯತ್ನ ವಿಫಲವಾಗಿದ್ದು, ರಶ್ಮಿ ಪಲ್ಲವಿಯ ಅಂತ್ಯ ಸಂಸ್ಕಾರದಲ್ಲಿ ತನ್ನ ಕರ್ತವ್ಯ ಪ್ರಜ್ಞೆ ಮೆರೆದಿದ್ದು ತುಂಬಾ ಸುಂದರವಾಗಿ ಮೂಡಿ ಬಂದಿದೆ.
ಒಟ್ಟಿನಲ್ಲಿ ಚಂದ್ರ ಪಲ್ಲವಿಯು ಎಲ್ಲರ ಮನಗೆಲ್ಲುವಲ್ಲಿ ಸಫಲಳಾಗುವಳೆಂದು ನನ್ನ ಅನಿಸಿಕೆ.
ಬೆನ್ನುಡಿಯನ್ನು ಶ್ರೀ. ಆರ್.ಎಸ್. ಚಾಪಗಾವಿ ಹಿರಿಯ ಸಾಹಿತಿಗಳು ಬರೆದಿದ್ದಾರೆ.
ಒಳ್ಳೆಯ ಸಂಸ್ಕಾರದಲ್ಲಿ ಬೆಳೆದ ಶ್ರೀ. ಪ್ರಭಾಕರ ಬಿಳ್ಳೂರ ಅವರಿಗೆ ಸಹಜವಾಗಿ ಸಂಸ್ಕ್ರತಿ, ಕಲೆ ಸಾಹಿತ್ಯದೆಡೆಗೆ ಒಲವು ಮೂಡಿತು. ಮುಂದೆ ಒಬ್ಬ ಆದರ್ಶ ಶಿಕ್ಷಕರಾಗಿ ಬಹುಮುಖ್ಯ ಸಾಧನೆ ಮಾಡಿದರು ಸಾಹಿತ್ಯ, ಕಲೆ, ನಾಟಕ ಕ್ಷೇತ್ರದಲ್ಲಿ ಮಿಂಚಿದರು. ಸಮಾಜಮುಖಿಯಾದ ಅವರ ಎಲ್ಲ ಸಾಹಿತ್ಯ ಕೃತಿಗಳು ಪ್ರಕಟವಾಗಿ ಜನ-ಮನ ತಲುಪಬೇಕು.
ಅರ್ಚನಾ ಆರ್ಯ ಸಾಹಿತಿ ಆಕಾಶವಾಣಿ ನಿರೂಪಕಿ ಬೆಂಗಳೂರು ಅವರು ಸಾಮಾಜಿಕ ಮನಃ ಶಾಸ್ತ್ರ ಅಂತ ಬಂದಿರುತ್ತಲ್ಲ ಅದನ್ನು ಸಮರ್ಥವಾಗಿ ಹಿಡಿದಿಟ್ಟಿದೆ. ಈ ನಾಟಕ ನಾಟಕದ ಸಂವಿಧಾನ ಉತ್ತರ ಕರ್ನಾಟಕದ ಗಟ್ಟಿ ಭಾಷೆ ವಾಸ್ತವತೆಯ ಬೆನ್ನು ಹತ್ತಿವೆ, ಶ್ರೀಮಂತಿಕೆ ಅಂದ್ರೇನು ಅಂತ ಪರಿಚಯಿಸುತ್ತಲೇ ಅಪ್ರಬುದ್ದ ಆಸೆಯೂ ಅಂತ ಪ್ರಶ್ನೆ ಉಳಿಸಿಹೋಗುವಂತೆ ಮಾಡುತ್ತೆ ಎಲ್ಲಾ ಇದ್ದೂ ಒಂಟಿತನದ ಬೇಗೆಯಲ್ಲಿರುವಂತೆ ಕಡೆಗೆ ಇಹಲೋಕ ತ್ಯಜಿಸುವಲ್ಲಿ ಮುಗಿಯುವ ಈ ನಾಟಕ ಬದಲಾಗುತ್ತಿರುವ ಸಾಮಾಜಿಕ ಸಂದರ್ಭದ ಮೇಲೆ ಬೆಳಕು ಚೆಲ್ಲತ್ತೆ ಅನುಭವಕ್ಕೆ ಆಕಾಶ ನೀಡುತ್ತೆ.
ಇವರ ತಂದೆಯವರ ಇನ್ನೂ ಅನೇಕ ಕವನಗಳು ಇದ್ದು ಅವುಗಳನ್ನು ಪ್ರಕಟಿಸಲಿ, ಎಂದು ಹಾರೈಸುವೆ.
ದೀಪಕ ಬಿಳ್ಳೂರ ಅವರ ಚರವಾಣಿ: 8861081817.
ಎಮ್.ವೈ. ಮೆಣಸಿನಕಾಯಿ.
ಮೋ ನಂ. 9449209570