spot_img
spot_img

ಪುಸ್ತಕ ಪರಿಚಯ: ವಚನ ವಾರಿಧಿ

Must Read

- Advertisement -

ಪುಸ್ತಕದ ಹೆಸರು : ವಚನ ವಾರಿಧಿ

ಲೇಖಕರು : ಶ್ರೀ ಆರ್.ಎಸ್. ಪಾಟೀಲ

ಬೆಲೆ : ೩೭೫

- Advertisement -

ಪುಟಗಳು :೪೧೬

ಈಗಾಗಲೇ ಅನೇಕ ಕೃತಿಗಳನ್ನು ರಚಿಸಿ ಕನ್ನಡಾಂಬೆಯ ಮುಡಿಯನ್ನು ಸಿಂಗರಿಸಿದ ಶ್ರೀ ಆರ್.ಎಸ್.ಪಾಟೀಲ ಸರ್ ರಾಮದುರ್ಗ ತಾಲೂಕಿನ ಸಾಲಹಳ್ಳಿಯವರು. ಈದೀಗ ಪ್ರಕಟಗೊಂಡ ಅವರ ಕೃತಿ ” ವಚನ ವಾರಿಧಿ”.

ಹೆಸರೇ ಸೂಚಿಸುವಂತೆ ಪುಸ್ತಕವು ವಚನಗಳ ವಾರಿಧಿ ಅಂದರೆ ವಚನಗಳ ಸಾಗರವೇ ಎಂದರ್ಥ ಹೌದು ಪುಸ್ತಕವು ೧೯೫ ವಚನಗಳನ್ನು ಹೊಂದಿದ್ದು ಓದಲು ಸೊಗಸಾಗಿದೆ.

- Advertisement -

ಪ್ರತಿವಚನಕ್ಕೆ ಲೇಖಕರು ತುಂಬಾ ಅರ್ಥಪೂರ್ಣವಾಗಿ ವಿವರಣೆ ಒದಗಿಸಿದ್ದಾರೆ. ಪುಸ್ತಕವು ಬಸವಣ್ಣ , ಅಕ್ಕಮಹಾದೇವಿ ಅಲ್ಲಮಪ್ರಭುಗಳ ವಚನಗಳಲ್ಲದೇ; ಧೂಳಯ್ಯ, ಆಮುಗೆಯ ರಾಮಯ್ಯ, ಹಾವಿನ ಹಾಳ ಕಲ್ಲಯ್ಯ , ಲದ್ದುಗೆಯ ಸೋಮಣ್ಣ ಹಾಗೂ ಕಾಡ ಸಿದ್ದೇಶ್ವರರಂತಹ ಓದುಗರಿಗೆ ಅಪರಿಚಿತರಾದಂತಹ ಶರಣರ ವಚನಗಳನ್ನು ಹೊಂದಿ ಮೌಲ್ಯಯುತವಾಗಿದೆ.

ಸಿದ್ದಲಿಂಗ ಯತಿಗಳು, ಕಾಡಸಿದ್ದೇಶ್ವರರ ವಚನಗಳು ಸಾಮಾನ್ಯರಿಗೆ ತಿಳಿಯವು .ಅಂತಹ ವಚನಗಳನ್ನೂ ಲೇಕಕರು ಸಾಮಾನ್ಯ ಓದುಗರಿಗೆ ತಿಳಿಯುವ ಹಾಗೆ ಅರ್ಥ ವಿಶ್ಲೇಷನೆ ಮಾಡಿದ್ದಾರೆ. ಕೆಲವು ವಚನಗಳ ವಿಶ್ಲೇಷಣೆ ಎರಡು ಪುಟಗಳಷ್ಟು ಇವೆ. ಲೇಖಕರು ಬರಹದ ಮಿತಿಗೆ ಗಂಟು ಬೀಳದೇ ಓದುಗನ ಅನುಭವ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ವಚನವನ್ನು ಓದುಗನಿಗೆ ತಲುಪಿಸಲು ಪ್ರಯತ್ನ ಪಟ್ಟಿದ್ದಾರೆ.

ವಚನಗಳ ಅರ್ಥವಿವರಣೆಯನ್ನು ಲೇಖಕರು ಸರ್ವಜ್ನನ ವಚನಗಳು ಜನಪದ ನುಡಿಗಳು ಪ್ರಸಿದ್ದ ವ್ಯಕ್ತಿಗಳ ಉದಾಹರಣೆಯೊಂದಿಗೆ ಸ್ಪಷ್ಟಪಡಿಸುತ್ತಾ ಓದುಗರಿಗೆ ಆಪ್ತವಾಗಿದ್ದಾರೆ.

ಪುಸ್ತಕವು ಮಹಿಳೆ, ಶಿವಜ್ನಾನ , ಕಾಯಕದ ಮಹಿಮೆ ,ಮನಸ್ಸಿನ ಸ್ವಭಾವ, ದುರ್ಜನ – ಸಜ್ಜನರ ಲಕ್ಷಣಗಳು ಕುರಿತು ಅರ್ಥಪೂರ್ಣ ವಿವರಣೆ ನೀಡುತ್ತದೆ.

ಉದಾ: ಕಾಯಕದ ಮಹಿಮೆಯನ್ನು ಅಥವಾ ಅದರ ಅಪ್ರತಿಮ ಆನಂದವನ್ನು ಧೂಳಯ್ಯನೆಂಬ ಶರಣನು ವರ್ಣಿಸುವ ಬಗೆ ಅಮೋಘವಾದುದು. ಇಂದಿನ ಯುವಕರು ತಂತ್ರಜ್ನಾನಕ್ಕೆ ಜೋತು ಬಿದ್ದು ದೇಹವು ರೋಗದ ಗೂಡಾಗುತ್ತಿರುವ ಪ್ರಸ್ತುತ ಸನ್ನೀವೇಶದಲ್ಲಿ ಈ ವಚನ ದಿವ್ಯೌಷಧಿಯಂದು ನಾನು ಭಾವಿಸುತ್ತೇನೆ.

“ಅಟ್ಟೆಯಲ್ಲಿ ಚುಚ್ಚುವ ಉಳಿಯ ಮೊನೆಯಲ್ಲಿ ” ಪ್ರತ್ಯಕ್ಷನಾದ ಪರಮೇಶ್ವರನ ಕಂಡು
“ಇತ್ತಲೇಕಯ್ಯ ಕಾಯದಲೆತ್ತಿಯ ಹೊತ್ತಾಡುವವನ ಮುಂದೆ
“ನಿನ್ನ ಭಕ್ತರ ಠಾವಿನಲ್ಲಿಗೆ ಹೋಗಿ ಮುಕ್ತಿಯ ಮಾಡು , ನೀ ಹೊತ್ತ ಬಹು ರೂಪ ತಪ್ಪದೇ ರಜತದ ಬೆಟ್ಟದ ಮೇಲಕ್ಕೆ ಹೋಗು, ಕಾಮಧೂಮ ಧೂಳೇಶ್ವರನ ಕರುಣದಿಂದ ನೀನೇ ಬದುಕು ” ಎಂದು ಹೇಳುತ್ತಾನೆ.

ಅಂದರೆ ಕಾಯಕದಲ್ಲಿ ಶಿವ ಪ್ರತ್ಯಕ್ಷನಾದರೂ ನನಗೆ ಬೇಡ ನನಗೆ ಅಟ್ಟೆ ಹೊಲಿಯುವ ಕಾಯಕ ಮತ್ತು ಅದರ ಆನಂದವೇ ಇರಲಿ ಎಂದು ಧೂಳಯ್ಯ ಹೇಳುವ ಮಾತಿನಲ್ಲಿ ಕಾಯಕದ ಅಗಾಧ ಮಹಿಮೆಯನ್ನು ಕಾಣಬಹುದು.

ದೇವರು ಇದ್ದಾನೋ ಇಲ್ಲವೋ ಎಂದು ಆಗಾಗ ಒದ್ದಾಡುವ ಜನರಿಗೆ ಕ್ಷೀರದಲ್ಲಿಯ ಘೃತದಂತೆ ,ಕೊರಡಿನಲ್ಲಿಯ ಬೆಂಕಿಯಂತೆ ಶಿವನ ಅಸ್ತಿತ್ವವನ್ನು ೧೨೨ ವಚನ ಸಾದರಪಡಿಸುತ್ತದೆ.

೧೨೦ನೇಯ ವಚನವು ತೊರೆಯನ್ನುವ ಪದವನ್ನು ಬಳಸಿಕೊಂಡು ಪರಧನ , ಪರನಾರಿ ಸಂಗ ತೊರೆದಾಗ ಸುಂದರ ಬದುಕು ನಮಗಾಗುತ್ತದೆ ಎಂದು ಇಂದಿನ ಅತ್ಯಾಚಾರದ ಪ್ರಕರಣಗಳಿಗೆ ಒಂದು ಮೂಲ ಅರಿವನ್ನು ನೀಡುತ್ತದೆ.

೨೧ ನೇಯ ಶತಮಾನವು ನಡೆದಿದ್ದರೂ ಹೆಣ್ಣಿನ ಮೇಲಿನ ಶೋಷಣೆ ದೌರ್ಜ್ಯನ್ಯ ಮಾತ್ರ ನಿಂತಿಲ್ಲ . ಮಹಿಳೆ ಸೇರಿದಂತೆ ಅಪ್ರಾಪ್ತ ಬಾಲೆಯರೂ ಹೀನಾಯಾನವಾಗಿ ಸಾವಿಗೀಡಾಗುತ್ತಿರುವ ಈ ಕಾಲದಲ್ಲಿ
ಹೆಣ್ಣೆಂದರೆ ರಾಕ್ಷಸಿಯಲ್ಲ
ಹೆಣ್ಣು ಶಿವನ ಮುಡಿ ಏರಿದೆ,
ಹೆಣ್ಣು ವಿಷ್ಣುವಿನ ತೊಡೆ ಏರಿದೆ,
ಹೆಣ್ಣು ಬ್ರಹ್ಮನ ನಾಲಿಗೆ ಏರಿದೆ
ಹೆಣ್ಣು ಹೆಣ್ಣಲ್ಲ ಅವಳು ಪ್ರತ್ಯಕ್ಷ ಶಿವೆ ” ಎಂದು ಹೇಳುವ ಸಿದ್ದರಾಮರ ವಚನವು ಮಹಿಳೆಯರ ದೌರ್ಜ್ಯನ್ಯದ ಮೇಲೆ ಈ ವಚನವು ಬೆಳಕು ಚೆಲ್ಲುತ್ತದೆ.

೧೧೦ನೇ ವಚನವು ” ಸಮಾಜ ಇಂದಿನಂತೆಯೇ ಹಿಂದೂ ಇತ್ತು, ಎಂಬುದನ್ನು ವಿವರಿಸುತ್ತಾ “ಶರಣ ಲೋಕದ ಇಚ್ಚೆಯಂತೆ ನಡೆಯನು, ನುಡಿಯನು ಆದರೆ ತನ್ನ ಆತ್ಮದಂತೆ ನಡೆಯುವನು ಎಂಬ ಸತ್ಯವನ್ನು ಅರುಹುತ್ತದೆ. ಹೀಗೆ ಪುಸ್ತಕವು ಪ್ರಸ್ತುತ ಸಮಾಜದ ನೋವು ನರಳಿಕೆಗೆ ತೆರೆದುಕೊಂಡು ಅಗತ್ಯವಾಗಿದೆ.

ಈಕೃತಿಗೆ ಡಾ.ವಾಯ್.ಎಂ.ಯಾಕೊಳ್ಳಿ ಯವರು ತುಂಬಾ ಅರ್ಥಪೂರ್ಣವಾಗಿ ಮುನ್ನುಡಿ ಬರೆದು ಗ್ರಂಥದ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಒಮ್ಮೆ ಓದಿದರೆ ಮತ್ತೊಮ್ಮೆ ಓದಬೇಕೆನ್ನುವ ಅಭಿಲಾಷೆಯನ್ನು ಪುಸ್ತಕವು ಹೆಚ್ಚಿಸುತ್ತದೆ.

ವಚನಗಳ ವಿಶ್ಷೇಷಣೆ ಎಲ್ಲೂ ತಡವರಿಸದೇ ನಿರರ್ಗಳವಾಗಿ ಹರಿದು ಬಂದದ್ದು ಲೇಖಕರ ಅಗಾಧ ಕೌಶಲ್ಯಕ್ಕೆ ಸಾಕ್ಷಿಯಾಗಿದೆ. ಪ್ರತಿ ವಚನ ವಿಶ್ಲೇಷಣೆಯಲ್ಲಿ ಲೇಖಕರ ಅಗಾಧ ಜೀವನ ಅನುಭವ , ಲೋಕಜ್ನಾನವನ್ನು ಓದುಗನು ಕಾಣ ಬಹುದಾಗಿದೆ.

ವಾಯ್.ವ್ಹಿ.ಕಂಬಾರ
ರಾಮದುರ್ಗ

- Advertisement -
- Advertisement -

Latest News

ಸಿಂದಗಿ ನೀಲಗಂಗಾ ದೇವಿ ಜಾತ್ರೆ ಸಂಪನ್ನ

ಸಿಂದಗಿ - ಪಟ್ಟಣದ ಆರಾಧ್ಯ ದೈವ ತಾಯಿ ನೀಲಗಂಗಾ ದೇವಿ ಜಾತ್ರೆ ಗುರುವಾರ ಅತ್ಯಂತ ಅರ್ಥಪೂರ್ಣವಾಗಿ ಮತ್ತು ಅದ್ದೂರಿಯಾಗಿ ಜರುಗಿತು. ಸ್ಥಳೀಯ ಸಾರಂಗಮಠದ ಪರಮಪೂಜ್ಯಶ್ರೀ ಡಾ. ಪ್ರಭುಸಾರಂಗದೇವ...
- Advertisement -

More Articles Like This

- Advertisement -
close
error: Content is protected !!
Join WhatsApp Group