spot_img
spot_img

ಪುಸ್ತಕ ಪರಿಚಯ

Must Read

- Advertisement -

ಪರಶುರಾಮ ನಾಯಿಕ 

ಸತ್ ಚಿತ್ ಆತ್ಮ ದರ್ಶನ
(The end is the New beginning)
ಕೃತಿಯ ಕನ್ನಡ ಅನುವಾದ.
ಕನ್ನಡಕ್ಕೆ ಸಂತೋಷ ಕುಮಾರ ಮೂಲ ಲೇಖಕರು ; ಪರಶುರಾಮ ನಾಯಿಕ
ಪ್ರಕಾಶಕರು ; ಪದ್ಮಶ್ರೀ ಪ್ರಕಾಶನ ಹೈದರಾಬಾದ
ಪ್ರಥಮ ಮುದ್ರಣ 2019 ಪುಟಗಳು 300 +
ಬೆಲೆ 399/-
(ಅಂತ್ಯವೇ ಹೊಸ ಪ್ರಾರಂಭ )

ಕೃತಿಯ ಕನ್ನಡ ಅನುವಾದವನ್ನು ಸಂತೋಷ ಕುಮಾರ ಅವರು ಮಾಡಿದ್ದಾರೆ.

- Advertisement -

ಲೇಖಕ ಪರಶುರಾಮ ನಾಯಿಕ ಅವರು ” ಅಂತ್ಯವೇ ಹೊಸ ಪ್ರಾರಂಭ ” ಕೃತಿಯ ಕನ್ನಡ ಅನುವಾದವನ್ನು ಸೋಲಿನಿಂದ ಯಶಸ್ವಿ ಜೀವನದ ಅಗತ್ಯಗಳಾದ ಆನಂದ, ಸಾಕ್ಷಾತ್ಕಾರ ಮತ್ತು ಜ್ಞಾನವೇ ದಯದೆಡೆಗೆ ಜೀವನ ಪರಿವರ್ತನೆಯ ಒಂದು ಕಥೆಯಾಗಿದೆ .ಸರಳ ಭಾಷೆಯಲ್ಲಿ ಸಾಗುತ್ತದೆ.

ಈ ಪುಸ್ತಕವು ಜೀವನದ ರಹಸ್ಯ ಜ್ಞಾನವನ್ನು ಸೂಕ್ಷ್ಮವಾಗಿ ಕಥೆಯೊಳಗೆ ಹೆಣೆಯಲ್ಪಟ್ಟು ಕಾಲ್ಪನಿಕ ರೂಪದಲ್ಲಿದೆ. ಇದು ನಮ್ಮನ್ನು ಬಿಡುಗಡೆಯೆಡೆಗೆ ಮತ್ತು ಜ್ಞಾನೋದಯದ ಕಡೆಗೆ ಮುನ್ನಡೆಸಲು ವಿಧಾನಗಳನ್ನು ಮತ್ತು ದಾರಿಗಳನ್ನು ಗುರುತಿಸಲು ಸಹಾಯ ಮಾಡುವಂಥ ಕೈಪಿಡಿಯಾಗಿದೆ. ಈ ಪುಸ್ತಕದಲ್ಲಿ ವಿವರಿಸಲಾಗಿರುವ ಎಲ್ಲ ಆಧ್ಯಾತ್ಮಿಕ ತಂತ್ರಗಳು ವಾಸ್ತವವಾಗಿ ನೂರಾರು ಜನರ ಮೇಲೆ ಪ್ರಯೋಗ ಮಾಡಲ್ಪಟ್ಟು ಪ್ರಮಾಣಿತಗೊಂಡು ಅವರೆಲ್ಲ ರಿಂದ ಬಂದ ಅದ್ಭುತವಾದ ಫಲಿತಾಂಶಗಳ ಫಲವಾಗಿದೆ.

ಯಾರು ದುರದೃಷ್ಟದಿಂದ ಅದಃಪತನಕ್ಕೆ ಒಳಗಾಗಿರುತ್ತಾರೋ ಮತ್ತು ಜೀವನದಲ್ಲಿ ವಿಫಲತೆಗಳನ್ನು ಅನುಭವಿಸಿರುತ್ತಾರೋ ಅಂತವರಿಗೆ ಪರಿವರ್ತನೆಯಾಗಲು ಈ ಪುಸ್ತಕ ಸಹಾಯ ಮಾಡುತ್ತದೆ.

- Advertisement -

ಇದು ಆಧ್ಯಾತ್ಮಿಕತೆಯ ಬಗೆಗಿನ ಸಾಮಾನ್ಯವಾದ ಪುಸ್ತಕವಲ್ಲ ಅಥವಾ ಎಂದಿನ ಸಾಮಾನ್ಯವಾದ ಕಾಲ್ಪನಿಕ ಕಾದಂಬರಿಯಲ್ಲ ಒಬ್ಬ ವ್ಯಕ್ತಿ ತನ್ನ ಬಾಳಿನಲ್ಲಿ ಏನೆಲ್ಲ ಸಾಧಿಸಲು ಇಚ್ಚಿಸುವನೋ ಅದಕ್ಕೆ ಮಾರ್ಗದರ್ಶಕನಂತೆ ಇದು ಕೆಲಸಮಾಡುತ್ತದೆ.
ಮನುಷ್ಯನ ಮನಸ್ಸು ಎಂದರೆ ಏನು? ಅದು ನಮ್ಮನ್ನು ಚಿಂತಿಸುವಂತೆ ಮಾಡುವ ವಿಭಾಗ. ಸಾಮಾನ್ಯ ಭಾಷೆಯಲ್ಲಿ ಮನಸ್ಸೆಂಬುದು ಒಂದು ತಂತ್ರಾಂಶವಿದ್ದ ಹಾಗೆ ಮತ್ತು ಮೆದುಳು ಒಂದು ಯಂತ್ರಾಂಶವಿದ್ದ ಹಾಗೆ.

ಮನಸ್ಸಿನ ಸ್ಥಿತಿ ಮೆದುಳಿನ ಕಾರ್ಯಗಳ ಮತ್ತು ಆರೋಗ್ಯದ ಮೇಲೆ ನೇರವಾದ ಪ್ರಭಾವವನ್ನು ಹೊಂದಿದೆ. ಹಾಗೇ ತದ್ವಿರುದ್ದ ವಾಗಿಯೂ ಸಹ ಮೆದುಳು ಎಲೆಕ್ಟ್ರೋಮ್ಯಾಗ್ನೆಟಿಕ್ ವಿಕಿರಣಗಳನ್ನು ಹೊರಬಿಡುತ್ತದೆ. ಮನಸ್ಸಿನ ಸ್ಥಿತಿಯು ಮೆದುಳಿನ ಅಲೆಗಳ ತರಂಗಾಂತರಗಳ ಮೇಲೆ ಅವಲಂಬಿಸಿದೆ ಈ ಅಲೆಗಳನ್ನು ಬೀಟಾ, ಅಲ್ಪಾ, ಥೀಟಾ, ಡೆಲ್ಟಾ ಎಂದು ವಿಭಾಗಿಸಿದ್ದಾರೆ ವಿಜ್ಞಾನಿಗಳು ಹಾಗೆ ವೈದ್ಯ ಹಾಗೂ ರೋಗಿಯ ಸಂಭಾಷೆಣೆ ಸಾಗುತ್ತದೆ.

ಯಾರು ತಮ್ಮ ಜೀವನದಲ್ಲಿ ಎಲ್ಲವನ್ನು ಕಳೆದುಕೊಂಡಿರುವೆನೆಂದು ಹತಾಶರಾಗಿರುವರೋ ಅಂಥವರಿಗೆ ಈ ಪುಸ್ತಕ ಅತ್ಯಂತ ಪ್ರಯೋಜನಕಾರಿಯಾಗಿದೆ. ಯಾವುದೇ ವ್ಯತಿರಿಕ್ತ ಪರಿಸ್ಥಿತಿಯಲ್ಲೂ ತಮ್ಮ ಬಾಳನ್ನು ಸಮರ್ಪಕವಾಗಿ ಹತೋಟಿಯಲ್ಲಿಟುಕೊಂಡು ಮರಳಿ ಯಶಸ್ವಿನೆಡೆಗೆ ಬರಲು ಸಹಾಯಕವಾಗುವ ಆಧ್ಯಾತ್ಮಿಕ ಮತ್ತು ಸುಪ್ತ ಮನಸ್ಸಿನ ತಂತ್ರಗಳನ್ನು ಇದು ವಿವರಿಸುತ್ತದೆ.

ಈ ಕಥೆಯಲ್ಲಿರುವ ಕಥಾನಾಯಕ ಸೋಲುಗಳಿಂದ ಯಶಸ್ವಿನೆಡೆಗೆ ಹೇಗೆ ತನ್ನ ಜೀವನವನ್ನು ಪರಿವರ್ತಿಸಿಕೊಂಡ ಎಂಬುದು ಪುಸ್ತಕದಲ್ಲಿನ ಮುಖ್ಯ ವಿಷಯವಾಗಿದೆ. ಈ ಪುಸ್ತಕವನ್ನು ಮೂರು ಸಾರಗಳಲ್ಲಿ ವಿಶ್ಲೇಷಿಸಿದ್ದಾರೆ. ಅವು ಯಾವುವುಎಂದರೆ ಪ್ರಕೃತಿ ಸಹಜವಾದ ದೃಷ್ಟಿ, ವ್ಶೆಜ್ಞಾನಿಕ ದೃಷ್ಟಿ ಮತ್ತು ಆಧ್ಯಾತ್ಮಿಕ ದೃಷ್ಟಿ ಅಂತಿಮ ಪರಿಹಾರ ಈ ಮೂರನ್ನು ಒಂದಾಗಿಸಿದಾಗ ಮಾತ್ರ ಸಾಕ್ಷಾತ್ಕಾರವಾಗುತ್ತದೆ.

ಈ ಪುಸ್ತಕ ನಿಮಗೆ ನೀಡುವ ಸಂದೇಶ ಒಬ್ಬ ವ್ಯಕ್ತಿಯ ಜೀವನೋದ್ದೇಶವನ್ನು ಅವನೇ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ ಹಾಗೂ ಮಾರ್ಗದರ್ಶಿಯಾಗಿದೆ.

ಸುಪ್ತ ಮನಸ್ಸಿನ ಶಕ್ತಿಯನ್ನು ಮತ್ತು ಈ ಶಕ್ತಿಗೆ ಬೇಕಾದ ಸಾಧನಗಳನ್ನು ಪಡೆಯಲು ಮಾರ್ಗದರ್ಶಿಯಾಗಿದೆ.
ತನ್ನ ಹೃದಯದ ಮಾತನ್ನು ಪಾಲಿಸುವುದರ ಮೂಲಕ ಸಂತೃಪ್ತಿಯ ತಂತ್ರಗಳನ್ನು ತಿಳಿಸಿಕೊಡುತ್ತದೆ.
ಧ್ಯಾನ ಎಂದರೇನು? ಎಂಬುದನ್ನು ಅರಿಯಲು ಮಾರ್ಗದರ್ಶಿಯಾಗಿದೆ.

ಮನೋದೈಹಿಕ ಕಾಮನೆಗಳನ್ನು ಗುಣಪಡಿಸಲು ಮಾರ್ಗದರ್ಶಿಯಾಗಿದೆ.

ಐನ್‍ಸ್ಟೀನ್ ವಿರೋಧಾಭಾಸ ಸಿದ್ದಾಂತವನ್ನು ಪರಿಣಾಮಕಾರಿಯಾಗಿ ಉಪಯೋಗಿಸುವುದರ ಮೂಲಕ ಸಾವಿರಾರು ಮೈಲಿಗಳ ದೂರದಿಂದಲೆ ಜನರ ಮನಸ್ಸಿನ ಮೇಲೆ ಪ್ರಭಾವ ಬೀರುವ ವಿಜ್ಞಾನ ಕಲಿಯಲು ಸಹಾಯ ಹಸ್ತವಾಗಿದೆ.
ಕರ್ಮ ಎಂದರೇನು ? ಅದರ ಸಂಬಂಧಗಳ ಬಗ್ಗೆ ತಿಳಿಯಲು ದಸಹಾಯಕವಾಗಿದೆ. ಆತ್ಮ ಸಂಗಾತಿಗಳ ರಹಸ್ಯದ ವಿಜ್ಞಾನವನ್ನು ಅರ್ಥ ಮಾಡಿಕೊಳ್ಳಲು ಸಹಾಯಕವಾಗಿದೆ.

ಮರಣಿಸುವ ರಹಸ್ಯವನ್ನು ಅರ್ಥಮಾಡಿಕೊಳ್ಳಲು ಮತ್ತು ಸುಖಕರವಾಗಿ ಮರಣಿಸುವ ಕಲೆಯನ್ನು ಕಲಿಯುವುದಕ್ಕೆ ಮಾರ್ಗದರ್ಶಿಯಾಗಿದೆ.

ನಿಗೂಢವಾದ ತಲುಪಲಾಗದಂತಹ ಹಿಮಾಲಯದ ಸ್ಥಳಗಳ, ಅರಾವಳಿ, ಥಾರ್ ಮರಭೂಮಿ ಮತ್ತು ದೇಶದಲ್ಲೆಡೆ ಇರುವ ಅಂತಹ ಅನೇಕ ಸ್ಥಳಗಳಿಗೆ ಖುದ್ದು ಪ್ರಯಾಣಿಸಿದ ಅನುಭವಗಳ ಮೂಲಕ ಜ್ಞಾನೋದಯದ ಮಾರ್ಗದರ್ಶಿಯಂತೆ ಈ ಪುಸ್ತಕ ಸಹಾಯ ಮಾಡುತ್ತದೆ. ವಿಪಸನ ಧ್ಯಾನದ ವಿಜ್ಞಾನ ಮತ್ತು ತಂತ್ರಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದು.
ಡಾ. ಶ್ರೀ. ರಾಮಚಂದ್ರ ಗುರುಜಿಯವರು ಈ ಪುಸ್ತಕ ಕುರಿತು “ಜೀವನವನ್ನು ಪರಿವರ್ತಿಸುವಂತಹ ಒಂದು ಅಕರ್ಷಣೀಯ ಕಥೆಯಾಗಿದೆ ಎಂದಿದ್ದಾರೆ.

ಆಧುನಿಕ ಜೀವನದಲ್ಲಿ ಆತ್ಮಹತ್ಯೆಗಳು,ವಿಫಲ ವಿವಾಹಗಳು ಮತ್ತು ಖಿನ್ನತೆಯಿಂದ ಬಳಲುವಿಕೆ ಇತ್ಯಾದಿಗಳು ಗಣನೀಯವಾಗಿ ಜಾಸ್ತಿಯಾಗುತ್ತಿವೆ. ಈ ಪ್ರವೃತ್ತಿ ನಿಲ್ಲುವಂತೆ ಕಾಣುತ್ತಿಲ್ಲ. ಈ ಪ್ರವೃತ್ತಿಯನ್ನು ತಡೆಗಟ್ಟಲು ಯಾವುದೋ ದೊಡ್ಡ ಪ್ರಮಾಣದ ಕ್ರಮಗಳಲ್ಲಿವೆಂಬುದು ಅತಿಯಾದ ಪ್ರಾಪಂಚಿಕತೆ ಬಡತನ ಮತ್ತು ಭಿನ್ನತೆಗಳು ಮುಂದುವರಿದ ದೇಶಗಳ ಪ್ರಮುಖ ಕೊರತೆಗಳಾಗಿವೆ.

ಪರಶುರಾಮ ನಾಯಿಕ ಅವರು ಒಬ್ಬ ಆಧ್ಯಾತ್ಮಿಕ ಚಿಂತಕರು ಮತ್ತು ಸಾಧಕರಾಗಿದ್ದಾರೆ. ಅವರು ಸುಪ್ತ ಮನಸ್ಸಿನ ಪರಿವರ್ತನೆಯ ತಜ್ಞರಾಗಿದ್ದಾರೆ. ವಿಜ್ಞಾನದ ಮುಂಚೂಣಿಯಲ್ಲಿರುವ ಕ್ವಾಂಟಮ್ ಮೆಕ್ಯಾನಿಕ್ಸ್ ನಲ್ಲೂ ಅತೀವ ಆಸಕ್ತಿ ಹೊಂದಿರುವ ಇವರು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ ಮತ್ತು ಅವುಗಳು ಹಲವು ಭಾಷೆಗಳಿಗೆ ಅನುವಾದಗೊಂಡಿವೆ.
ಕೈತೊಳೆದು ಮುಟ್ಟುವ ಈ ಗ್ರಂಥ ಅತಿಉಪಯುಕ್ತವಾಗಿದೆ ಎಲ್ಲರೂ ಓದಿ ಕಾಯ್ದಿಡುವ ಗ್ರಂಥವಾಗಿದೆ. ದೇವರು ಇವರಿಗೆ ಇನಷ್ಟು ಇಂತಹ ಹೊಸ ಹೊಸ ಗ್ರಂಥಗಳನ್ನು ಬರೆಯಲು ಡಾ. ಶ್ರೀ ಶ್ರೀ ರಾಮಚಂದ್ರ ಗುರೂಜಿ ಹಾಗೂ ಶ್ರೀ ಶ್ರೀ ಶಿವಲಿಂಗಯ್ಯ ಸ್ವಾಮೀಜಿ ಅನುಗ್ರಹ ಕರುಣಿಸಲಿ ಎಂದು ಹಾರೈಸುವೆನು.

ಶ್ರೀ ಎಂ. ವೈ. ಮೆಣಸಿನಕಾಯಿ
ಬೆಳಗಾವಿ.
ಮೊ: 9449209570

- Advertisement -
- Advertisement -

Latest News

ಗುಜನಟ್ಟಿ ಗ್ರಾ ಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಮೂಡಲಗಿ - ತಾಲೂಕಿನ ಗುಜನಟ್ಟಿ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಾಮಾನ್ಯ ವರ್ಗದಿಂದ ಕಲ್ಲಪ್ಪ ನಿಂಗಪ್ಪ ಮುಕ್ಕಣ್ಣವರ, ಉಪಾಧ್ಯಕ್ಷರಾಗಿ...
- Advertisement -

More Articles Like This

- Advertisement -
close
error: Content is protected !!
Join WhatsApp Group