spot_img
spot_img

ಪುಸ್ತಕ ಪರಿಚಯ

Must Read

spot_img
- Advertisement -

ಪುಸ್ತಕದ ಹೆಸರು : ಸೌಹಾರ್ದ ಸೇತು ಕೃ.ಶಿ. ಹೆಗಡೆ ಅಭಿನಂದನ ಗ್ರಂಥ
ಸಂಪಾದಕರು : ವಿಶ್ವನಾಥ ದೊಡ್ಮನೆ
ಪ್ರಕಾಶಕರು : ಮಯೂರವರ್ಮ ಸಾಂಸ್ಕ್ಕೃತಿಕ ಪ್ರತಿಷ್ಠಾನ (ರಿ) ಮುಂಬಯಿ
ಪುಟಗಳು : 308 ಬೆಲೆ 250/-

ಶ್ರೀ ಡಿ. ವೀರೇಂದ್ರ ಹೆಗ್ಗಡೆ ಡಾ. ಗುರುಸಿದ್ಧ ಲಿಂಗಯ್ಯ ಸ್ವಾಮಿ ಶ್ರೀ ತೋಟದ ಸಿದ್ದಲಿಂಗ ಮಹಾಸ್ವಾಮಿಗಳು ಬಸವರಾಜ ಮಸೂತಿ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ಸಂದೇಶ ಇದ್ದು 58 ಜನರ ಲೇಖನ 8 ಜನರ ಕವನ 13 ಜನರ ಕೃ.ಶಿ ಹೆಗಡೆಯವರ ಕೃತಿಗಳ ಅವಲೋಕನ ಮಾಡಿದ್ದಾರೆ.

ಕೃಷ್ಣ ಶಿವರಾಯ ಹೆಗಡೆ ಜನಸಿದ್ದು ಕರಾವಳಿ ಕರ್ನಾಟಕದ ಸಾಲಕೋಟದ ಕಲ್ಲರೆಮನೆ ಎಂಬ ಹಳ್ಳಿಯಲ್ಲಿ ಹದಿನಾರು ಮಕ್ಕಳ ಮಹಾಮಾತೆಯ ಗರ್ಭ ಸಂಜಾತರಲ್ಲಿ ಇವರು ಎಂಟನೆಯವರು ಆದ್ದರಿಂದಲೇ ಇವರ ಹೆಸರು ಕೃಷ್ಣ!

- Advertisement -

ಹುಟ್ಟಿನಿಂದಲೇ ಕಿತ್ತು ತಿನ್ನುವ ಬಡತನ ತಂದೆ ಶಿವರಾಮ ಹೆಗಡೆ ಕೃಷಿಕರು ಮಕ್ಕಳು ಓದು ಬರಹ ಬಂದರೆ ಸಾಕು ನಂತರ ಅಡಕೆ ತೋಟದಲ್ಲಿ ಕೆಲಸ ಮಾಡಲಿ ಇದು ಅವರ ಕಠೋರ ನಿರ್ಧಾರ.

ಕೃಷ್ಣನಿಗೆ ಕಲಿಯುವ ಆಸೆ ಉತ್ಕಟವಾದ ಆಸೆ ತಂದೆಯ ದೌರ್ಜನ್ಯಗಳನ್ನು ನುಂಗಿಕೊಂಡು ಪದವೀಧರರಾದರು ತಂದೆ ಸ್ವರ್ಗಸ್ಥರಾಗಿದ್ದರು ಊರು ಬಿಟ್ಟು ಮಾಯಾನಗರಿ ಮುಂಬಯಿ ಸೇರಿದರು. ಪಡಬಾರದ ಪಾಡು ಪಟ್ಟರು ಕೊನೆಗೆ ಶಿಕ್ಷಕ ವೃತ್ತಿ ದೊರೆಯಿತು. ಪುಣೆ ಸೇರಿದರು ಪಠ್ಯಪುಸ್ತಕ ನಿರ್ಮಾಣ ಸಮಿತಿಯ ಅಧಿಕಾರಿಯಾದರು.

ಕನ್ನಡ ವಿದ್ಯಾರ್ಥಿಗಳಿಗೆ ಉತ್ತಮ ಪಠ್ಯ ಪುಸ್ತಕಗಳನ್ನು ಒದಗಿಸಿದರು ಮುಂದೆ ಇತರ ಭಾಷೆಗಳ ಪಠ್ಯಪುಸ್ತಕ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಂಡರು ಅದರಲ್ಲಿ ಯಶಸ್ವಿಯಾಗಿ ನಿವೃತ್ತಿ ಪಡೆದರು ಕನ್ನಡ ಮರಾಠಿ ಜನರಲ್ಲಿ ಪರಸ್ಪರ ಪ್ರೀತಿಯ ಬಾಂಂಧವ್ಯ ಬೆಸೆದರು.

- Advertisement -

ಇಂತಹ ಮಹಾನ್ ಚತನವನ್ನು ಸಾರ್ವಜನಿಕವಾಗಿ ಸನ್ಮಾನಿಸಿ ಗೌರವಿಸಬೇಕು ಎಂದು ಗೌರವ ಗ್ರಂಥದ ಹೆಸರು “ಸೌಹಾರ್ದ ಸೇತು” ಗೌರವ ಗ್ರಂಥ ರಚಿಸಿದ್ದಾರೆ. 1932 ರಲ್ಲಿ ಹೇಮಾ ಅವರ ಜತೆ ಮದುವೆಯಾದರು ಅವರು ಊರಿನಲ್ಲಿ ಶಿಕ್ಷಕಿಯಾಗಿದ್ದರು ಮದುವೆ ನಂತರ ಮುಂಬಯಿ ಮುಲಂಡ್ ವಾಣಿ ವಿದ್ಯಾಲಯದಲ್ಲಿ ಅಧ್ಯಾಪಿಕೆಯಾಗಿ ಸೇರಿಕೊಂಡು ನಂತರ ಪುಣೆ ಸೇಂಟ್ ಆನ್ಸ್ ಕಾನ್ವೆಂಟನಲ್ಲಿ ನಿವೃತ್ತಿಯಾದರು.

ಇವರಲ್ಲಿ ಸಾಹಿತ್ಯದ ಎಲ್ಲ ಪ್ರಕಾರಗಳ ಅಮೂಲ್ಯ ಸಂಗ್ರಹವಿದೆ ಆ ಪುಸ್ತಕ ಇಡಲು ಸ್ಥಳವಿಲ್ಲದ್ದರಿಂದ 25 ಸಾವಿರ ಬಾಡಿಗೆ ಬರುವಂತಹ ತಮ್ಮ ಮನೆಯನ್ನು ಗ್ರಂಥಾಲಯವಾಗಿ ಮಾರ್ಪಡಿಸಿದರು. ಪುಣೆನಲ್ಲಿ ಇವರಂಥ ಮತ್ತೊಂದು ಗ್ರಂಥಾಲಯವಿಲ್ಲ. 08/04/1945 ರಲ್ಲಿ ಜನಸಿದ ಕೃಷ್ಣ ಶಿವರಾಮ ಹೆಗಡೆ ಎಂ.ಎ.ಎಂ.ಎ.ಡಿ. ಡಿ.ಪಿಸಿ. ಡಿ.ಪಿಆರ್. ಶಿಕ್ಷಕರಾಗಿ ಮುಖ್ಯಾಧ್ಯಾಪಕರಾಗಿ ವಿಶೇಷಾಧಿಕಾರಿ ಕನ್ನಡ ಮತ್ತು ಇಂಗ್ಲೀಷ ವಿದ್ಯಾ ನವೀನ ಭಾಷೆ ಮತ್ತು ಸಂಕಿರ್ಣ ವಿಷಯಗಳು ಸಿಲೇಬಸ್ ಕಮಿಟಿ ಸದಸ್ಯ 1 ರಿಂದ 8 ನೇ ತರಗತಿ ಶಿಕ್ಷಕರ ಪಠ್ಯ ಪುಸ್ತಕಗಳು ಅಭ್ಯಾಸಕ್ರಮ ರಚನೆ ಅಧ್ಯಕ್ಷರಾಗಿ ಶಿವಾಜಿ ವಿಶ್ವವಿದ್ಯಾಲಯ ಕೊಲ್ಲಾಪೂರ 1946 ರಿಂದ 2003 ರವರೆಗೆ. ಕನ್ನಡ ಮರಾಠಿ ಭಾಷಾ ಬಾಂಧವ್ಯದ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಕೆಲಸ ಮಾಡಿದ್ದಾರೆ.

ಇವರ ಸಾಹಿತ್ಯ ಕೃತಿಗಳು ಮಕ್ಕಳ ಕವನ ಸ್ವಂತ ಉದ್ಯೋಗ ಮರಾಠಿಯಿಂದ ಕನ್ನಡ ಕಾದಂಬರಿ ಶಿಕ್ಷಣದಲ್ಲಿ ಪ್ರತಿಜ್ಞೆ 2002 ರಲ್ಲಿ ಸಪ್ನಾ ಬುಕ ಹೌಸರವರು ಪ್ರಕಟಿಸಿದ್ದಾರೆ ಡಾ ಎ.ಪಿ.ಜಿ ಅಬ್ದುಲ ಕಲಾಂ ಜೀವನ ಚರಿತ್ರೆ ಇಂಗ್ಲೀಷದಿಂದ ಕನ್ನಡಕ್ಕೆ ಒಟ್ಟು 13 ಉತ್ತಮ ಕೃತಿಗಳನ್ನು ಪ್ರಕಟಿಸಿದ್ದು ಇವಕ್ಕೆ ಅನೇಕ ಪ್ರಶಸ್ತಿಗಳು ಸಹ ಲಭಿಸಿವೆ. ವಾರ ಮಾಸ ಪತ್ರಿಕೆಗಳಿಗೆ ಅನೇಕ ಲೇಖನಗಳು ಸಾವಿರಾರು ಬರೆದಿದ್ದಾರೆ.

ಇವರಿಗೆ 41 ಪ್ರಶಸ್ತಿಗಳು ಸಿಕ್ಕ್ಕಿವೆ ಎಲ್ಲ ಉತ್ತಮ ಪ್ರಶಸ್ಗತಿಳು ಸಂತೃಪ್ತಿ ಇದೆ ಮರಾಠಿ ನೆಲದಲ್ಲಿ ಕನ್ನಡಿಗಳ ಸಾಧನೆ ಇಲ್ಲ ಇವರ ಕೈಯಲ್ಲಿ ಕಲಿತ ವಿದ್ಯಾರ್ಥಿಗಳು ಕರ್ನಾಟಕ ಮಹಾರಾಷ್ಟ್ರದ ಶ್ರೇಷ್ಟ ಸಾಹಿತಿಗಳು ಬರೆದ ಅನುಭವ ಓದಲೇಬೇಕು ಅಂತಹ ಸಾಧನೆ ಮಾಡಿದ್ದಾರೆ. ಇವರಿಗೆ ಈಗ 76 ವರ್ಷ ಕನ್ನಡ ಕಾಯಕ ಬಿಟ್ಟಿಲ್ಲ ಮಗಳು ವೈದ್ಯೆ ಇನ್ನೊಬ್ಬ ಮಗಳು ಇಂಜಿನಿಯರಿಂಗ್ ಅತ್ಯುನ್ನತ ಶಿಕ್ಷಣ ಮತ್ತು ಪಿ.ಎಚ್.ಡಿ. ಪಡೆದು ಅಮೇರಿಕದಲ್ಲಿ ಪತಿಯೊಂದಿಗಿದ್ದಾರೆ.

ಏಕೈಕ ಪುತ್ರ ಪುಣೆ ವಿ.ವಿ. ಎರಡನೆ ರ್ಯಾಂಕ್ ಪಡೆದು ಅಮೇರಿಕದಲ್ಲಿ ಇದ್ದಾನೆ. ಬಿ.ಎಸ್. ಕುರ್ಕಾಲ್ ಗೌ. ಸಂಪಾದಕರು ಇಂದಿರಾ ಸಾಲ್ಯಾನ್ ಹೇಮಾ ಹೆಗಡೆ ವಿಶ್ವನಾಥ ಶೆಟ್ಟಿ, ಸನತ್ ಕುಮಾರ ಜೈನ, ಉಮೇಶ ಎನ್ ಹೆಗಡೆ, ಸಂಪಾದಕ ಮಂಡಳಿಯಲಿದ್ದಾರೆ ಶಾ ಮಂ ಕೃಷ್ಣರಾವ್ ಸಲಹೆಗಾರಾಗಿ ಸಂವಾದಕರಾಗಿ ವಿಶ್ವನಾಥ ದೊಡ್ಮನೆಯವರು ಸಂಪಾದಿಸಿ ಪ್ರಕಾಶಿಸುತ್ತಿರುವ ಈ ಗ್ರಂಥ ಮಯೂರವರ್ಮ ಸಾಂಸ್ಕಕೃತಿಕ ಪ್ರತಿಷ್ಠಾನ ಪ್ರಕಾಶನದಲ್ಲಿ ಪ್ರಕಟಗೊಂಡಿದೆ. ಶ್ಯಾಮಸುಂದರ ಬಿದರಕುಂದಿ ಬೆನ್ನುಡಿ ಬರೆದಿದ್ದಾರೆ.

ಕೃ.ಶಿ. ಹೆಗಡೆ ಅವರ ಸಂಚಾರಿ ನಂಬರ 9890391552, ವಿಶ್ವನಾಥ ದೊಡ್ಮನೆ ಚರವಾಣಿ 9222137634, ಶ್ರೀ ಎಂ. ವೈ. ಮೆಣಸಿನಕಾಯಿ ಬೆಳಗಾವಿ. 9449209570.

 

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group