spot_img
spot_img

ಪುಸ್ತಕ ಪರಿಚಯ

Must Read

spot_img
- Advertisement -

ಪುಸ್ತಕದ ಹೆಸರು : ಸಂದೇಶಗಳು.(ಮಹಾತ್ಮರ ಅಣಿ ಮುತ್ತುಗಳು)
ಲೇಖಕರು : ಶ್ರೀ.ಆರ್.ಎಸ್.ಪಾಟೀಲ (ಸಂಗ್ರಹ)
ಪುಟಗಳು : ೩೩೨
ಬೆಲೆ: ೩೦೦
ಪ್ರಕಾಶಕರು: ಎಲ್.ಎಸ್.ಎನ್.ಪಬ್ಲಿಕೇಷನ್ – ಬೆಂಗಳೂರು.

ಪ್ರಿಯ ಓದುಗರೇ, ನೀವು ಕತೆ ಕಾದಂಬರಿ ನಾಟಕ ಆತ್ಮ ಚರಿತ್ರೆಯ ಪುಸ್ತಕಗಳನ್ನು ಓದಿರಬಹುದು.ಆದರೆ ನಾನು ತಮಗೆ ಇವೆಲ್ಲವುಗಳಕ್ಕಿಂತ ಭಿನ್ನವಾದ ಅದೇ ತೂಕದ ಒಂದು ಹೊಸ ಬಗೆಯ ಪುಸ್ತಕವನ್ನು ಪರಿಚಯಿಸುತ್ತಿದ್ದೇನೆ. ಲೇಖಕರು ಅಥವಾ ಸಂಗ್ರಹಕಾರರು ಶ್ರೀ ಆರ್.ಎಸ್.ಪಾಟೀಲ ಸಾಲಹಳ್ಳಿ, ಈಗಾಗಲೇ ಹೇಳಿದಂತೆ ಇದೊಂದು ವಿನೂತನ ಪುಸ್ತಕವು ಗ್ರಂಥ ತೆರನಾಗಿದೆ.ನಾವು ನೀವೆಲ್ಲರೂ ಅನೇಕ ದಿನ ಪತ್ರಿಕೆ ವಾರ ಪತ್ರಿಕೆಗಳನ್ನು ಓದಿದ್ದೇವೆ ಹಾಗೂ ಓದುತ್ತಲೂ ಇದ್ದೇವೆ.

ಇಂದು ನಾವು ಓದುವ ಬಹುತೇಕ ಎಲ್ಲ ಪತ್ರಿಕೆಗಳು ಮುಖಪುಟದಲ್ಲೇ ಶುಭಕಾರಿಯಂಬಂತೆ ಒಂದೊಂದು ನುಡಿ ಮುತ್ತನ್ನು ಪ್ರಕಟಿಸಿ ಓದುಗರ ಗಮನ ಸೆಳೆವ ಪ್ರಯತ್ನ ಮಾಡುತ್ತವೆ. ಅದು ಕೇವಲ ಗಮನ ಸೆಳೆವ ಪ್ರಯತ್ನವಾಗಿರದೇ ಬದುಕಿಗೆ ಕೊಡುವ ಶಕ್ತಿವರ್ಧಕ ಗುಳಿಗೆಯಾಗಿರುತ್ತದೆ. ಅವುಗಳನ್ನು ಓದಿದಾಗ ನಮ್ಮ ಅರಿವು ಜ್ಞಾನ ಕೌಶಲ್ಯಗಳು ತಮ್ಮಷ್ಟಕ್ಕೆ ತಾವೇ ಹಿಗ್ಗಿಕ್ಕೊಳುತ್ತವೆ .ಅಲ್ಲದೇ ನೊಂದ ಜೀವಕ್ಕೆ ಕೆಲವು ಸಲ ಶಾಂತಿಯನ್ನು ನೆಮ್ಮದಿಯನ್ನು ಕೊಡುತ್ತವೆ‌.

- Advertisement -

ಅಂತವುಗಳನ್ನು ನಾವು ನೀವೆಲ್ಲರೂ ಓದಿ ಮುಂದೆ ಸಾಗಿ ಬಂದಿದ್ದೇವೆ.ಆದರೆ ಲೇಖಕರು ಮಾತ್ರ ಅವುಗಳನ್ನು ಓದಿ ಮುಂದೆ ಸಾಗದೇ ಆ ನುಡಿ ಮುತ್ತುಗಳನ್ನೆಲ್ಲಾ ಆಯ್ದುಕೊಂಡು ಕೂಡಿ ಹಾಕಿ ಅವುಗಳನ್ನು ಹಾಳೆಗಳ ಪುಟಗಳಲ್ಲಿ ಜೋಡಿಸಿ ನೋಡಿದ್ದಾರೆ. ಆಗ ಅದರ ತೂಕ ಮೌಲ್ಯದ ರೀತಿ ಬೆರಗುಗೊಳಿಸುವಷ್ಟು ಅದ್ಭುತ ವಾಗಿದೆ.ಆ ಪುಸ್ತಕದ ಹೆಸರೇ : ” ಸಂದೇಶ” ಗಳೆಂದು. ಅಲ್ಲದೆ ತಲೆ ಬರಹದ ಕೆಳಗೆ ಮಹಾತ್ಮರ ಅಣಿ ಮುತ್ತುಗಳು ಎಂದು ನಮ್ರವಾಗಿ ಬರೆದುಕೊಂಡಿದ್ದಾರೆ.

ಈ ಪುಸ್ತಕ ದ ಲ್ಲಿ ಸುಮಾರು ೨೭೩೨ ಅಣಿ ಮುತ್ತುಗಳಿದ್ದು ಅವು ದೇಶ ವಿದೇಶದ ಸಾಧಕರು ಹೇಳಿದವುಗಳಾಗಿವೆ. ಅವೆಲ್ಲ ನಮ್ಮ ವಿದ್ಯಾರ್ಥಿಗಳಿಗೆ , ತರುಣರಿಗೆ ಅವಶ್ಯಕವಾಗಿ ಬೇಕಾದ ನುಡಿಗಳೆಂದು ನಾನು ಭಾವಿಸುತ್ತೇನೆ. ಅವು ಓದುಗನಿಗೆ ಜ್ಞಾನ ಶಕ್ತಿಯನ್ನು ಮಾತ್ರ ಕೊಡದೇ ಆತನ ವ್ಯಕ್ತಿತ್ವ ವಿಕಾಸದ ಕಾರ್ಯದಲ್ಲಿ ನೆರವಾಗುತ್ತವೆ.

ಉದಾ: ತಂದೆ ತಾಯಿಗಳ ಘನವಾಗಿ ವಂದಿಸುವಂಗೆ ಬಂದ ಕುತ್ತುಗಳು ಬಯಲಾಗಿ //ಸ್ವರ್ಗ// ಮುಂದೆ ಬಂದಕ್ಕು ಸರ್ವಜ್ಞ .

- Advertisement -

ಅದರಂತೆ : ಗುರುವಿಂದ ಬಂಧುಗಳು
ಗುರುವಿಂದೆ ಪರ ದೈವ
ಗುರುವಿಂದಲಾದುದು ಪರದೈವ // ಪುಣ್ಯವದು ಲೋಕಕ್ಕೆ
ಗುರುವಿಂದ ಮುಕ್ತಿ ಸರ್ವಜ್ಞ.

ಗುರು ಕೃಪೆಯಾದರೆ ಪಾಮರ ಪಂಡಿತನಾಗುವನು.ಬಡವ ಬಲ್ಲಿದನಾಗಬಲ್ಲ

ಅನ್ನ ಪರಬ್ರಹ್ಮ –ಕುವೆಂಪು

ನಗುವಿಗಿಂತ ಅಗ್ಗದ ಔಷಧ ಇನ್ನೊಂದಿಲ್ಲ ಸದಾ ಹಸನ್ಮುಖಿಗಳಾಗಿರೋಣ –ವಿಶಿಷ್ಟ
ಪ್ರಯೋಗ

ಇಂತಹ ಸಾವಿರಾರು ನುಡಿಮುತ್ತುಗಳು ಪುಸ್ತಕದಲ್ಲಿವೆ ಅವುಗಳನ್ನು ಓದಿಯೇ ಆನಂದಿಸಬೇಕು.

ಒಮ್ಮೆ ಓದಲು ಕುಳಿತರೆ ಪುಸ್ತಕವನ್ನು ಕೆಳಗೆ ಇಡಲು ಮನಸ್ಸಾಗದು. ಲೇಖಕರ ಶ್ರಮವನ್ನು ಅವರ ಜೀವನ ಶಿಸ್ತನ್ನು ಗೌರವಿಸಬೇಕು.
ಎಸ್ಎಲ್‌ಎನ್.ಪಬ್ಲಿಕೇಷನ್ — ಬೆಂಗಳೂರು ಈ ಪುಸ್ತಕ ವನ್ನು ಪ್ರಟಿಸಿದೆ.

ಯಮುನಾ.ಕಂಬಾರ
ರಾಮದುರ್ಗ

- Advertisement -
- Advertisement -

Latest News

ಹನಿಗವನಗಳು

ಹನಿಗವನಗಳು 1) ಸುಳ್ಳುಗಾರರು ಹತ್ತು ನಾಲಿಗೆಯ ರಾವಣ ಹೇಳಲಿಲ್ಲ ಒಂದು ಸುಳ್ಳು ಒಂದೇ ನಾಲಿಗೆಯ ರಾಜಕಾರಣಿ ಹೇಳುತ್ತಾನೆ ದಿನಕ್ಕತ್ತು ಸುಳ್ಳು! 2) ಶೀಲಾ ನೆರೆಮನೆ ಶೀಲಾ ಪರ ಪುರುಷರೊಡನೆ ಸೇರಿ ಹೆಸರು ಕೆಡಿಸಿಕೊಂಡಳು 3) ಟಿವಿ ಹಾವಳಿ ಮನೆಯಲ್ಲಿ ಟಿವಿ ಮುಂದೆ ಸದಾ ಇರುವ ವಿದ್ಯಾ ರ್ಥಿಗಳು ಶಾಲೆಯಲ್ಲಿ ಹಿಂದೆ ಬೀಳುವರು. 4) ವಾಸ್ತವ ಕಟ್ಟುವವು...
- Advertisement -

More Articles Like This

- Advertisement -
close
error: Content is protected !!
Join WhatsApp Group