ಪ್ರಚಾರದ ಪರವಾನಿಗೆ ನೀಡಿ ರದ್ದುಗೊಳಿಸಿದ ಪೊಲೀಸ್ ಇಲಾಖೆ, ದಲಿತ ಸಂಘದ ಆಕ್ರೋಶ

Must Read

ಬೀದರ – ಇದೇ ದಿ. ೧೧ ರಂದು ಬೀದರ ಬಂದ್ ಪ್ರಚಾರ ನಡೆಸಲು ನೀಡಿದ ಪರವಾನಿಗೆಯನ್ನು ಪೊಲೀಸ್ ಇಲಾಖೆ ರದ್ದುಗೊಳಿಸಿದ್ದು ದಲಿತ ಒಕ್ಕೂಟದ ಆಕ್ರೋಶಕ್ಕೆ ಕಾರಣವಾಗಿದ್ದು ಇಲಾಖೆಯು ಜಿಲ್ಲಾ ಉಸ್ತುವಾರಿ ಸಚಿವರ ಕೈ ಗೊಂಬೆ ಆಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಲಾಗಿದೆ.

ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟನೆ ಮಾಡುವ ಹಕ್ಕು ಇದೆ. ಔರಾದ ಪಟ್ಟಣದಲ್ಲಿ ಮೊದಲು ಬಂದ್ ಗೆ ಅನುಮತಿ ನೀಡಿರುವ ಪೊಲೀಸರು ಉಸ್ತುವಾರಿ ಸಚಿವರ ಒತ್ತಡದಿಂದ ಪರವಾನಿಗೆ ರದ್ದು ಮಾಡಿರುವುದಾಗಿ ಹೇಳುತ್ತಿದ್ದು ವಿಚಿತ್ರವಾಗಿದೆ.

ತನ್ನ ಅಧಿಕಾರದ ದುರುಪಯೋಗ ಪಡಿಸಿಕೊಂಡು ಮೂಲ ದಲಿತರಿಗೆ ಕಿರುಕುಳ ನೀಡುತ್ತಿರುವ ಪ್ರಭು ಚವ್ಹಾಣ ನ್ಯಾಯ ಮೂರ್ತಿ ಎ. ಜೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರಲು ಬಿಡುತ್ತಿಲ್ಲವೆಂಬ ಆರೋಪ ದಲಿತ ಸಂಘಟನೆಗಳು ಮಾಡಿವೆ.

ಸದಾಶಿವ ಅಯೋಗದ ವರದಿಯನ್ನು ವಿರೋಧ ವ್ಯಕ್ತಪಡಿಸುತ್ತಿರುವ ಪಶು ಸಂಗೋಪನಾ ಸಚಿವರಾದ ಪ್ರಭು ಚವ್ಹಾಣ ರವರನ್ನು ಸಚಿವ ಸಂಪುಟದಿಂದ ಕೂಡಲೇ ಕೈ ಬಿಡಬೇಕೆಂದು ಒತ್ತಾಯಿಸಿ ಇದೆ ಅಕ್ಟೋಬರ್ 11 ರಂದು ಬೀದರ್ ಬಂದ್ ಮಾಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ತಾಲೂಕಿನಾದ್ಯಂತ ಪ್ರಚಾರಕಾಗ್ಗಿ ಧ್ವನಿ ವರ್ಧಕ ಬಳಸಲು ಅನುಮತಿ ಪಡೆದು ಪ್ರಚಾರ ಮಾಡುವ ಸಂದರ್ಭದಲ್ಲಿ ಸಚಿವ ಪ್ರಭು ಚವ್ಹಾಣ್ ರವರು ಪೊಲೀಸರಿಂದ ಆಟೋವನ್ನು ತಡೆದು ಹೋರಾಟಗಾರರನ್ನು ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ. ಮೊದಲು ಪರವಾನಿಗೆ ನೀಡಿದ ಪೊಲೀಸರು ಆಟೋ ತಡೆದು ಪರವಾನಿಗೆ ಕ್ಯಾನ್ಸಲ್ ಎಂದು ಪ್ರಚಾರ ಕಾರ್ಯಕ್ಕೆ ತಡೆ ಒಡ್ಡಿದ್ದನ್ನು ದಲಿತ ಸಂಘಟನೆಗಳು ವಿರೋಧಿಸಿವೆ.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group