- Advertisement -
ಮೂಡಲಗಿ: ಇಲ್ಲಿಯ ಪಶು ಆಸ್ಪತ್ರೆ ಹಾಗೂ ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ ಸಹಯೋಗದಲ್ಲಿ ಫೆ. 26 ರಂದು ಬೆಳಿಗ್ಗೆ 11ಕ್ಕೆ ಬರಡು ರಾಸುಗಳ ಚಿಕಿತ್ಸಾ ಶಿಬಿರ ಹಾಗೂ ಕರುಗಳಿಗೆ ಜಂತು ನಾಶಕ ಔಷಧಿ ವಿತರಣಾ ಕಾರ್ಯಕ್ರಮ ಇರುವುದು. ಶಿಬಿರದಲ್ಲಿ ತಜ್ಞ ಪಶು ವೈದ್ಯರು ಭಾಗವಹಿಸುವರು.
ರೈತರು ಅಧಿಕ ಸಂಖ್ಯೆಯಲ್ಲಿ ಶಿಬಿರದ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಲಯನ್ಸ್ ಕ್ಲಬ್ ಕಾರ್ಯದರ್ಶಿ ಸಂಜಯ ಮೋಕಾಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.