ಬೀದರನಲ್ಲಿ ಸಂಸದರಿಂದಲೇ ಕೋರೋನಾ ನಿಯಮ ಉಲ್ಲಂಘನೆ

Must Read

ಬೀದರ – ಕೋರೋನಾ ನಿಯಮ ಏನೇ ಇದ್ದರೂ ಕೇವಲ ಸಾಮಾನ್ಯ ಜನರಿಗೆ ಹೊರತು ರಾಜಕೀಯ ನಾಯಕರಿಗಲ್ಲ ಅದರಲ್ಲೂ ಬಿಜೆಪಿ ಸಂಸದ ಭಗವಂತ ಖೊಬಾ ಅವರಿಗೆ ನಿಯಮಗಳು ಸಂಬಂಧಿಸಿಲ್ಲ ಎನ್ನಬಹುದು ಏಕೆಂದರೆ ಅವರು ಸಂಸದರು ಅಂದುಕೊಂಡ ಬೀದರ ಜಿಲ್ಲೆಯ ಅಧಿಕಾರಿಗಳ ಕಾರ್ಯ ವೈಖರಿ ಕಂಪ್ಲೀಟ್ ವಿವರ ಇಲ್ಲಿದೆ ನೋಡಿ.

ಕಳೆದ ಒಂದು ವಾರದಿಂದ ಮಹಾರಾಷ್ಟ್ರದಲ್ಲಿ ಕರೋನಾ ವೈರಸ್ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಗಡಿ ಜಿಲ್ಲೆಯ ಬೀದರ ನಲ್ಲಿ
ಪೋಲಿಸರು ಕಟ್ಟೆಚ್ಚರ ವಹಿಸಿ ಪ್ರತಿದಿನ ಕೂಲಿಗಾಗಿ ಓಡಾಡುವ ಕಾರ್ಮಿಕರನ್ನು ಮತ್ತು ಸಣ್ಣ ಸಣ್ಣ ವ್ಯಾಪಾರಿಗಳು ಹಾಗೂ ಪ್ರಯಾಣಿಕರನ್ನು ತಡೆದು ತಪಾಸಣೆಯನ್ನು ಮಾಡುವ ಅಧಿಕಾರಿಗಳಿಗೆ ಸಂತ ಶ್ರೀ ಸೇವಾಲಾಲ್ ಜಯಂತಿಯ ಹೆಸರಿನಲ್ಲಿ ಮಹಾರಾಷ್ಟ್ರದ ಗಡಿಯನ್ನು ಹೊಂದಿರುವ ಹುಲಸೂರ ನಲ್ಲಿ ಸಂಸದ ಭಗವಂತ ಖೂಬಾ ಕೋರೋನಾ ನಿಯಮ ಉಲ್ಲಂಘನೆ ಮಾಡಿ ಒಬ್ಬರೂ ಮಾಸ್ಕ ಹಾಕದೆ ಡಿಜಿ ಮುಂದೆ ಕುಣಿದು ಕುಪ್ಪಳಿಸುತಿರುವದು ನೋಡಿದರೆ ಕೊರೋನಾ ನಿಯಮ ಏನೆ ಇದ್ದರೂ ಕೇವಲ ಸಾಮಾನ್ಯ ಜನರಿಗೆ ಹೊರತು ರಾಜಕಿಯ ನಾಯಕರಿಗಲ್ಲ ಎಂಬುದು ಸಾಬೀತಾದಂತಾಗಿದೆ.

ಸಾಮಾನ್ಯ ಜನರು ಮೋಜು ಮಸ್ತಿ ಮಾಡಬೇಕಾದರೆ ಕರೋನಾ ನಿಯಮ ಉಲ್ಲಂಘನೆ ಯಾಗುತ್ತದೆ. ಅದಕ್ಕೆ ಅವರು ದಂಡ ಕಟ್ಟಬೇಕು ಆದರೆ ಭಾರತೀಯ ಜನತಾ ಪಕ್ಷದ ಸಂಸದ ಅಥವಾ ಬಿಜೆಪಿ ಕಾರ್ಯಕರ್ತರು ನೇತೃತ್ವದಲ್ಲಿ ಯಾವುದೆ ಕಾರ್ಯಕ್ರಮಗಳು ಜರುಗಿದರೆ ಅದು ಯಾವದೆ ನಿಯಮದ ಉಲ್ಲಂಘನೆ ಇಲ್ಲ ಎನ್ನುವುದು ವಿಪರ್ಯಾಸ.

ಬೀದರ ಸಂಸದ ಭಗವಂತ ಖೂಬಾ ಅವರು ಈ ರೀತಿಯ ನಿಯಮಗಳನ್ನು ಉಲ್ಲಂಘನೆ ಮಾಡಿದರೂ ಅಧಿಕಾರಿಗಳು ಯಾವದೆ ಪ್ರತಿಕ್ರಿಯೆ ನೀಡದಿರುವದನ್ನು ನೋಡಿದರೆ ಭಾರತೀಯ ಜನತಾ ಪಕ್ಷವು ಕಳೆದ ವರ್ಷದಿಂದ ತಮ್ಮ ವಿರೋಧಿ ಗಳನ್ನು ಮಟ್ಟ ಹಾಕುವುದಕ್ಕೆ ಕರೋನಾ ವೈರಸ್ ನಿಯಮಗಳನ್ನು ಉಪಯೋಗಿಸುತ್ತಿದೆಯೇನೋ ಎಂಬ ಗುಮಾನಿ ಸಾರ್ವಜನಿಕರಿಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಹೇಳಬಹುದು

ವರದಿ: ನಂದಕುಮಾರ ಕರಂಜೆ
Times of ಕರ್ನಾಟಕ, ಬೀದರ

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group