Homeಸುದ್ದಿಗಳುಬೀದರ ಡಿಸಿಸಿ ಬ್ಯಾಂಕ್ ಅಧ್ಯಕ್ಷರಿಗೆ ಕೊರೋನಾ ಪಾಜಿಟಿವ್

ಬೀದರ ಡಿಸಿಸಿ ಬ್ಯಾಂಕ್ ಅಧ್ಯಕ್ಷರಿಗೆ ಕೊರೋನಾ ಪಾಜಿಟಿವ್

ಬೀದರ – ಬೀದರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಕೋರೋನಾ ಇರುವುದು ದೃಢಪಟ್ಟಿದೆ.

ಬೀದರ್ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದು ಡಿಸಿಸಿ ಬ್ಯಾಂಕ್ ಅಧ್ಯಕ್ಷರು ನಿನ್ನೆ ಇಲ್ಲಿನ ಬ್ರಿಮ್ಸ್ ನಲ್ಲಿ ಆರ್ ಟಿಪಿಸಿಆರ್ ಪರೀಕ್ಷೆಗೆ ಒಳಗಾಗಿದ್ದರು. ಅವರ ವರದಿ ಪಾಸಿಟಿವ್ ಬಂದಿದೆ ಎಂದು ಬ್ರಿಮ್ಸ್ ಮೂಲಗಳು ಖಚಿತಪಡಿಸಿವೆ. ಉಮಾಕಾಂತ ನಾಗಮಾರಪಳ್ಳಿ ಅವರ ಪತ್ನಿಗೂ ಸೋಂಕು ತಗುಲಿದೆ.

ಡಿಸಿಸಿ ಬ್ಯಾಂಕ್ ಕೆಲಸ ಹಾಗೂ ನಾನಾ ಸಭೆ, ಸಮಾರಂಭ ನಿಮಿತ್ತ ವಿವಿಧೆಡೆ ಸಂಚರಿಸಿದರು. ಬೆಂಗಳೂರಿಗೂ ಹೋಗಿ ಬಂದಿದ್ದರು. ಈ ವೇಳೆ ಸೋಂಕಿತರ ಸಂಪರ್ಕದಿಂದ ಇವರಿಗೆ ವೈರಸ್ ತಗುಲಿರಬಹುದು ಎನ್ನಲಾಗಿದೆ.

ಜಿಲ್ಲೆಯಲ್ಲಿ ಎರಡು ವಾರಗಳಿಂದ ಕರೊನಾತಂಕ ಹೆಚ್ಚಾಗಿದೆ. ವಾರದಲ್ಲಿ ನೂರಕ್ಕೂ ಹೆಚ್ಚು ಕೇಸ್ ಬಂದಿವೆ. ಶುಕ್ರವಾರ ಹೊಸದಾಗಿ 15 ಜನರಿಗೆ ಪಾಸಿಟಿವ್ ಬಂದಿದೆ. ಸಂಸದ ಭಗವಂತ ಖೂಬಾ ಅವರ ಪುತ್ರಿಗೂ ಇತ್ತೀಚೆಗೆ ಕರೊನಾ ಸೋಂಕು ದೃಢಪಟ್ಟಿದೆ.

ವರದಿ: ನಂದಕುಮಾರ ಕರಂಜೆ
Times of ಕರ್ನಾಟಕ, ಬೀದರ

RELATED ARTICLES

Most Popular

error: Content is protected !!
Join WhatsApp Group