ಭಕ್ತಿಗೀತೆ: ಶ್ರೀ ಮಂಜುನಾಥ

Must Read

ಶ್ರೀ ಮಂಜುನಾಥ

ಮಂಜುನಾಥನ ಭಕ್ತಿಯಿಂದಲಿ
ಶುದ್ಧ ಮನದಲಿ ಭಜಿಸಿರಿ
ನಂಜು ಚಣದಲಿ ಮಂಜು ಕರಗಿದ ಹಾಗೆ ಕಳೆವುದು ಪೂಜಿಸಿ

ಧರೆಯ ಮೇಲ್ಗಡೆ ಧರ್ಮ ಉಳಿಸಲು
ಭುವಿಗೆ ಬಂದನು ದೇವನು
ಇಳೆಯ ತುಂಬವು ಧರ್ಮ ಜ್ಯೋತಿಯ
ಬೆಳಗಿ ನಿಂತನು ಜಗವನು||

ಮಂಜುನಾಥನೆ ಪರಮ ಪುನೀತ
ಧರ್ಮಸ್ಥಳದವಾಸನೆ
ನಂಜನುಂಡಾ ಜಗದ ಪಾಲಕ
ಸರ್ವಶಕ್ತ ಪ್ರಪೂಜಿತ||

ಭಕ್ತಿ ಗೊಲಿಯುವ ಚಂದ್ರಶೇಖರ
ಶಕ್ತಗೊಳಿಸೋ ಭಕ್ತರ
ಯುಕ್ತಿ ಕರುಣಿಸಿ ಭವಣೆ ನೀಗಿಸು
ಮುಕ್ತಿ ಯುಕ್ತನೆ ಶಂಕರ ||

ಪರಮ ಪಾವನಿ ಸತಿಯು ಪಾರ್ವತಿ
ಹೃದಯ ಕಮಲದಿ ಪೊರೆಯುವೆ
ಶಿರದಿ ಗಂಗೆಯ ಧರಿಪ ಭೂಪತಿ
ಶಿರವ ಬಾಗುತ ನಮಿಸುವೆ||

ಕಾಯಿ ಕರ್ಪೂರ ದೂಪದೀಪವ
ಹಣ್ಣು ಅರ್ಪಿಸಿ ನುತಿಸುವೆ
ತಾಯಿ ತಂದೆಯ ಪ್ರೀತಿ ತೋರುತ
ನಿತ್ಯ ನಮ್ಮನು ಸಲಹುನಿ||

ಶ್ರೀ ಈರಪ್ಪ ಬಿಜಲಿ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group