spot_img
spot_img

ಭೂಮಿತಾಯಿ ವಿಶ್ವಶಕ್ತಿ, ಭಾರತಮಾತೆ….

Must Read

- Advertisement -

ವೈಕುಂಠವೇ ಬೇರೆ ಕೈಲಾಸವೇ ಬೇರೆ,ಬ್ರಹ್ಮಲೋಕವೇ ಬೇರೆ,ಭೂ ಲೋಕವೇ ಬೇರೆ…..ಬೇರೆ ಬೇರೆಯಾಗಿದ್ದನ್ನು ಒಂದು ಮಾಡಲು ಬರುವುದು ಭೂಲೋಕದಲ್ಲಿ ಮಾತ್ರ. ಕಾರಣ ಭೂಮಿಯಿಲ್ಲದೆ ಜೀವನವಿಲ್ಲ.ಮಾನವನ ಆತ್ಮಕ್ಕೆ ಮುಕ್ತಿ ಸಿಗಬೇಕಾದರೆ ಭೂಮಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ನಡೆಸಿಕೊಳ್ಳಬೇಕು.

ಭೂಮಿ ತಾಯಿ, ವಿಶ್ವಶಕ್ತಿ,ಭಾರತಮಾತೆ, ಕನ್ನಡಮ್ಮ, ಹೆತ್ತತಾಯಿ…ಕೊನೆಯಲ್ಲಿರುವ ಹೆತ್ತ ತಾಯಿಯಲ್ಲಿ ಸಾತ್ವಿಕತೆ ಇಲ್ಲವಾದರೆ ಮೇಲಿನ ಶಕ್ತಿಯನ್ನು ಬೆಳೆಸುವುದರಲ್ಲಿ ಅರ್ಥ ವಿಲ್ಲ ಎನ್ನಬಹುದು. ಇದಕ್ಕೆ ಬೇಕಿದೆ ಸ್ತ್ರೀಗೆ ಜ್ಞಾನದ ಶಿಕ್ಷಣ.

ಹಿಂದೂಗಳ ಪವಿತ್ರ ಆಚರಣೆಗಳ ಸಂದರ್ಭದಲ್ಲಿ ಪರಧರ್ಮದವರ ಹಬ್ಬದ ಆಚರಣೆಯೂ ಕೆಲವು ಬಾರಿ ಬಂದಿರುತ್ತದೆ. ಹಿಂದೂಗಳು ಉಪವಾಸ,ವ್ರತ,ನಿಯಮ,
ದೇವರು,ಮಡಿ,ಮೈಲಿಗೆ ಮೂಲಕ ಪರಮಾತ್ಮನ ಹತ್ತಿರ ಹೋಗುವ ಪ್ರಯತ್ನ ನಡೆಸಿದರೆ, ಪರರು ಇದಕ್ಕೆ ವಿರುದ್ದವಾಗಿ ವೈಭವವನ್ನು ಪ್ರದರ್ಶಿಸಿ ಆಚರಿಸಿ ಮನರಂಜನೆಯಲ್ಲಿರುತ್ತಾರೆ.

- Advertisement -

ಒಂದು ವ್ಯತ್ಯಾಸ ವೆಂದರೆ ಪರರ ಆಚರಣೆ ಒಗ್ಗಟ್ಟನ್ನು ಪ್ರದರ್ಶಿಸುವುದಾಗಿರುತ್ತದೆ.ಪ್ರದರ್ಶನಕ್ಕೆ ಮರುಳಾಗಿ ಪ್ರದಕ್ಷಿಣೆ ಮಾಡುವವರ ಸಂಖ್ಯೆ ಬೆಳೆದಂತೆಲ್ಲಾ ಧರ್ಮದ ಆಚರಣೆಗಳೂ ಹೆಚ್ಚು ಹೆಚ್ಚಾಗಿ ಹೊರಗಿನ ಜನರಿಗೆ ಪ್ರದರ್ಶನವಾಗುತ್ತಾ ಅದರ ಮೂಲ ಸತ್ವ,ತತ್ವ,ಸತ್ಯ,ಅರ್ಥ, ಕಾರಣವನ್ನು ತಿಳಿಸದೆ ಮನಸ್ಸಿಗೆ ಬಂದ ಹಾಗೆ ಮುಂದೆ ನಡೆದ ಮನುಕುಲಕ್ಕೆ ಪರಮಾತ್ಮನೆಂದರೆ ಹೊರಗಿರುವ ಶಕ್ತಿ ದೇವತೆಗಳಾಗಿ ಪ್ರತಿಮೆಗಳನ್ನು ಮಾಡಿಕೊಂಡು ತಮ್ಮ ಸ್ವಂತ ಬೇಡಿಕೆಗೆ ತಕ್ಕಂತೆ ಪೂಜೆ,ಆಚರಣೆಗಳು ಬೆಳೆದವು.

ಆದರೆ, ಹೊರಗೆ ನಡೆದ ಮನಸ್ಸನ್ನು ಒಳಗೆಳೆದುಕೊಂಡು ಒಳಗೆಇದ್ದ ಸತ್ಯ,ಧರ್ಮ ,ನ್ಯಾಯ, ನೀತಿ,ಕರ್ಮಕ್ಕೆ ಬೆಲೆಕೊಡದೆ ಮಾನವನ ಬೌತಿಕ ಬಯಕೆಗಳನ್ನು ಎಷ್ಟು ಪೂರೈಸಲು ದೇವರಿಗೆ ಸಾಧ್ಯ?

ಹೀಗಾಗಿ, ಇಂದಿನ‌ ಮಾನವನಿಗೆ ನಾನೆಲ್ಲಿ ತಪ್ಪು ಮಾಡಿದೆ ಎಂದು ಕೇಳಿಕೊಳ್ಳಲಾಗದೆ ಹೊರಗಿರುವವರ ಮೇಲೆ,ಸರ್ಕಾರದ ಮೇಲೆ ಇನ್ನಿತರರ ಮೇಲೇ ತಪ್ಪನ್ನು ಹೊರಿಸಿ ಮನಸ್ಸನ್ನು ಹೊರಗಿನ ರಾಜಕೀಯದಲ್ಲಿ ಬಿಟ್ಟು ವ್ಯವಹಾರಕ್ಕೆ ಕೊಡುವ ಸಹಕಾರ, ಸತ್ಯಕ್ಕೆ ಕೊಡಲಾಗದೆ ಅತಂತ್ರಸ್ಥಿತಿಗೆ ಜೀವನ ತಲುಪಿದೆ.

- Advertisement -

ಹಾಗಾದರೆ, ಇಲ್ಲಿ ಸ್ವತಂತ್ರ ರಾಗಿರುವವರು ಯಾರು?
ತಮ್ಮ ಮನಸ್ಸಿಗೆ ಬಂದ ಹಾಗೆ ನಡೆಯುವವರನ್ನು ಸ್ವೇಚ್ಚಾಚಾರಿ ಎನ್ನಲಾಗದು. ಕೆಲವು ಸದ್ವಿಚಾರಗಳನ್ನುತಿಳಿದು ಅದರಂತೆ ನಡೆಯುವವರು ಸ್ವತಂತ್ರ ಜ್ಞಾನದಿಂದ ನಡೆಯಬಹುದು.

ಅಂತಹವರಿಗೆ ಸಹಕಾರದ ಅಗತ್ಯಇಲ್ಲವಾದರೂ, ಅವರನ್ನು ನೋಡಿ ತಾವೂ ಅವರಂತೆ ನಡೆಯುವವರಿಗೂ ಸ್ವತಂತ್ರ ಜ್ಞಾನದೆಡೆಗೆ ನಡೆಸುವುದುಆ ಪರಮಾತ್ಮನೆ. ಆದರೆ, ಹಾಗೆ ತಿಳಿದು ನಡೆಯಲೂ ನಮ್ಮಲ್ಲಿ ಸತ್ಯಜ್ಞಾನವಿರಲೆಬೇಕು.

ಇದನ್ನು ಶಿಕ್ಷಣದಿಂದ ನೀಡಿ,ಬೆಳೆಸಿ,ಕಲಿಸುವುದು ಧರ್ಮ. ಏಕ ರೀತಿಯ ಶಿಕ್ಷಣಒಂದು ದೇಶವನ್ನು,ದೇಹವನ್ನು ಗಟ್ಟಿಯಾಗಿಸುವ ಜೊತೆಗೆ ಒಗ್ಗಟ್ಟನ್ನು ಬೆಳೆಸುತ್ತದೆ.

ಸ್ವದೇಶ ಶಿಕ್ಷಣವನ್ನುಬೆಳೆಸುವುದೆ ಪ್ರಜಾಧರ್ಮ.‌ ಪರಕೀಯರ ಶಿಕ್ಷಣವನ್ನು ಬೆಳೆಸಿದರೆ ಪರರಿಗೆ ಸಹಕರಿಸಿದಂತೆ. ಧರ್ಮದಲ್ಲಿ ನಮ್ಮಜನ್ಮದ ಮೂಲವನ್ನು ಸರಿಯಾಗಿ ತಿಳಿದು ನಡೆ ನುಡಿಯ ಮೂಲಕ ಬೆಳೆಸಿದಾಗಲೆ ಸತ್ಕರ್ಮ.

ಶಿಕ್ಷಣದಲ್ಲಿ, ಮೂಲ ಶಿಕ್ಷಣದಲ್ಲಿ ಸಾತ್ವಿಕ ಜ್ಞಾನವನ್ನು ಬೆಳೆಸಿ ,ಅವರವರ ಮೂಲ ಧರ್ಮ ಕರ್ಮಕ್ಕೆ ತಕ್ಕಂತೆ ಪ್ರತಿಭೆಯನ್ನು ಬೆಳೆಸಿಕೊಂಡು ಸ್ವತಂತ್ರ ಜೀವನ ನಡೆಸಲು ಕಲಿಸಿ ಬಿಡುವುದಷ್ಟೆ ಪೋಷಕರ ಧರ್ಮ. ಇದು ಪ್ರಜಾಪ್ರಭುತ್ವದಲ್ಲಿ ಸರ್ಕಾರದಿಂದ ಸಾಧ್ಯವಿದೆ.ಅಂದರೆ ನಾವು ನೀಡುವ ಸಹಕಾರದಿಂದ ಮಾತ್ರ ಸಾಧ್ಯವಿದೆ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಅಣಕವಾಡು : ಮದನಾರಿ ಸತಿ ರೇಣುಕೆ

ಮದನಾರಿ ಸತಿ ರೇಣುಕ ಮದ‌ವೇರಿದ ತುಂಬಿದ ತನು ತಂದಳು ಸತಿ ರೇಣುಕೆ ಮನೆಮುಂದಿನ ಅಂಗಳದಲಿ ಕಸಬಳಿದಳು‌ ಬಳಲಿಕೆ ಏದುಸಿರನು‌ ಬಿಡುಬಿಡುತಲಿ ನೀರನು ಚಳೆಹೊಡೆದಳು ಆಯಾಸದಿ ಬಾಗುತ್ತಲಿ ರಂಗೋಲಿಯ ಬರೆದಳು ಮಹಾಮನೆಯ ಮಹಾದೇವಿ ಮಹಾಕಾಯ ಹೊತ್ತಳು ಬೇಸರದಲಿ ಬುಸುಗುಡುತಲಿ ನಿಟ್ಟುಸಿರನು‌ ಬಿಟ್ಟಳು ಹಾದಾಡುವ ಹೊಸತಿಲಲ್ಲಿ ಬಂದಳು ಹೊಯ್ದಾಡುತ ಮನೆಬಾಗಿಲ...
- Advertisement -

More Articles Like This

- Advertisement -
close
error: Content is protected !!
Join WhatsApp Group