Homeಸುದ್ದಿಗಳುಮಂಜುನಾಥ ರೇಳೇಕರ್... ಜವಾರಿ ತಿನ್ನಿ ಗೋ ಕೊರೊನ ಎನ್ನಿ !

ಮಂಜುನಾಥ ರೇಳೇಕರ್… ಜವಾರಿ ತಿನ್ನಿ ಗೋ ಕೊರೊನ ಎನ್ನಿ !

ಪ್ರಿಯ ನಾಗರಿಕ ಬಂಧುಗಳಲ್ಲಿ ಚಿಕ್ಕ ಕಲಾವಿದರಿಂದ ಮನವಿ ಬಹಳ ಗಮನ ಹರಿಸಬೇಕಾದ ವಿಷಯ 256 ದೇಶಗಳಲ್ಲಿಯೇ ವಿಭಿನ್ನವಾದ ದೇಶ ಭಾರತ ಕೊರೊನದಂತಹ ಮಹಾಮಾರಿ ರೋಗ ನಮ್ಮ ದೇಶಕ್ಕೆ ಕಾಲಿಡಬಾರದಿತ್ತು ಆದರೂ ಕಾಲಿಟ್ಟಿದೆ.

ಇದರ ಹಿನ್ನಲೆ ಹೀಗಿದೆ. ಹಲವಾರು ದೇಶಗಳಿದ್ದರೂ ಪ್ರಮುಖವಾಗಿ ಚೀನಾ ದೇಶದಲ್ಲಿಯೇ ಮಹಾಮಾರಿ ಹುಟ್ಟಲು ಕಾರಣ ಇದೆ.

ಮನುಷ್ಯರು ಸಸ್ಯಾಹಾರಿ ಹಾಗೂ ಮಾಂಸಾಹಾರಿಯೂ ಎಂದು ಎಲ್ಲರಿಗೂ ತಿಳಿದ ವಿಷಯ. ಆದರೆ ಚೀನಾದಲ್ಲಿ ಮನುಷ್ಯನಿಗೆ ವಿಷಾಹಾರ ಉಣಬಡಿಸಲು ಪ್ರಾಣಿ ಪಕ್ಷಿಗಳನ್ನು ವಿವಿದ ರೀತಿಯಲ್ಲಿ ಬೇಯಿಸಿದಾಗ ಹುಟ್ಟಿದಂತಹ ಅಥವಾ ಬೇಕಂತಲೇ ತಯಾರಿಸಿದ ವೈರಸ್ ರೋಗವೇ ಕೊರೊನ.

ಮನುಷ್ಯನಿಗೆ ಯಾವುದೇ ರೋಗ ಬರಲು ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ತಿನ್ನುವ ಊಟದ ಮೂಲಕವೇ ನಮ್ಮ ದೇಹ ಸೇರುತ್ತದೆ. ನಾವು ನಗರೀಕರಣಕ್ಕೆ ಹೆಚ್ಚು ಒತ್ತುಕೊಟ್ಟು ಲಕ್ಷಾಂತರ ಕಾರ್ಖಾನೆಗಳಿಂದ ಗಾಳಿಯನ್ನು ಹಾಳು ಮಾಡಿ, ಅಗತ್ಯಕ್ಕಿಂತ ಪ್ಲಾಸ್ಟಿಕ್ ಬಳಸಿ ಭೂಮಿಯಲ್ಲಿನ ನೀರನ್ನು ಹಾಳು ಮಾಡಿದ್ದೇವೆ. ಇನ್ನು ದೇವರು ನಮಗೆ ನೀಡಿದ ಸಾವಯವ (ಜವಾರಿ) ತಳಿಯ ಹಣ್ಣು ತರಕಾರಿ, ನವಧಾನ್ಯಗಳನ್ನು ಹೈಬ್ರೀಡ್ ತಳಿಗಳನ್ನಾಗಿ ಬದಲಾಯಿಸಿ ಆಹಾರ ಮೂಲಕ ವಿಷವನ್ನು ಸೇವಿಸುತ್ತಿದ್ದೇವೆ. ಇದಷ್ಟೇ ಅಲ್ಲದೇ ಕೆಲಸದ ವೇಳೆಗೆ ಮಹತ್ವ ಕೊಟ್ಟು ಫಾಸ್ಟ್ ಫುಡ್ ಗಳಿಗೆ ಮೊರೆ ಹೋಗಿ ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಇದಕ್ಕೆಲ್ಲ ಫಲವತ್ತಾದ ಭೂಮಿಗಳ ಬೆಳೆಗಳಿಗೆ ಹೆಚ್ಚಿನ ಲಾಭಕ್ಕಾಗಿ ರಾಸಾಯನಿಕ ಸಿಂಪಡಣೆ ಮಾಡುವುದೇ ಪ್ರಮುಖ ಕಾರಣ.

ಮಾನವ ಕುಲಕ್ಕೆ ಎಂಥ ರೋಗ ಬಂದರೂ ಮೊದಲು ಸುರಕ್ಷತೆಯ ಮೊರೆ ಹೋಗುತ್ತಾರೆ. ಇದರ ಜೊತೆಯಲ್ಲಿ ಲಸಿಕೆ ಕಂಡು ಹಿಡಿಯೋದು ಸರ್ವೆಸಾಮಾನ್ಯ. ನಮಗೆ ಪ್ರಕೃತಿ ಮುನಿಸಿಕೊಂಡರೆ ಎಂಥಹ ಸುರಕ್ಷತೆ ಇದ್ದರೂ ನಮ್ಮನ್ನು ಭಸ್ಮ ಮಾಡುತ್ತದೆಂದು ಅರಿವಿಲ್ಲ. ಹಾಗೆಯೇ ಗಿಡ ಮರಗಳ ಸರ್ವನಾಶ ಮಾಡುತ್ತಾ ಹೊರಟಿದ್ದೇವೆ ಅಂದರೆ ನಾವು ಎಷ್ಟು ಪಾಪ ಮಾಡುತ್ತಿದ್ದೇವೆ ನೋಡಿರಿ. ವಿಶ್ವದ ನಾಶಕ್ಕೆ ಸಮೀಪಿಸುತ್ತಿದ್ದೇವೆ ಎಂದು ಎದ್ದು ಕಾಣುತ್ತಿದೆ.

ನಾವು ಚಂದ್ರನ ಮೇಲೆ ಕಾಲಿಟ್ಟ ಕಾರಣದಿಂದ ದೈವತ್ವ ಮರೆತು ವಿಜ್ಞಾನ ಜಗತ್ತಿಗೆ ಹೋಗಿ ಮೈಮರೆತಿದ್ದೇವೆ. ಸಾಕಿನ್ನು ಅನುಭವಿಸಿದ್ದು. ಈಗ ದಶಕಗಳ ಹಿಂದೆ ಹೋಗಿದ್ದೇವೆ. ಇನ್ನೂ ವಿಶ್ವ ಸುಧಾರಿಸಿಕೊಂಡು ಮರಳೋದಕ್ಕೆ ಹಲವು ವರ್ಷಗಳು ಬೇಕು.

ಸಾವಿರಾರು ವರ್ಷಗಳ ಇತಿಹಾಸವಿರುವ ಆಯುರ್ವೇದಿಕ್ ಔಷಧಿಗಳು ನಮ್ಮಲ್ಲಿವೆ. ಇಂಗ್ಲೀಷ ಔಷಧಿಗಳಿಗೆ ಆಹಾರವಾಗೋದು ಬೇಡ. ನಮ್ಮ ಪೌಷ್ಠಿಕ ಆಹಾರವೇ ನಮ್ಮ ಔಷಧ.

ನಿಜ ಸ್ಥಿತಿ

  • ಮಹಾಮಾರಿ ಬಂದಾಗ ಸರ್ಕಾರದ ಲಾಕ್ ಡೌನ್ ಗೆ ಒಳಗಾದ ದಿನಗಳಲ್ಲಿ ಮೇಲ್ವರ್ಗದ ಉದ್ಯಮಿಗಳಿಗೆ ಆದಾಯ ಬಂದಿಲ್ಲ ಅಷ್ಟೇ. ಆದರೆ ಈ ಕಡೆ ಪರದಾಡಿದ್ದು ಮಧ್ಯಮವರ್ಗ ಮತ್ತು ಕೆಳವರ್ಗ.
  • ಬೇರೆ ರಾಜ್ಯದಿಂದ ವಲಸೆ ಬಂದ ಜನರಲ್ಲಿ ಹಲವರು ಪ್ರಾಣ ಕಳೆದುಕೊಂಡರು.
  • ಬಹುತೇಕ ಪ್ರೈವೇಟ್ ಕಂಪನಿಗಳು ಶಾಶ್ವತವಾಗಿ ಕಾರ್ಯ ನಿಲ್ಲಿಸಿವೆ.
  • ದೇಶದ ನಗರಗಳಲ್ಲಿನ ಸರ್ಕಾರಿ ಮಳಿಗೆಗಳಲ್ಲಿ ವ್ಯಾಪಾರ ಮಾಡುತ್ತಿದ್ದವರು ಬಾಡಿಗೆ ಪಾವತಿ ಮಾಡಲು ಆಗದೇ ಖಾಲಿ ಮಾಡಿದ್ದಾರೆ.
  • ಉದ್ಯೋಗಕ್ಕೆ ನಗರಕ್ಕೆ ಅರಸಿ ಬಂದು ಲಾಕ್ ಡೌನ್ ಆಗುತ್ತದೆಂದು ತಿಳಿದು ಊರಿಗೆ ಮರಳಿ ತಾವು ತಂಗಿದ್ದ ಖಾಲಿ ಮನೆಗಳ ಬಾಡಿಗೆ ನೀಡಲು ಪರದಾಡಿದ್ದಾರೆ.
  • ಇಂಥಹ ಸ್ಥಿತಿಯಲ್ಲಿ ಪಾನ್ ಪರಾಗ್ ಕಂಪನಿಗಳ ಕೂಡಿಟ್ಟ ದಾಸ್ತಾನು ಮೂರು ಪಟ್ಟು ಹೆಚ್ಚಿನ ಬೆಲೆಗೆ ಮಾರಿ ಲಾಭ ಮಾಡಿದ್ದಾರೆ.
  • ಈ ಸಮಯದಲ್ಲಿ ಮಾಸ್ಕ್, ಸ್ಯಾನಿಟೈಸರ್, ಕೀಟನಾಶಕಗಳು, ಫೇಸ್ ಮಾಸ್ಕ್ ಗಳ ಕಂಪನಿಗಳು ಹುಟ್ಟಿಕೊಂಡಿವೆ.
  • ವಿಶೇಷವೆಂದರೆ ವರ್ಷಕ್ಕಿಂತ ಅಧಿಕವಾಗಿ ಆಡಂಬರವಿಲ್ಲದೇ ಹೆಚ್ಚು ಖರ್ಚಿಲ್ಲದೇ ಮದುವೆಗಳು ಜರುಗಿವೆ.
  • ರಸ್ತೆ ಬದಿಯ ವ್ಯಾಪಾರಿಗಳು ಬೀದಿಪಾಲಾಗಿ ಮನೆಗೆಲಸಕ್ಕೆ ತೊಡಗಿದ್ದಾರೆ.
  • ಎಲ್ಲದಕ್ಕಿಂತ ಹೆಚ್ಚಾಗಿ ದೇಶದ ಮತ್ತು ವಿಶ್ವದ ಆರ್ಥಿಕತೆ ನೆಲಕಚ್ಚಿದೆ.
  • ಎಲ್ಲಾ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಸಾವಿನ ಸಂಖ್ಯೆ ತೀರಾ ಕಡಿಮೆ.
  • ಎಲ್ಲದಕ್ಕಿಂತ ಹೆಚ್ಚಾಗಿ ಜನರು ಮಾನವೀಯತೆ ಮೆರೆದಿದ್ದಾರೆ.

ಇದೊಮ್ಮೆ ಎಡವಿ ಬಿದ್ದಿದ್ದೇವೆ. ಇನ್ನೊಮ್ಮೆ ಹೀಗಾಗೋದು ಬೇಡ. ಹಾಗಾದರೆ ಏನು ಮಾಡುವುದು ? ಇದಕ್ಕೆಲ್ಲಾ ಕಾರಣವಾದ ಕೊರೋನಾವನ್ನೇ ದೂರ ಇಡುವುದು !

ಕೊರೊನ ಅಟ್ಟುವುದಕ್ಕೆ ಕ್ರಮಗಳು

  • ಮಾಸ್ಕ್, ಸ್ಯಾನಿಟೈಸರ್, ರಕ್ಷಾಕವಚಗಳನ್ನು ಬಳಸಿದರೆ ಬರುವುದಿಲ್ಲ ಎಂಬುದನ್ನು ತಲೆಯಿಂದ ತೆಗೆದು ಹಾಕಬೇಕು.
  • ಫೋನ್ ಕರೆ ಮಾಡಿದಾಗೆಲ್ಲ ಕಿರಿಕಿರಿ ಮಾಡುವ ರಿಂಗ್ ಟೋನ್ ತೆಗೆಯುವುದು.
  • ಧೂಳಿನಿಂದ ಪಾರಾಗೋಕೆ ಮಾತ್ರ ಮಾಸ್ಕ್ ಧರಿಸುವುದು.
  • ಆನ್ ಲೈನ್ ತರಗತಿಯಿಂದ ಮತ್ತೊಂದು ರೋಗ ಹುಟ್ಟುವುದಕ್ಕಿಂತ ಮುಂಚೆ ಶಾಲಾ ಕಾಲೇಜುಗಳು ಆರಂಭವಾಗಬೇಕು.
  • ಹೈಬ್ರೀಡ್ ತಳಿಗಳನ್ನು ನಾಶಮಾಡಬೇಕು
  • ಸಾವಯವ ಕೃಷಿಗೆ ಬೆಂಬಲ ನೀಡಿದರೆ ವಿಶ್ವವೇ ನಮ್ಮತ್ತ ತಿರುಗುತ್ತದೆ. ಇದರಿಂದ ರೈತರ ಅಭಿವೃದ್ದಿ ದೇಶದ ಅಭಿವೃದ್ದಿ ನಿಶ್ಚಿತ.
  • ನೈಜವಾದ ಆಮ್ಲಜನಕವನ್ನು ನೀಡುವ ಗಿಡ ಮರಗಳನ್ನು ಕಡಿಯೋದು ನಿಲ್ಲಿಸಬೇಕು.
  • ನಮ್ಮಲ್ಲಿ ದಿನದ ಮೂರು ಹೊತ್ತು ಅನ್ನ ಮತ್ತು ಅಕ್ಕಿಯಿಂದ ಮಾಡಿದ ಪದಾರ್ಥಗಳನ್ನು ಸೇವನೆ ಮಾಡುತ್ತಾರೆ. ಇದು ನಿಲ್ಲಬೇಕು.
  • ಮುಖ್ಯವಾಗಿ ಮೈದಾದಿಂದ ಮಾಡಿದ ಪಧಾರ್ಥಗಳನ್ನು ಬ್ಯಾನ್ ಮಾಡಬೇಕು.
  • ಉತ್ತರ ಕರ್ನಾಟಕದ ರಸವತ್ತಾದ ಪೌಷ್ಠಿಕ ಊಟವು ದೇಶದ ಮೂಲೆ ಮೂಲೆಯಲ್ಲಿ ಸಿಗುವ ಹಾಗೆ ಮಾಡಿದರೆ ದೇಶಕ್ಕೆ, ರೈತರಿಗೆ ನಾಗರಿಕರಿಗೆ ಒಳ್ಳೆಯದಾಗಲಿದೆ.

ತಿಳಿಯಿರಿ: ಜೀವ ಇದ್ದರೆ ದುನಿಯಾ. ಇಲ್ಲದಿದ್ದರೆ ಕೊನೆಯ…!

ಮಂಜುನಾಥ್ ರೇಳೇಕರ್
ಕನ್ನಡದ ಮಿಸ್ಟರ್ ಬೀನ್
ಸಿನೆಮಾ ಕಲಾವಿದ. ಮೂಡಲಗಿ. ಬೆಳಗಾವಿ ಜಿಲ್ಲೆ.

RELATED ARTICLES

Most Popular

error: Content is protected !!
Join WhatsApp Group