ಮಹಾದೇವ ಪೋತರಾಜಗೆ ಪಿಎಚ್.ಡಿ. ಪದವಿ

Must Read

ಮೂಡಲಗಿ: ತಾಲ್ಲೂಕಿನ ಖಾನಟ್ಟಿ ಗ್ರಾಮದ ಮಹಾದೇವ ಪೋತರಾಜ ಅವರು ‘ಗೋಕಾವಿ ನಾಡಿನ ಜನಪದ ಕಲಾವಿದರು’ ವಿಷಯದಲ್ಲಿ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಮಂಡಿಸಿದ ಮಹಾಪ್ರಬಂಧವನ್ನು ಪರಿಗಣಿಸಿ ಪಿಎಚ್.ಡಿ. ಪದವಿಯನ್ನು ಪ್ರಕಟಿಸಿದೆ.

ಬೆಳಗಾವಿ ರಾಣಿ ಚನ್ನಮ್ಮ ವಿವಿಯ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ. ಮಹೇಶ ಗಾಜಪ್ಪನವರ ಅವರು ಸಂಶೋಧನೆಗೆ ಮಾರ್ಗದರ್ಶನ ನೀಡಿದ್ದರು.

ಇದೇ ನ. 26ರಂದು ರಾಣಿ ಚನ್ನಮ್ಮ ವಿವಿಯ ಮೌಲ್ಯಮಾಪನ ಕುಲಸಚಿವರು ಪಿಎಚ್.ಡಿ. ಪ್ರಕಟಣೆಯ ಅಧಿಸೂಚನೆಯನ್ನು ಹೊರಡಿಸಿದ್ದಾರೆ.

ಮೂಡಲಗಿಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬಿ.ಎ. ಪದವಿ ಮುಗಿಸಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿರುವರು. ಮಹಾದೇವ ಅವರಿಂದ ‘ದ್ವಿಶತಕ ತ್ರಿಪದಿಗಳು’ ‘ಬೋಧಿವೃಕ್ಷ’ ಎರಡು ಕೃತಿಗಳು ಪ್ರಕಟಗೊಂಡಿವೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group