Homeಸುದ್ದಿಗಳುಮುಗಳಖೋಡದಲ್ಲಿ ಮಹಾಸಿದ್ದೇಶ್ವರ ಜಾತ್ರೆ ದಿ.1 ರಿಂದ 2 ರ ವರೆಗೆ 

ಮುಗಳಖೋಡದಲ್ಲಿ ಮಹಾಸಿದ್ದೇಶ್ವರ ಜಾತ್ರೆ ದಿ.1 ರಿಂದ 2 ರ ವರೆಗೆ 

ಮುಧೋಳ ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಮಹಾಸಿದ್ದೇಶ್ವರ ದೇವರ ಜಾತ್ರೆಯು ಅಕ್ಟೋಬರ್ 1ರಿಂದ 2 ರ ವರೆಗೆ ಎರಡು ದಿನ ವಿಜೃಂಭಣೆಯಿಂದ ಜರುಗಲಿದೆ.

ಬುಧವಾರ ದಿ 1 ರಂದು ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಮಹಾಪೂಜಾ, ಸಮಸ್ತ ಭಕ್ತರಿಗೆ ಪ್ರಸಾದ ಜರುಗುವುದು. ನಂತರ ವಿಶೇಷ ಆಕರ್ಷಕ ಬಹುಮಾನಗಳನ್ನು ಹೊಂದಿದ ಮುಕ್ತ ವ್ಹಾಲಿಬಾಲ ಪಂದ್ಯ‌ ಜರುಗುವದು..ರಾತ್ರಿ 10ಗಂಟೆಗೆ ಬಬಲೇಶ್ವರ ತಾಲೂಕಿನ ಹೊಳೆಅಂಗರಗಿಯ ಬೀರಲಿಂಗೇಶ್ವರ ಡೊಳ್ಳಿನ ಗಾಯನ ಸಂಘ ಹಾಗೂ ಮುಗಳಖೋಡದ ಮಹಾ ಸಿದ್ದೇಶ್ವರ ಗಾಯನ ಸಂಘದವರಿಂದ ಡೊಳ್ಳಿನ ಪದಗಳು. ಗುರುವಾರ ದಿ.2ರಂದು ಮುಂಜಾನೆ ಪೂಜಾ ಹಾಗೂ ಶುಭನುಡಿಗಳಾಗುವವು.

ನಂತರ 350 ಕೆ.ಜಿ. ಮನುಷ್ಯರು ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆ, ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯುವುದು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರ “ಹಳ್ಳಿಯಿಂದ ದಿಲ್ಲಿಯ ವರೆಗೆ” ನಾಟಕ ಪ್ರದರ್ಶನಗೊಳ್ಳುವರೊಂದಿಗೆ ಜಾತ್ರೆ ಸಂಪನ್ನ ಗೊಳ್ಳುವದು ಎಂದು ಗ್ರಾ.ಪಂ.ಸದಸ್ಯರಾದ ಪಿ .ಬಿ.ಸುಣಗಾರ ಹಾಗೂ ಶಂಕರಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group