- Advertisement -
ಮೊದಲ ಮೂರು ಓವರ್ ಗಳಲ್ಲಿ ವಿಕೆಟ್ ಪಡೆದ ಬೌಲರ್ ಗೆ ಹೆಚ್ಚುವರಿಯಾಗಿ ಇನ್ನೊಂದು ಓವರ್ ಬೌಲಿಂಗ್ ಕೊಡಬೇಕು ಎಂದು ಖ್ಯಾತ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಹೇಳಿದ್ದಾರೆ.
ಹಾಗೆಯೇ ಒಂದು ಓವರ್ ಗೆ ಎರಡು ಬೌನ್ಸರ್ ಹಾಕಲು ಅವಕಾಶ ನೀಡಬೇಕು. ಬೌಲರ್ ಬಾಲ್ ಹಾಕುವ ಮೊದಲೇ ನಾನ್ ಸ್ಟ್ರೈಕ್ ನಲ್ಲಿರುವ ದಾಂಡಿಗೆ ಕ್ರೀಸ್ ಬಿಡುವುದನ್ನು ಗಂಭೀರತೆಯಿಂದ ಪರಿಸೀಲಿಸಬೇಕು ಇದು ಅಂಪೈರ್ ಗಳ ಜವಾಬ್ದಾರಿ. ಅದು ಕಂಡುಬಂದರೆ ಒಂದು ರನ್ ಕಡಿತ ಮಾಡಬೇಕು ಎಂದು ಗವಾಸ್ಕರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಈಗ ಐಪಿಎಲ್ ಕಮೆಂಟೇಟರ್ ತಂಡದ ಸದಸ್ಯರಾಗಿರುವ ಗವಾಸ್ಕರ್ ಟಿ 20 ಪಂದ್ಯಗಳು ಚೆನ್ನಾಗಿ ನಡೆಯುತ್ತಿವೆ.
- Advertisement -
ಇದೊಂದು ಉತ್ತಮ ಮಾದರಿಯಾಗಿದೆ. ಆದರೆ ಬ್ಯಾಟ್ಸ್‌ಮನ್ ಗಳಿಗೆ ನಿಯಮಗಳು ಹೆಚ್ಚು ಅನುಕೂಲಕರವಾಗಿರುವುದರಿಂದ ಮೇಲಿನಂತೆ ಕೆಲವು ಬದಲಾವಣೆಗಳನ್ನು ಮಾಡಬಹುದು ಎಂದು ಅವರು ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.