- Advertisement -
ಬೀದರ – ಪ್ರಧಾನಿ ಮೋದಿಯವರನ್ನು ಕೆಳಗಿಳಿಸಲು ಆರ್ಎಸ್ಎಸ್ ಹೈ ವೋಲ್ಟೇಜ್ ಸಭೆ ನಡೆಸಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದ್ದಾರೆ.
ಬಸವಕಲ್ಯಾಣದಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ಸಚಿವ ಸತೀಶ ಜಾರಕಿಹೊಳಿ ಸೇರಿದಂತೆ ಅನೇಕರ ಹೈವೋಲ್ಟೇಜ್ ಸಭೆ ನಡೆದಿದೆ ಎಂಬ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿ, ಮೋದಿಯವರನ್ನೇ ಬದಲಾಯಿಸಲು ಆರ್ಎಸ್ಎಸ್ ಸಭೆ ನಡೆದಿದೆ ಬಿಜೆಪಿ ನಾಯಕರನ್ನು ಕೇಳಿ ಎಂದು ಕಾಲೆಳೆದರು.
ಎಲ್ಲಾ ಕಡೆಗೆ ರಾಜಕೀಯ ನಾಯಕರ ಮೀಟಿಂಗ್ ಆಗುತ್ತವೆ ಇದು ಸಾಮಾನ್ಯ ಎಂದ ಲಾಡ್ ಎಲೆಕ್ಷನ್ ಬಾಂಡ್ ವಿಚಾರದಲ್ಲಿ ಪ್ರಧಾನಿ ರಾಜೀನಾಮೆ ಕೊಡಬೇಕು ಎಂದು ನೀವೇಕೆ ಕೇಳಬಾರದು ಎಂದು ಪತ್ರಕರ್ತರಿಗೆ ಪ್ರಶ್ನೆ ಮಾಡಿದರು.
- Advertisement -
ಇವಿಎಂ ದುರ್ಬಳಕೆ ಬಗ್ಗೆ ಮೊದಲಿನಿಂದಲೂ ನಮ್ಮ ತಕರಾರು ಇದೆ. ಆದರೂ ಹರಿಯಾಣಾ ಚುನಾವಣಾ ಫಲಿತಾಂಶವನ್ನು ಗೌರವಿಸುತ್ತೇವೆ ಎಂದು ಸಂತೋಷ ಲಾಡ್ ಹೇಳಿದರು.
ವರದಿ : ನಂದಕುಮಾರ ಕರಂಜೆ, ಬೀದರ