ಕರ್ನಾಟಕದಲ್ಲಿ ಬಿಜೆಪಿಗೆ ಲೈಫ್ ಕೊಟ್ಟಿದ್ದೇ ನಾನು. ನನ್ನನ್ನು ಮಂತ್ರಿ ಮಾಡಿ ಎಂದು ಯಡಿಯೂರಪ್ಪ ನವರೇ ನನ್ನ ಕಡೆ ಬಂದಿದ್ದರು. ಇನ್ನು ನೀನು ಯಾವ ಲೆಕ್ಕ. ಮಂತ್ರಿಯಾಗಿದ್ದೀಯಾ ಸರಿಯಾಗಿ ಕೆಲಸ ಮಾಡು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಚಿವ ಸಿ ಪಿ ಯೋಗೇಶ್ವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚನ್ನಪಟ್ಟಣದಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು ಸಿ ಪಿ ಯೋಗೇಶ್ವರ ಅವರನ್ನು ಹಿಗ್ಗಾ ಮುಗ್ಗಾ ಝಾಡಿಸಿದರು.
ಈ ಮುಂಚೆ ಸಚಿವ ಸಿ ಪಿ ಯೋಗೇಶ್ವರ ಅವರು ಮಂಗಳೂರಿನಲ್ಲಿ ಮಾತನಾಡುತ್ತ, ಕುಮಾರಸ್ವಾಮಿಯವರ ಬಗ್ಗೆ ಹಗುರವಾಗಿ ಮಾತನಾಡಿದರು.
ಕುಮಾರಸ್ವಾಮಿ ಅಧಿಕಾರ ಇಲ್ಲದಾಗ ಬೇಗ ಬರುತ್ತಿದ್ದಾನೆ. ಜನರ ಎದುರು ದುರಹಂಕಾರ ನಡೆಯಲ್ಲ ಎಂದು ಗೊತ್ತಿದೆ ಅದಕ್ಕೆ ಆರು ಗಂಟೆಗೇ ಬರ್ತಿದ್ದಾನೆ ಎಂದು ಏಕವಚನದಲ್ಲಿ ಯೋಗೇಶ್ವರ ಮಾತನಾಡಿದ್ದರು
ಚನ್ನಪಟ್ಟಣದ ೨೦೨೩ ರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿ ಪಿ ಯೋಗೇಶ್ವರ ಮಾತನಾಡಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದ್ದು ಇದಕ್ಕೆ ಕುಮಾರಸ್ವಾಮಿ ನಿರೀಕ್ಷೆ ಮೀರಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ಮುಂದೆ ಇನ್ನೂ ಬಚ್ಚಾ, ಮಂತ್ರಿಯಾಗಿದ್ದೀಯಾ ಸರಿಯಾಗಿ ಕೆಲಸ ಮಾಡು ನಾನು ಬಂಡೆ ಒಡೆದು ಮಂತ್ರಿಯಾಗಿಲ್ಲ.ನೀನು ಯಾವ ಥರ ಮಂತ್ರಿ ಅನ್ನೋದು ನನಗೆ ಗೊತ್ತು. ಚನ್ನಪಟ್ಟಣದ ಜನರು ನನ್ನನ್ನು ಬೆಳೆಸಿದ್ದಾರೆ. ನಿನ್ನ ಒಂದೊಂದು ಹಗರಣಗಳನ್ನು ಹೊರಹಾಕಬೇಕಾಗುತ್ತದೆ ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ