ನಾವೀಗ ಯಾರದ್ದೋ ಪುರಾಣ,ಇತಿಹಾಸ ಕಥೆಯನ್ನು ಓದಿ,ನೋಡಿ,ತಿಳಿಸಿ ನಮ್ಮನ್ನು ಬದಲಾವಣೆ ಮಾಡಿಕೊಳ್ಳದೆ ವ್ಯವಹಾರ ನಡೆಸಿಕೊಂಡು ರಾಜಕೀಯಕ್ಕೆ ಸಹಕರಿಸುತ್ತಾ ಕಾಲಹರಣ ಮಾಡಿದರೆ ಕಷ್ಟ ನಷ್ಟ ತಪ್ಪಿದ್ದಲ್ಲ.
ವಿವೇಕ ನಮ್ಮ ಬದಲಾವಣೆಯಿಂದ ಬೆಳೆಸಿಕೊಂಡಾಗಲೆ ವಿವೇಕಾನಂದ ಸಿಗೋದು. ಅವರವರ ಕಾಲಮಾನಕ್ಕೆ ತಕ್ಕಂತೆ ನಡೆಯುತ್ತಾರೆ. ವಾಸ್ತವತೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಸತ್ಯ ನಮ್ಮೊಳಗೆ ಇದೆ.ವಿವೇಕವೂ ನಮ್ಮಲ್ಲೇ ಇದೆ.
ಸ್ವಾತಂತ್ರ್ಯ ವೂ ನಮ್ಮಲ್ಲಿದೆ. ಆದರೆ ರಾಜಕೀಯಕ್ಕೆ ಸಹಕರಿಸಿ ರಾಜಯೋಗವೆ ನಮ್ಮಿಂದ ದೂರವಾಗಿದೆ. ಪ್ರಜಾಪ್ರಭುತ್ವದ ಪ್ರಜೆಗಳಿಗೆ ರಾಜಯೋಗದ ಶಿಕ್ಷಣ ಬಿಟ್ಟು ರಾಜಕೀಯದ ಶಿಕ್ಷಣ ನೀಡಿ, ವಿವೇಕವನ್ನು ಬೆಳೆಸುವುದರಲ್ಲಿ ಅರ್ಥವಿಲ್ಲ.
ಮೊದಲು ಮಾನವನಾಗು
ಆತ್ಮನಿರ್ಭರ ಭಾರತವೆಂದರೆ ಆತ್ಮಾನುಸಾರ ನಡೆದು ಭಾರತೀಯನಾಗು ಎಂದರ್ಥ. ಭಾರತದ ಆತ್ಮವೆ ಸತ್ಯಜ್ಞಾನ.ಈಗ ಮಿಥ್ಯಜ್ಞಾನ ಮಕ್ಕಳಿಗೆ ತುಂಬಿ ಸತ್ಯ ತಿಳಿಸಲು ಹೊರಗಿನ ಕಾರ್ಯಕ್ರಮ ಬೇಕೆ ಹೇಳಿದ್ದು, ಕೇಳಿದ್ದು, ನೋಡಿದ್ದು, ಓದಿದ್ದು ಅರ್ಧಸತ್ಯ. ಅನುಭವ ಮಾತ್ರ ಪೂರ್ಣಸತ್ಯ. ಅದೂ ಅನುಭವಿಸಿದವರಿಗಷ್ಟೆ.
ಹೀಗಾಗಿ ದೇಶರಕ್ಷಣೆಗಾಗಿ “ಏಳಿ ಎದ್ದೇಳಿ ಗುರಿ ಮುಟ್ಟುವವರೆಗೆ ನಿಲ್ಲದಿರಿ” ಅಂದಿನ ಬ್ರಿಟಿಷ್ ವಿರುದ್ದದ ಘೋಷಣೆ ಈಗ ನಾವು ಯಾರ ವಿರುದ್ದ ಕೂಗಬೇಕು? ಪ್ರಜೆಗಳ ಅಜ್ಞಾನದ ಸಹಕಾರವೆ ಇಂದಿನ ಈ ಸ್ಥಿತಿಗೆ ಕಾರಣವಾದಾಗ ಶಿಷ್ಟಾಚಾರ ಕಲಿಸಲು ಹೊರಗೆ ಹೋಗಬೇಕೆ? ಆತ್ಮನಿರ್ಭರ ರಾಜಯೋಗದಲ್ಲಿದೆ.ರಾಜಕೀಯ ಆತ್ಮದುರ್ಭಲ ಭಾರತ ಮಾಡಿದೆ.
*ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು*