ರಾಷ್ಟ್ರೀಯ ಆರೋಗ್ಯ ಅಭಿಯಾನ ೨೦೨೧ ; ಕಲಾಜಾಥಾ ಕಾರ್ಯಕ್ರಮ

Must Read

ಜಿಲ್ಲಾ ಪಂಚಾಯತ ಬೆಳಗಾವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ, ತಾಲೂಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸವದತ್ತಿ ತಾಲೂಕಿನ ಆಯ್ದ ಗ್ರಾಮ ಪಂಚಾಯತಗಳ ಸಹಯೋಗದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ 2021 ರ ಅಡಿಯಲ್ಲಿ ಸಾರ್ವಜನಿಕರಿಗೆ ಆರೊಗ್ಯದ ಅರಿವು ಮೂಡಿಸುವ ಕಲಾಜಾಥಾ ಕಾರ್ಯಕ್ರಮ ಚಾಲನೆ ನೀಡಲಾಯಿತು.

ತಾಲೂಕಾ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಶ್ರೀ ಶೈಲರಾಮ ದೇಸಾಯಿ ಇವರು ಕಲಾಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ತಾಯಿ ಮಗುವಿನ ಆರೈಕೆ, ಸಾಂಕ್ರಾಮಿಕ ರೋಗದ ಜಾಗೃತಿ, ಕರೋನ ಜಾಗೃತಿ, ಪಲ್ಸ ಪೋಲಿಯೋ, ಪೌಷ್ಟಿಕಾಹಾರ ಆಹಾರ, ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ ಈ ತರದ ಮುಂತಾದ ಆರೊಗ್ಯದ ಅರಿವಿನ ಜೊತೆಗೆ ಯೋಜನೆಗಳ ಕುರಿತು ಕಲಾ ತಂಡದಿಂದ ಜಾಗೃತಿಯನ್ನು ಆಯ್ದ ಗ್ರಾಮಗಳಲ್ಲಿ ಪ್ರದರ್ಶನ ನೀಡಿ ಜಾಗೃತಿ ಮೂಡಿಸುವುದಾಗಿ ಹೇಳಿದರು,
ಕಾಡಪ್ಪಾ ಮಾಳಗೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು, ಇದೆ ಸಂದರ್ಭದಲ್ಲಿ ಪ್ರಬುದ್ಧ ಗ್ರಾಮೀಣ ಸೇವಾ ಸಂಸ್ಥೆ (ರಿ) ಕಲಾತಂಡದವರು ಆರೊಗ್ಯದ ಅರಿವು ಮೂಡಿಸುವ ಜಾಗೃತಿ ಗೀತೆ ಹಾಡಿದರು.

ಇದೆ ಸಂದರ್ಭದಲ್ಲಿ ಆಕಾಶ ಬೇವಿನಕಟ್ಟಿ ನೇತೃತ್ವದಲ್ಲಿ ಕಾಡಪ್ಪಾ ಮಾಳಗೆ, ಸಾವಂತ ಘಸ್ತಿ, ಮಾರುತಿ, ಕಾಳಿಂಗ ಬಡಿಗೇರ, ಮಂಜುನಾಥ, ಸಂಗೀತಾ, ಆಶಾ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು ,ಪ್ರಾಥಮಿಕ ಆರೊಗ್ಯ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group