spot_img
spot_img

ರೈತರ ಸಾಲ ತೀರಿಸಲು ಸರ್ಕಾರ ಬೇಕೆ?

Must Read

spot_img
- Advertisement -

ದೇಶದ ಬೆನ್ನೆಲುಬು ಎನ್ನಿಸಿಕೊಂಡ ರೈತರನ್ನು ಸರ್ಕಾರ ಆಳಲು ಹೊರಟು ಈಗ ಅವರ ಸಾಲದ ಬಾಲ ಬೆಳೆದಿದೆ ಇದನ್ನು ಸಾಲ ಮನ್ನಾ ಮಾಡಿದರೂ ತೀರಿಸಲಾಗದು.ಕಾರಣವಿಷ್ಟೆ, ಸಾಲ ಈ ಪದದ ಅರ್ಥ ಆಧ್ಯಾತ್ಮ ದಲ್ಲಿ ‘ಋಣ’ ಎಂದಾಗುತ್ತದೆ.

ಧರ್ಮದ ಪ್ರಕಾರ ಯಾರು ಸತ್ಕರ್ಮ ಮಾಡುವರೋ ಅವರನ್ನು ಧರ್ಮವೆ ರಕ್ಷಿಸುತ್ತದೆ.ಎನ್ನುವ ಹಿಂದೂ ಧರ್ಮದ ಸತ್ಯ ತಿಳಿಯದೆ, ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದ ಕುಲ ಕಸುಬು ಬಿಟ್ಟು ಹೊರ ನಡೆದ ಬುದ್ದಿವಂತ ವಿದ್ಯಾವಂತ ಭಾರತೀಯರ ಮಕ್ಕಳು ಮೊಮ್ಮಕ್ಕಳಿಗೆ ವಿಜ್ಞಾನ ಜಗತ್ತು ಜೀವನ ಕೊಟ್ಟಿತು. ಆದರೆ ಮೂಲ ಜೀವ ಕೊಟ್ಟ ಗುರು ಹಿರಿಯರ ಧರ್ಮ ಕರ್ಮ ಹಿಂದುಳಿದ ಕಾರಣ‌ ಜ್ಞಾನವೆ ಹಿಂದುಳಿದು, ನಮ್ಮನ್ನು ಯಾರು ಆಳುತ್ತಿರುವರೆಂಬುದಾಗಲಿ, ನಾನ್ಯಾರು ಎಂಬುದಾಗಲಿ ತಿಳಿಯುವ ಅವಕಾಶವಿಲ್ಲದೆ ವಿದೇಶದವರೆಗೆ ಹೋದ ಮಕ್ಕಳನ್ನು ಪೋಷಕರೆ ಸಹಕರಿಸಿ ತಮ್ಮ ಭೂಮಿಯನ್ನು ಮಾರಿ ,ಮಕ್ಕಳ ಹಿಂದೆ ನಡೆಯುವಂತಾಯಿತು. ಆದರೆ,ಭೂ ತಾಯಿಯ ಋಣ ತೀರಿಸಲು ಕಷ್ಟವೆ. ಕಷ್ಟಪಡದೆ ಮುಕ್ತಿ ಯಿಲ್ಲ ಎಂದ ಮೇಲೆ ಭೂಮಿಯನ್ನು ಆಳೋದರಲ್ಲಿ ಅರ್ಥ ವಿದೆಯೆ?

ರಾಜಕೀಯಕ್ಕೆ ಬಳಸಿಕೊಂಡು ಭೂಮಿಯನ್ನು ಆಳಲು ಹೊರಟವರಲ್ಲಿ ರೈತ ಕುಟುಂಬಗಳೂ ಇದ್ದರೂ ಅದನ್ನು ಮಾರಾಟ ಮಾಡಿ ಬೇರೆಯವರನ್ನು ಹಣ,ಅಧಿಕಾರದಿಂದ ಆಳಿದರೆ ಅಧರ್ಮದ ಫಲ ಅನುಭವಿಸಬೇಕು. ಭೂಮಿಯನ್ನು ಭಾರತದಲ್ಲಿ ಪವಿತ್ರ ದೃಷ್ಟಿಯಿಂದ ಕಾಣುತ್ತಿದ್ದ ಕಾಲ ಮರೆಯಾಗಿದೆ.

- Advertisement -

ಭೂಮಿ ಮೇಲೆ ಜೀವನ ನಡೆಸುವುದರಿಂದ ಧರ್ಮ,ಕರ್ಮ ರಕ್ಷಣೆ ಆದರೆ ಜೀವಕ್ಕೆ ಬಿಡುಗಡೆ ಎಂದಿರುವ ಮಹಾತ್ಮರಿಗೆ ಭೂಮಿಯನ್ನು ಹೇಗೆ ಬಳಸಿಕೊಂಡರೆ ಶಾಂತಿ ಎನ್ನುವ ಜ್ಞಾನವಿತ್ತು.

ಆದರೆ, ಇದನ್ನುವ್ಯವಹಾರಮಯಮಾಡಿಕೊಂಡು ತನ್ನ ವೈಭವಕ್ಕೆ ಬಳಸಿ ಕೊನೆಯಲ್ಲಿ ಬಿಟ್ಟು ಹೋಗುವಾಗ ಭೂಮಿ ತನ್ನ ಸ್ಥಾನ
ಬಿಟ್ಟು ನಡೆಯೋದಿಲ್ಲವೆನ್ನುವ ಸಾನಮಾನ್ಯಜ್ಞಾನ ಮಾನವ
ತಿಳಿದಿದ್ದರೆ, ಭೂ ತಾಯಿ ಸೇವೆಯಲ್ಲಿ ನಿಸ್ವಾರ್ಥ, ನಿರಹಂಕಾರ, ಸ್ವತಂತ್ರ ಜ್ಞಾನ,ಸ್ವಾವಲಂಬನೆ, ಸತ್ಯ,ಧರ್ಮ ದ ಸೇವಕರಾಗಿ ಶಾಂತಿಯಿರುತ್ತಿತ್ತು. ಕಲಿಗಾಲದ ಪ್ರಭಾವ, ನಿಜವಾದ ಜ್ಞಾನಿಗಳನ್ನು, ಸೇವಕರನ್ನು ಬಡವರೆಂದು ಪರಿಗಣಿಸಿದ
ಸಮಾಜ,ಅವರನ್ನು ಮೇಲೆತ್ತುವ‌ಕೆಲಸ ಮಾಡಲು ಹೋಗಿ ಈಗ ಅವರ ಮೇಲೆ ಸಾಲದ ಮೂಟೆ ಹೆಚ್ಚಿದೆ.

ಮೂಟೆಯ ಬಾರ ತಾಳಲಾರದೆ ಕೆಳಗೆ ಕುಸಿಯುತ್ತಿರುವವರಿಗೆ ಉಚಿತ ಊಟ, ವಸತಿ, ವಸ್ತ್ರ ಇನ್ನಿತರ ಬೌತಿಕ ಜೀವನಾಸಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡಿರುವುದು ಸರ್ಕಾರ. ಈ ಸರ್ಕಾರದ ಹಿಂದೆ ನಡೆದ ಅನೇಕರಿಗೆ ನಮ್ಮೊಳಗೆ ಅಡಗಿದ್ದ ಮಹಾಶಕ್ತಿಯ ಪರಿಚಯ ಆಗದೆ ಯಾರು ಹೆಚ್ಚು ಕೊಡುವರೋ ಅವರೆ ನಮ್ಮವರೆಂದು ಸಹಕರಿಸುತ್ತಾ ಮುಂದೆ ಬಂದರು.

- Advertisement -

ಇವರ ಮಧ್ಯೆ ಸೇರಿಕೊಂಡ ಮಧ್ಯವರ್ತಿಗಳು ಸರ್ಕಾರ
ಕೊಡುವ‌ ಪ್ರತಿಯೊಂದರಲ್ಲಿಯೂ ತಮ್ಮ ಪಾಲನ್ನು ಮಧ್ಯೆ ನಿಂತು ಪಡೆಯಲು ಸದವಕಾಶ ಸಿಕ್ಕಿದ‌ಪರಿಣಾಮ ಅವರ ಜೀವನದಲ್ಲಿ ಇದ್ದಲ್ಲೇ ಎಲ್ಲಾ ಸಿಕ್ಕಿದರೆ ಕಷ್ಟಪಟ್ಟು ದುಡಿಯುವ ಕಾಯಕವೆ ಬೇಡ. ಹೀಗಾಗಿ ಅನಕ್ಷರಸ್ಥ ಅಸಹಾಯಕ, ಅಮಾಯಕ, ಶ್ರಮಿಕರನ್ನು ಸರ್ಕಾರದ ವಿರುದ್ದ ಎತ್ತಿಕಟ್ಟಿ ಬೇಡಿಕೆಗಳನ್ನು ಹೆಚ್ಚಿಸಿಕೊಂಡು ತಮ್ಮ ಜೀವನವನ್ನು ಸುಲಭಮಾಡಿಕೊಂಡು,ಈ ಕಡೆ ಭೂಮಿ ಇಲ್ಲದೆ ಕೆಲಸವೂ ಇಲ್ಲದೆ ಭೂಮಿಪುತ್ರರು ಹಳ್ಳಿಬಿಟ್ಟು ದಿಲ್ಲಿ ಸೇರುವಂತಾಯಿತು. ಎಷ್ಟು ವರ್ಷ ಹೀಗೇ ನಡೆಯ ಬಹುದು? ಮೂಲ ಸ್ಥಳ,ಮೂಲ ಧರ್ಮ ಕರ್ಮವನ್ನು ಸೇರುವವರೆಗೆ ಆತ್ಮತೃಪ್ತಿ ಸಿಗೋದಿಲ್ಲ ಆದ್ದರಿಂದ ಈಗ ಎಷ್ಟೋ ಜನರಿಗೆ ಕೈತುಂಬಾ ಹಣವಿದ್ದರೂ ಊಟಕ್ಕೆ ಸಮಯವಿರೋದಿಲ್ಲ.

ಎಷ್ಟೇ ಸಂಪಾಧಿಸಿದರೂ ನೆಮ್ಮದಿ ಶಾಂತಿ,ಸಂತೋಷ ಮನೆಯೊಳಗಿಲ್ಲ. ಸಂಸಾರ ಚಿಕ್ಕದಾದರೂ ಅದನ್ನು ನಡೆಸುವುದಕ್ಕೆ ಕಷ್ಟಪಡುವ ಜನಸಂಖ್ಯೆ ಬೆಳೆದಿದೆ. ಹಾಗಾದರೆ ತಪ್ಪು ನಡೆದಿರೋದು ಎಲ್ಲಿ? ನಮ್ಮಲ್ಲೇ ತಪ್ಪು ನಡೆದಿರೋವಾಗ ಸರ್ಕಾರ ದ ವಿರುದ್ದ ನಿಂತರೆ ಸರಿಯಾಗಬಹುದೆ? ನಮ್ಮ ಅತಿಯಾದ ಸ್ವಾರ್ಥ ದ ಕರ್ಮಕ್ಕೆ ತಕ್ಕಂತೆ ಶಿಕ್ಷೆ ಪರಮಾತ್ಮನೆ ನೀಡಿ
ಎಚ್ಚರಿಸಿದರೂ ಅದಕ್ಕೂ ಸರ್ಕಾರ ಕಾರಣವೆಂದು ಹೊರ

ಬಂದು ಹೋರಾಟ ನಡೆಸಿದರೆ ಕಾಲಹರಣವಾಗುತ್ತದೆ.
ಭೂಮಿ ಯ ಸತ್ವ ವೈಜ್ಞಾನಿಕ ಚಿಂತನೆಗಳಿಂದ ಹಾಳಾಗಿದೆ
ಹಾಗೆ ವೈಜ್ಞಾನಿಕ ಸತ್ಯದಿಂದ ಮಾನವನ ಜ್ಞಾನ ಹಿಂದುಳಿದಿದೆ. ಇದನ್ನು ಸರಿಪಡಿಸಲು ನಾವೇ ಹಿಂದಿನ ಗುರು ಹಿರಿಯರ ಕಾಯಕವೆ ಕೈಲಾಸವೆಂಬ ಮಂತ್ರವನ್ನು ಅರ್ಥ ಮಾಡಿಕೊಂಡರೆ ಯಾವ ಸಹಕಾರ,ಸರ್ಕಾರ ನಮ್ಮ ಆಳೋದಿಕ್ಕೆ ಅವಕಾಶವಿಲ್ಲದೆ ಸ್ವತಂತ್ರ ಭಾರತದ ಸ್ವತಂತ್ರ ಪ್ರಜೆಗಳಾಗಬಹುದು. ಇದಕ್ಕೆ ಶಿಕ್ಷಣದಲ್ಲಿಯೇ ಕೆಲವು ಮುಖ್ಯ ವಾದ ಆಧ್ಯಾತ್ಮದ ಸತ್ಯ ತಿಳಿಸಿ ಬೆಳೆಸಿ ನೈತಿಕತೆಯನ್ನು ಮಕ್ಕಳು,ಮಹಿಳೆಯರಲ್ಲಿ ತುಂಬಲು ಮೊದಲು ನಾವು ಬದಲಾಗಬೇಕಿದೆ.

ಬದಲಾವಣೆ ನಮ್ಮ ಶಿಕ್ಷಣದಲ್ಲಿಯೇ ನಡೆಯಬೇಕಿದೆ. ವಿದೇಶಿವಿಜ್ಞಾನವನ್ನು ನಿಧಾನವಾಗಿ ಅರ್ಥ ಮಾಡಿಕೊಂಡು, ಮೊದಲು ನಮ್ಮ ಸತ್ಯಜ್ಞಾನಕ್ಕೆ ಸರಿಯಾದ ಶಿಕ್ಷಣ ನೀಡೋ ಕೆಲಸ ಸರ್ಕಾರ ನಡೆಸಿದರೆ, ಈ ಸಾಲಮಯ ಜೀವನದಿಂದ ಮುಕ್ತಿ ಪಡೆಯಬಹುದಷ್ಟೆ.

ಭೂಮಿತಾಯಿ, ಭಾರತಮಾತೆ, ಕನ್ನಡಮ್ಮ, ತಾಯಿ,ಸ್ತ್ರೀ ಶಕ್ತಿಯನ್ನು ಪೂಜನೀಯ ವಾಗಿ ಕಂಡ ನಮ್ಮ ಮಹಾತ್ಮರ ಜ್ಞಾನವನ್ನು ಪ್ರಚಾರಕ್ಕಷ್ಟೇ ಸೀಮಿತ ಮಾಡಿಕೊಂಡು ರಾಜಕೀಯಕ್ಕೆ ಸಹಕರಿಸಿದವರ ಜೀವನ ಶ್ರೀಮಂತ ವಾಗಿದ್ದರೂ ಅರ್ಧಸತ್ಯದ ಜ್ಞಾನ ಜೀವನ ವನ್ನು ಯಾವಾಗಬೇಕಾದರೂ ಅತಂತ್ರಸ್ಥಿತಿಗೆ ತರಲು ಸಾಧ್ಯವಿದೆ.

ನಮ್ಮ ಜೀವನಕ್ಕಾಗಿ ಪರರ ಜೀವನ ಹಾಳು ಮಾಡುವುದರಿಂದ ಲಾಭವೇನು? ನಷ್ಟ ಯಾರಿಗೆ? ತಿಳಿಯದೆ ಬಹಳ ಎಳೆದಿರುವ ಈ ಅಜ್ಞಾನವನ್ನು ತಮ್ಮ ಸ್ವಾರ್ಥ ಸುಖಕ್ಕಾಗಿ ಬಳಸಿಕೊಂಡರೆ ಇದೇ ದೊಡ್ಡ ಶಾಪ ಆಗಿ ಕಾಡುವುದೆನ್ನುವುದೇ ಕರ್ಮ ಯೋಗ. ಕರ್ಮವನ್ನು ಧರ್ಮದಿಂದ ನಡೆಸುವುದೆ ಆಧ್ಯಾತ್ಮ. ಆದಿ ಆತ್ಮ.ಇಲ್ಲಿ ನಮ್ಮ ಮೂಲ ಗುರು,ಹಿರಿಯರ ಧರ್ಮ ಕರ್ಮ ರಕ್ತದಲ್ಲಿ ಬೆರೆತಿರುವಾಗ, ಹೊರಗಿನಿಂದ ರಕ್ತಪಡೆದು ಜೀವ ಉಳಿಸಿಕೊಂಡರೂ ತಾತ್ಕಾಲಿಕವಷ್ಟೆ. ಜೀವ ಶಾಶ್ವತವಲ್ಲ ಆತ್ಮ ಶಾಶ್ವತ.

ಹಾಗೆಯೇ ರೈತ ಶಾಶ್ವತವಲ್ಲ ಅವನ ಸೇವೆ, ಹಾಗು ಭೂಮಿ ಶಾಶ್ವತ. ಇದರಲ್ಲಿರುವ ಆರೋಗ್ಯ ಹೆಚ್ಚಿ ಶಾಂತಿ ಸಿಗುತ್ತದೆ. ಆರೋಗ್ಯಕ್ಕೆ ಆರು ಯೋಗ್ಯ ಗುಣ ಅಗತ್ಯ. ಅದೇ ಕಾಮ, ಕ್ರೋಧ, ಲೋಭ, ಮೋಹ, ಮಧ,ಮತ್ಸರ ಇದನ್ನು ತನ್ನ ಹತೋಟಿಯಲ್ಲಿ ಟ್ಟು ಕೊಂಡು ಜೀವನ ನಡೆಸಿದವರೆ ಮಹಾತ್ಮರುಗಳು. ಸೇವಕರು, ದಾಸರು, ಶರಣರು ರಾಜಕೀಯದಿಂದ ಹೊರ ಬಂದು ರಾಜಯೋಗಿಗಳಾದರು. ಈಗ ಇದಕ್ಕೆ ವಿರುದ್ದ ನಡೆದಿದೆ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಅವಿರತ ಕಲಾಸೇವೆ ಮುಂದೊಮ್ಮೆ ಗುರುತಿಸಲ್ಪಡುತ್ತದೆ – ಪತ್ರಕರ್ತ ಪತ್ತಾರ

ಮೂಡಲಗಿ :ಕಲೆ ಎಂಬುದು ಯಾರ ಸ್ವತ್ತಲ್ಲ, ಸ್ವಾರ್ಥವಿಲ್ಲದ ಅವಿರತ ಕಲಾ ಸೇವೆ ಮುಂದೊಂದು ದಿನ ಗುರುತಿಸಲ್ಪಟ್ಟು, ಪದವಿ ಸನ್ಮಾನಗಳು ತಾನಾಗಿಯೇ ಅರಸಿ ಬರುತ್ತವೆ ಎಂದು ಪತ್ರಕರ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group