spot_img
spot_img

ವಜ್ರ ಮಹೋತ್ಸವ ಸಂಭ್ರಮದಲ್ಲಿ ವಿಶ್ವಸಂಸ್ಥೆ

Must Read

- Advertisement -

ಆಗ ತಾನೇ ಎರಡನೇ ಮಹಾಯುದ್ಧ ಮುಗಿದಿತ್ತು. ವಿಶ್ವಕ್ಕೆ ಶಾಂತಿಯ ಅಗತ್ಯವಿತ್ತು. ಇದನ್ನು ಮನಗಂಡು 1945ರಲ್ಲಿ ಜಾಗತಿಕ ಸಹಕಾರ, ಶಾಂತಿ ಸ್ಥಾಪನೆ, ಮಾರ್ಗದರ್ಶನ, ವ್ಯಾಪಾರ ವೃದ್ಧಿ, ಪರಸ್ಪರರ ಸಂಬಂಧ ಸುಧಾರಣೆ, ಅಂತಾರಾಷ್ಟ್ರೀಯ ವ್ಯಾಜ್ಯಗಳ ಇತ್ಯರ್ಥದ ಹಲವು ಉದ್ದೇಶಗಳನ್ನು ಇರಿಸಿಕೊಂಡು ‘ವಿಶ್ವಸಂಸ್ಥೆ (ಯುನೈಟೆಡ್‌ ನೇಷನ್ಸ್‌- UN)’ ಜನ್ಮತಾಳಿತು.

ವಸುದೈವ ಕುಟುಂಬಕಂ ಎಂಬ ದೃಷ್ಟಿಕೋನದಲ್ಲಿ ಇಡೀ ಜಗತ್ತಿನ ಎಲ್ಲ ರಾಷ್ಟ್ರಗಳನ್ನು ಸದಸ್ಯರನ್ನಾಗಿಸಿ ಅವರ ಅಗತ್ಯತೆಗಳಿಗೆ ಸ್ಪಂದಿಸಲು ಹಲವು ವಿಭಾಗಗಳನ್ನು ಕೂಡ ತೆರೆಯಲಾಯಿತು. ಆ ಪೈಕಿ ಪ್ರಮುಖವಾಗಿದ್ದು ಐವರು ಕಾಯಂ ಸದಸ್ಯ ರಾಷ್ಟ್ರಗಳ ‘ವಿಶ್ವಸಂಸ್ಥೆ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ). ಬಳಿಕ 1971ರಲ್ಲಿ ತನ್ನ ಜನ್ಮದಿನವನ್ನು ಸಾರ್ವಜನಿಕ ರಜಾ ದಿನವನ್ನಾಗಿ ಪರಿಗಣಿಸುವಂತೆ ಸದಸ್ಯ ರಾಷ್ಟ್ರಗಳಿಗೆ ವಿಶ್ವಸಂಸ್ಥೆ ಸೂಚಿಸಿತು.

  • 1945 ಜೂ.26 – 50 ರಾಷ್ಟ್ರಗಳ ಒಪ್ಪಿಗೆಯೊಂದಿಗೆ ವಿಶ್ವಸಂಸ್ಥೆ ಜನನ
  • 1945 ಅ.24 – ಅಧಿಕೃತವಾಗಿ ಕಾರ್ಯನಿರ್ವಹಣೆ ಶುರು, ಚೀನಾ, ಬ್ರಿಟನ್‌, ಅಮೆರಿಕದಂತಹ ಬಲಿಷ್ಠ ರಾಷ್ಟ್ರಗಳ ಸಾಥ್‌
  • 1946 ಡಿ.7 – ವಿಶ್ವಸಂಸ್ಥೆ ಲಾಂಛನ, ನೀಲಿ ಬಣ್ಣದ ಧ್ವಜಕ್ಕೆ ಅಧಿಕೃತ ಮಾನ್ಯತೆ, ಬಳಕೆ ಶುರು
  • 193 ಸದಸ್ಯರು – ಸದ್ಯ ವಿಶ್ವಸಂಸ್ಥೆಯ ಸದಸ್ಯತ್ವ ಪಡೆದಿರುವ ರಾಷ್ಟ್ರಗಳ ಸಂಖ್ಯೆ

ವಿಶ್ವಸಂಸ್ಥೆಯ ಕರ್ತವ್ಯಗಳು

- Advertisement -

ಮಾನವ ಹಕ್ಕುಗಳ ರಕ್ಷಣೆ, ಅಗತ್ಯ ನೆರವು, ಶಾಂತಿ-ಭದ್ರತೆ ಸ್ಥಾಪನೆ, ಸುಸ್ಥಿರ ಅಭಿವೃದ್ಧಿಗೆ ಉತ್ತೇಜನ, ಅಂತಾರಾಷ್ಟ್ರೀಯ ಕಾನೂನಿಗೆ ಕಾವಲು, ಮಹಿಳೆಯರ,ಮಕ್ಕಳ ಹಾಗೂ ಕಾರ್ಮಿಕರ ಹಕ್ಕು ರಕ್ಷಣೆ, ಹವಾಮಾನ ವೈಪರೀತ್ಯ ತಡೆಗೆ ರಾಷ್ಟ್ರಗಳಿಗೆ ಸಲಹೆ, ಮಾರಕ ರೋಗಗಳ ವಿರುದ್ಧ ಹೋರಾಟಕ್ಕೆ ಸಲಹೆ, ರಾಷ್ಟ್ರಗಳ ಸಾಂಸ್ಕೃತಿಕ ಮೌಲ್ಯಗಳ ರಕ್ಷಣೆ, ಸಾಮಾಜಿಕ ಆರ್ಥಿಕ ಸಮೀಕರಣ ಕಾಪಾಡುವುದು ಮುಂತಾದ ಕರ್ತವ್ಯಗಳನ್ನು ನಿಭಾಯಿಸುವ ಉದ್ದೇಶದಿಂದ ವಿಶ್ವಸಂಸ್ಥೆ ಸ್ಥಾಪನೆ.

ವಿಶ್ವಸಂಸ್ಥೆಯ ವಿವಿಧ ಯೋಜನೆಗಳು ಜಾರಿಯಲ್ಲಿರುವ ಪ್ರದೇಶಗಳು

ಆಫ್ರಿಕಾ, ಅಮೆರಿಕ, ಏಷ್ಯಾ ಹಾಗೂ ಪೆಸಿಫಿಕ್‌ ಪ್ರಾಂತ್ಯ, ಯುರೋಪ್‌, ಮಧ್ಯಪ್ರಾಚ್ಯ

- Advertisement -

ವಿಶ್ವಸಂಸ್ಥೆ ಕಾರ್ಯನಿರ್ವಹಣೆಯ ಪ್ರಮುಖ ಅಂಗಗಳು

ಪ್ರಧಾನ ಸಭೆ/ಸಂಸತ್‌( ಜನರಲ್ ಅಸೆಂಬ್ಲಿ) ಭದ್ರತಾ ಮಂಡಳಿ, ಆರ್ಥಿಕ ಹಾಗೂ ಸಾಮಾಜಿಕ ಮಂಡಳಿ, ಟ್ರಸ್ಟೀಶಿಪ್‌ ಮಂಡಳಿ (ಧಾರ್ಮಿಕ ಮಂಡಳಿ) ಅಂತಾರಾಷ್ಟ್ರೀಯ ನ್ಯಾಯಾಲಯ, ಸೆಕ್ರೆಟರಿಯಾಟ್‌/ ಆಡಳಿತ ಕಚೇರಿ.

ಅಂತಾರಾಷ್ಟ್ರೀಯ ನ್ಯಾಯಾಲಯವು ಹೇಗ್ ನಲ್ಲಿದ್ದರೆ ಉಳಿದ ಕಚೇರಿಗಳು ನ್ಯೂಯಾರ್ಕ್ ನಲ್ಲಿವೆ.

ವಿಶ್ವಸಂಸ್ಥೆ ವ್ಯವಹರಿಸುವ ಆರು ಅಧಿಕೃತ ಭಾಷೆಗಳು

ಅರೇಬಿಕ್‌, ಚೈನೀಸ್‌, ಇಂಗ್ಲಿಷ್‌, ರಷ್ಯನ್‌, ಸ್ಪ್ಯಾನಿಷ್‌, ಫ್ರೆಂಚ್‌

12 ಬಾರಿ ನೊಬೆಲ್‌ ಶಾಂತಿ ಪುರಸ್ಕಾರ

ಕಳೆದ 75 ವರ್ಷಗಳಲ್ಲಿ ವಿಶ್ವಸಂಸ್ಥೆ ಮತ್ತು ಅದರ ಅಂಗಸಂಸ್ಥೆಗಳು, ನಿಧಿಗಳು, ಕಾರ್ಯಕ್ರಮಗಳು, ಅದರ ಮುಖ್ಯಸ್ಥರು ಸೇರಿದಂತೆ ಒಟ್ಟು 12 ಬಾರಿ ಪ್ರತಿಷ್ಠಿತ ನೊಬೆಲ್‌ ಶಾಂತಿ ಪುರಸ್ಕಾರವನ್ನು ಪಡೆದಿದ್ದಾರೆ. ಆ ಪೈಕಿ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಕೋಫಿ ಅನ್ನಾನ್‌, ದಾಗ್‌ ಹ್ಯಾಮ್ಮರ್ಸಕ್‌ ಜೊಲ್ಡ್‌ ಪ್ರಮುಖರು.

2020ನೇ ಸಾಲಿನ ನೊಬೆಲ್‌ ಶಾಂತಿ ಪುರಸ್ಕಾರ ಕೂಡ ಕೊರೊನಾ ಆತಂಕದ ಸಮಯದಲ್ಲಿ ಹಿಂದುಳಿದ ರಾಷ್ಟ್ರಗಳಲ್ಲಿ ಹಸಿವಿನ ಬಾಧೆ ತಪ್ಪಿಸಲು ಶ್ರಮಿಸಿದ ವಿಶ್ವಸಂಸ್ಥೆಯ ‘ಜಾಗತಿಕ ಆಹಾರ ಯೋಜನೆ'(ಡಬ್ಲುಎಫ್‌ಪಿ) ಪಡೆದಿದ್ದು ಗಮನಾರ್ಹ. 88 ರಾಷ್ಟ್ರಗಳ 9.7 ಕೋಟಿ ಜನರನ್ನು ಆಹಾರದ ಅಭದ್ರತೆ ಮತ್ತು ಹಸಿವಿನ ಸುಳಿಯಿಂದ ಪಾರು ಮಾಡಲಾಗಿದೆ.

- Advertisement -
- Advertisement -

Latest News

ಕನ್ನಡಕ್ಕಾಗಿ ಇನ್ನೂ ಹೋರಾಡಬೇಕಾಗಿರುವುದು ವಿಷಾದನೀಯ – ಚಂದ್ರಶೇಖರ ಅಕ್ಕಿ

ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸಂದರ್ಶನ ಮೂಡಲಗಿ - ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನವು ಇದೇ ದಿ. ೨೩ , ೨೪...
- Advertisement -

More Articles Like This

- Advertisement -
close
error: Content is protected !!
Join WhatsApp Group