ವಿದೇಶಿ ತ್ಯಾಗ ಮಾಡಿ ಸ್ವಾವಲಂಬನೆ ಸಾಧಿಸುವುದೇ ಉನ್ನತ ಜೀವನದ ಗುರಿ

Must Read

ಬ್ರಿಟನ್ ಮಾದರಿಯ ವೈರಸ್ ಭಾರತದಲ್ಲಿ ಮೊದಲೇ ಇತ್ತಂತೆ. ಕಾರಣ ಬ್ರಿಟಿಷ್ ಸರ್ಕಾರ ದೇಶ ಬಿಟ್ಟು ಹೋಗಿದ್ದರೂ, ಅವರ ಶಿಕ್ಷಣ, ವ್ಯವಹಾರ, ವ್ಯಾಪಾರ, ವಿಜ್ಞಾನ, ಆಹಾರ ವಿಹಾರ ಧರ್ಮ, ಸಂಸ್ಕೃತಿ ಈಗಲೂ ರಾಜಾರೋಷವಾಗಿ ಆಚರಣೆಯಲ್ಲಿದೆ. ವಿದೇಶಿಗರನ್ನು ಓಡಿಸಲು ಪ್ರಾಣಕೊಟ್ಟ ಮಹಾತ್ಮರ ವಿರುದ್ದ ರಾಜಕೀಯ ನಡೆಸಿ, ಈಗ ವಿದೇಶಿಗಳನ್ನು ಕರೆತರುವ ಕೆಲಸಕ್ಕೆ ನಾವೇ ಸಹಕಾರ ನೀಡಿ ರೋಗ ಬಳುವಳಿಯಾಗಿದೆ.

ಇದನ್ನು ಆಧ್ಯಾತ್ಮದ ದೃಷ್ಟಿಯಿಂದ ಚರ್ಚೆ ನಡೆಸಿದಾಗಲೆ ಕೊರೊನ ವಾಗಲಿ,ಇನ್ನಿತರ ಹೊಸ ಹೊಸ ರೋಗವಾಗಲಿ ಭಾರತೀಯರನ್ನು ಯಾವ ರೀತಿಯಲ್ಲಿ ಹಿಂದುಳಿಸಿ ಅವರ ಆಂತರಿಕ ಶಕ್ತಿಯನ್ನು ಹಾಳುಮಾಡುತ್ತಿದೆ,ಮಾಡಿದೆ ,ಮಾಡುತ್ತದೆ ಎನ್ನುವ ಸತ್ಯ ಅರ್ಥ ಆಗಬಹುದೇನೋ?

ಹಿಂದೆಯೂ ಎಷ್ಟೋ ಮಹಾತ್ಮರುಗಳು ಸ್ವದೇಶಿ ರಕ್ಷಣೆಯ ಆಂದೋಲನ,ಹೋರಾಟ ನಡೆಸಿದ್ದರೂ ವಿದೇಶಿ ವ್ಯಾಮೋಹದಲ್ಲಿ ವೈಜ್ಞಾನಿಕ ಚಿಂತನೆಗಳಿಗೆ ಹೆಚ್ಚಿನ ಸಹಕಾರ ಸಹಾಯ ಸಿಕ್ಕಿದ ಕಾರಣ ಸತ್ಯ,ಸದ್ವಿಚಾರ,ಸ್ವಾವಲಂಬನೆ, ಸರಳ ಜೀವನದ ಹಿಂದಿನ ಉದ್ದೇಶ ತಿಳಿಯಲಿಲ್ಲ. ಈಗಲೂ ಇದೇ ಮುಂದೆ ನಡೆದಿದೆ.

ಶಿಕ್ಷಣವೆ ಪರಕೀಯರ ಬಳುವಳಿ ಆಗಿದ್ದು,ಅದನ್ನು
ಮಹಿಳೆ ಮಕ್ಕಳ ಒಳಗೆ ಹೊರಗೆ ತುಂಬಿ ಮನೆಯಿಂದ ಹೊರಗೆಳೆದ ವ್ಯವಹಾರ ಜ್ಞಾನ ಹಣ ಸಂಪಾದನೆ ಗೆ ಪ್ರೇರಣೆ ನೀಡಿತು. ಹೊರಗೆ ಬಂದ ಮನಸ್ಸನ್ನು ತಡೆಹಿಡಿಯಲಾಗದೆ ಕಂಡದ್ದೆ ಸತ್ಯ,ಕಾಣೋದೆಲ್ಲಾ ಸುಂದರ ಎನ್ನುವ ಮಾಯೆಯಲ್ಲಿ ಮಾಯಾಂಗನೆಯರನ್ನು ಎತ್ತಿಹಿಡಿದು ಮನರಂಜನೆಯ ಜೀವನದಲ್ಲಿ ಮೈ ಮರೆತಾಗ ವಿದೇಶದಿಂದ ಬರುವ ಹೊಸಹೊಸ ರೋಗಕ್ಕೆ ಬಲಿಯಾದವರ ಲೆಕ್ಕವಿಲ್ಲ.

ಅದಕ್ಕೂ ವಿದೇಶಿ ಔಷಧ ತಿಂದು ಗುಣಮುಖರಾಗಿ ಮುಂದೆ ನಡೆದು ಈಗ ಭಾರತ ತನ್ನ ಮೂಲ ಆಯುರ್ವೇದ ಔಷಧದತ್ತ
ತಿರುಗಿ ನಡೆಯುತ್ತಿದ್ದರೂ ಸರ್ಕಾರಕ್ಕೆ ನಂಬಿಕೆಯಿಲ್ಲದೆ ಮತ್ತೆ ಜನರಿಗೆ ವಿದೇಶದ ಔಷಧ ಕೊಟ್ಟು ಗುಣಮುಖರಾಗಿಸುವತ್ತ ಹೆಜ್ಜೆ ಹಾಕಿದೆ.ಕಾರಣ ರೋಗದ ಮೂಲವೆ ವಿದೇಶ ಔಷಧವೂ ಅದೇ ಕೊಡಬೇಕು.

ಆದರೆ, ನಮ್ಮ ದೇಶದ ಮೂಲ ಬಿಟ್ಟು ಎಷ್ಟು ಜನ್ಮದವರೆಗೆ ಪರಾವಲಂಬಿಗಳಾಗಿರಬೇಕು? ಆತ್ಮಜ್ಞಾನದ ಶಿಕ್ಷಣಕ್ಕೆ ವಿರುದ್ದ ನಡೆದ ವೈಜ್ಞಾನಿಕ ಸತ್ಯ ಮಾನವನ ಜೀವ ಉಳಿಸಲು ಇತರ ಜೀವ,ಪ್ರಾಣಗಳನ್ನು ಬಲಿಪಡೆದಾಗ ಅದರ ಪರಿಣಾಮವೆ ಮತ್ತೊಂದು ಹೊಸರೋಗದ ಸೃಷ್ಟಿ. ಇದನ್ನು ಧಾರ್ಮಿಕ ವರ್ಗದವರು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ.
ಕರ್ಮಕ್ಕೆ ತಕ್ಕಂತೆ ಪ್ರತಿಫಲ. ಆರೋಗ್ಯ ಎಂದರೆ ಆರು ಯೋಗ್ಯ ರೀತಿಯಲ್ಲಿ ಬಳಸುವುದಾಗಿದೆ.

ಶಿಕ್ಷಣದಲ್ಲಿಯೇ ಆರೋಗ್ಯಕರ ವಿಚಾರವಿಲ್ಲವಾದಾಗ ಸ್ವಚ್ಚ ಭಾರತೀಯರು ಹುಟ್ಟುವುದಾದರೂ ಹೇಗೆ ಸಾಧ್ಯ. ಅರ್ಧಸತ್ಯದ ವಿಚಾರಗಳು ಅತಂತ್ರಸ್ಥಿತಿಗೆ ತಲುಪಿಸಿದೆ.

ಒಟ್ಟಿನಲ್ಲಿ ಬೇವಿನ ಮರದಲ್ಲಿ ಮಾವಿನಹಣ್ಣು ಕಾಣಲು ಹೋಗಿ ಬೇವಿನ ಕಹಿಯನ್ನು ಕುಡಿದರೂ ಆರೋಗ್ಯ ವೃದ್ದಿ ಆಗುತ್ತದೆ. ಕಷ್ಟ ಅನುಭವಿಸಿದ ನಂತರವೆ ಅನುಭವ ಸತ್ಯದ ಅರಿವಾಗುತ್ತದೆ. ಆಗೋದೆಲ್ಲಾ ಒಳ್ಳೆಯದಕ್ಕೆ .ಸತ್ಯ ಸತ್ಯವೆ.ಅಧ್ಯಾತ್ಮ ಸತ್ಯ ಭೌತಿಕ ಸತ್ಯ ಒಂದೇ ನಾಣ್ಯದ ಎರಡು ಮುಖ.ವ್ಯವಹಾರಕ್ಕಿಳಿದಾಗ ಸಮಾನ ಮಾನ್ಯತೆ. ಆದರೆ, ಮೂಲವನ್ನು ಮರೆತು ಮೇಲಿನ ಮುಖ ಮರೆತು ಕೆಳಗಿಳಿದರೆ ಆರೋಗ್ಯವೃದ್ದಿ ಅಸಾಧ್ಯ.

ಚೀನಾದಿಂದ ಬಂದ ಸಣ್ಣ ವೈರಸ್ ಕಣ ಓಡಿಸಲು ಚೈನಾ ವ್ಯವಹಾರದಲ್ಲಿ ಕಡಿತಗೊಳಿಸಿದ ಹಾಗೆ ಬ್ರಿಟಿಷ್ ವ್ಯವಹಾರ ಶಿಕ್ಷಣವೂ ನಮ್ಮಲ್ಲಿ ಇದೆ.ಇದನ್ನು ಬಿಟ್ಟು ಭಾರತೀಯರಾದರೆ ಆರೋಗ್ಯವೃದ್ದಿಯಾಗುತ್ತದೆ.ಹಾಗೆಯೇ ಮಹಾಮಾರಿ ಅವತಾರವೂ ಅದೃಶ್ಯ ವಾಗುತ್ತದೆ ಎನ್ನಬಹುದು.

ಸಾಧ್ಯವೆ?‌‌ ವಿದೇಶಿ ವ್ಯವಹಾರ,ಬಂಡವಾಳ, ಸಾಲ,ಶಿಕ್ಷಣ ,ಮನರಂಜನೆ ಬೇಕು ಅವರ ರೋಗ ಬೇಡವೆ? ಪೋಷಕರ ಆಸ್ತಿ ಐಶ್ವರ್ಯ ಬೇಕು ಅವರ ಧರ್ಮ ಕರ್ಮಬಿಟ್ಟರೆ ಹೇಗೆ ಅವರ ರೋಗವೂ ಅನುವಂಶಿಯವಾಗಿರುವುದೋ ಇದೂ ಹಾಗೆ.
ಇಲ್ಲಿ ಋಣ ಹಾಗು ಕರ್ಮವೆ ಜೀವನ ನಡೆಸಿರುವುದು.ಇದು ನಮ್ಮವರದ್ದು ಪರರದ್ದು ಸೇರಿದಾಗ ವಿರುದ್ಧ ಪರಿಣಾಮ ಬೀರುವುದು.

ಅಧ್ಯಾತ್ಮ ವಿಚಾರಗಳನ್ನು ಕೇವಲ ಪುರಾಣ ಇತಿಹಾಸದ ಕಥೆ ತಿಳಿಸುವುದಿಲ್ಲ. ನಮ್ಮ ಸುತ್ತಮುತ್ತಲಿನ ಬದಲಾವಣೆಯಲ್ಲಿ ಯೆ ನಾವು ಸೂಕ್ಷ್ಮವಾಗಿ ತಿಳಿದು ನಮ್ಮನ್ನು ನಾವು ಸ್ವಚ್ಚ ಮಾಡಿಕೊಂಡರೆ ಉತ್ತಮ. ಇದಕ್ಕೆ ಸರ್ಕಾರ ಯಾಕೆ ಬೇಕು?ಸಹಕಾರ ಆತ್ಮಸಾಕ್ಷಿಗೆ ಪರವಾಗಿದ್ದರೆ ಆರೋಗ್ಯರಕ್ಷಣೆ.

ಉಚಿತವಾಗಿ ಪಡೆದದ್ದೆಲ್ಲಾ ಸಾಲವೆ. ತೀರಿಸದೆ ಬಿಡುಗಡೆ ಯಿಲ್ಲ. ಜೀವಹೋದರೂ ಆತ್ಮಶಾಶ್ವತ.ಋಣ ಎಂದರೆ ಸಾಲ ಕರ್ಮ ಎಂದರೆ ಕೆಲಸ.ಋಣ ತೀರಿಸಲು ಸತ್ಕರ್ಮದಿಂದ ಸಾಧ್ಯ. ಸತ್ಕರ್ಮ ನಮ್ಮ ಗುರುಹಿರಿಯರ ಧರ್ಮ ಹಾಗು ಸತ್ಯದ ಮೂಲ ಕಸುಬಿನಲ್ಲಿತ್ತು. ಸ್ವಾವಲಂಬನೆ, ಸ್ವಾಭಿಮಾನಸ್ವಾತಂತ್ರ್ಯ ನಮ್ಮ ಶಿಕ್ಷಣದಿಂದ ಬೆಳೆಸಬೇಕಿತ್ತು.

ಸತ್ಯವೆ ದೇವರು,ಕಾಯಕವೆ ಕೈಲಾಸ..ಇವುಗಳು ದಾಸ,ಶರಣರ ಮಂತ್ರವಾಗಿತ್ತು. ಕಲಿಯುಗದ ಪ್ರಭಾವದಿಂದಾಗಿ ಮುಂದೆ ನಡೆದ ಮನಸ್ಸನ್ನು ಹಿಂದೆ ತರಲು ಕಷ್ಟವಾದರೂ ಸದ್ಗತಿಗೆಅನಿವಾರ್ಯ ವಾಗಿದೆ. ಒಳಗಿರುವ ಅಸುರೀ ಶಕ್ತಿಯ ದುಷ್ಟ ಬುದ್ದಿಯನ್ನು ಬಿಟ್ಟು ನಡೆಯಲು ಶಿಷ್ಟಾಚಾರದಿಂದ ಸಾಧ್ಯ.ಪರಕೀಯರು ಹಿಂದೆ ನಮ್ಮನ್ನು ಆಳಲು ಬಂದಿದ್ದರು.ಈಗ ನಮ್ಮವರೆ ಪರಕೀಯರಿಗೆ ಸಹಕರಿಸಿ ಆಳುತ್ತಿರುವಾಗ ರೋಗಹರಡುವುದಿಲ್ಲವೆ?
ಮಹಾತ್ಮರು ಮಾಡು ಇಲ್ಲ ಮಡಿ ಎಂದು ಮುಂದೆ ನಡೆದರೆ ಈಗ ನಮ್ಮರನ್ನೆ ಕಾಡಿ ಕಡಿಯುವಷ್ಟು ರಾಜಕೀಯತೆ ಬೆಳೆದಿದೆ.

ಬೆಳೆಸಿದವರೂ ಸಹಕರಿಸಿದವರೂ ಪ್ರಜೆಗಳೆ ಆದಾಗ ಅದಕ್ಕೆ ಪ್ರತಿಫಲ ವನ್ನು ಅನುಭವಿಸಬೇಕೆನ್ನುವುದೆಕರ್ಮಸಿದ್ದಾಂತ. ಮಾಡಿದ್ದುಣ್ಣೋ ಮಹಾರಾಯ ಎಂದಂತೆ ನಮ್ಮ ಆಧ್ಯಾತ್ಮಿಕ ಶಕ್ತಿ ಯಾರ ವಶದಲ್ಲಿದೆ?

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

Latest News

ಸಿಂಡಿಕೇಟ್ ಸದಸ್ಯ ಜಗದೀಶ ಭೈರಮಟ್ಟಿಯವರಿಗೆ ಸನ್ಮಾನ

ಬಾಗಲಕೋಟೆ : ತಾಲೂಕಿನ ಬೇವೂರಿನ ಆದರ್ಶ ವಿದ್ಯಾವರ್ಧಕ ಸಂಘ ವಜ್ರಮಹೋತ್ಸವದ ಸಂಭ್ರಮಾಚರಣೆಯ ಹೊಸ್ತಿಲಲ್ಲಿ ಇದ್ದು ಸಂಸ್ಥೆಗೆ ಹಿರಿಮೆಯ ಗರಿ ಹೆಮ್ಮೆ ಎಂಬಂತೆ ಶ್ರೀ ಪರಪ್ಪ ಸಂಗಪ್ಪ...

More Articles Like This

error: Content is protected !!
Join WhatsApp Group