spot_img
spot_img

‘ಶ್ರೀ ಅಲ್ಲಮಪ್ರಭು’ ಚಿತ್ರದ ಅದ್ದೂರಿ ಸೆಟ್ ಗೆ ಫಿಲಂ ಚೇಂಬರ್ ಅಧ್ಯಕ್ಷರ ಭೇಟಿ

Must Read

spot_img
- Advertisement -

ಬೆಂಗಳೂರು – ಅಮರಜ್ಯೋತಿ ಪಿಕ್ಚರ್ಸ್ ಸಂಸ್ಥೆಯಿಂದ ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 12 ನೇ ಶತಮಾನದ ಶಿವಸ್ವರೂಪಿ, ವ್ಯೋಮಕಾಯ ಸಿದ್ಧ,ಶೂನ್ಯಸಿಂಹಸನಾಧಿಶ್ವರ “ಶ್ರೀ ಅಲ್ಲಮಪ್ರಭುದೇವರ” ದಿವ್ಯ ಚರಿತ್ರೆಯನ್ನು ವಿಶೇಷವಾಗಿ ಅನುಭವ ಮಂಟಪದ ಸೆಟ್ ಹಾಕಿದ “ಶ್ರೀ ಅಲ್ಲಮಪ್ರಭು” ಚಲನಚಿತ್ರ ಸೆಟ್ ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಡಿ ಆರ್ ಜೈರಾಜ್ ರವರು ಹಾಗೂ ಮಾಜಿ ಕಾರ್ಯದರ್ಶಿಗಳಾದ ಭಾ ಮಾ ಹರೀಶ್ ರವರು ಭೇಟಿಯಾಗಿ ಚಿತ್ರ ತಂಡಕ್ಕೆ ಹಾರೈಸಿದರು.

ಸಮಾಜಕ್ಕೆ ಇಂಥ ಚಿತ್ರಗಳ ನಿರ್ಮಾಣ ಅವಶ್ಯಕತೆಯಿದೆ ಅಲ್ಲದೆ ವಿಶ್ವದ ಪ್ರಪ್ರಥಮ ಸಂಸತ್ತು 12ನೇ ಶತಮಾನದ ಅನುಭವ ಮಂಟಪ…. ಪ್ರೇಕ್ಷಕರು ಇಂತಹ ಚಿತ್ರಗಳಿಗೆ ಪ್ರೋತ್ಸಾಹಿಸಬೇಕು ಎಂದು ಜೈರಾಜ್ ಹೇಳಿದರು.

ಈ ಚಿತ್ರವು ಬನವಾಸಿ ಶ್ರೀ ಮಧುಕೇಶ್ವರ ದೇವಸ್ಥಾನ ,ಶಿರಸಿ,ಸಹಸ್ರ ಲಿಂಗ, ಬಾಗಲಕೋಟ ಜಿಲ್ಲೆಯ ತೇರದಾಳ, ಮುಗಳಖೋಡ,ಹಣಗಂಡಿ, ಚಿಮ್ಮಡ ಕೆರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿದ್ದು ವಿಶೇಷ.

- Advertisement -

ಚಿತ್ರದ ತಾರಾಬಳಗದಲ್ಲಿ ಸಚಿನ್ ಸುವರ್ಣ, ನಿನಾಸಂ ಅಶ್ವಥ್, ರಮೇಶ ಪಂಡಿತ್,ಗಣೇಶ ರಾವ್ ಕೇಸರ್ಕರ್ ,ನಾರಾಯಣ ಸ್ವಾಮಿ, ವಿಕ್ರಂ ಸೂರಿ, ರಘು ಭಟ್,ಯತೀರಾಜ್, ಶೃಂಗೇರಿ ರಾಮಣ್ಣ, ಶಿವಮೊಗ್ಗ ಭಾಸ್ಕರ್, ಕಾವೇರಿ ಶ್ರೀಧರ್, ಶಿವಕುಮಾರ್ ಆರಾಧ್ಯ, ಡಾ. ಚಿಕ್ಕಹೆಜ್ಜಾಜಿ ಮಹಾದೇವ, ಸಂದೇಶ ರಾಜ್, ಸಂದೀಪ್ ಮಲಾನಿ, ಗುಬ್ಬಿ ನಟರಾಜ್, ಶಿವಮೊಗ್ಗ ರಾಮಣ್ಣ, ಅವಿನಾಶ ಪಾಟೀಲ್,ರಮಣಾಚಾರ್ಯ,ರಾಧಾ ಕೃಷ್ಣ ರಾವ್, ರಾಜ್ ಉದಯ್, ಸಂಭ್ರಮ ಶ್ರೀ, ಅಮೃತಾ, ವರ್ಷಿಣಿ ಹಾಗೂ ಇನ್ನಿತರರು.

ಈ ಚಿತ್ರವನ್ನು ಪೂಜ್ಯರ ಆಶೀರ್ವಾದದೊಂದಿಗೆ ಶ್ರೀ ಮಹಾವೀರ ಪ್ರಭು ಹಾಗೂ ಮಾಧವಾನಂದ y ಸೇರಿ ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಚಿತ್ರರಂಗದಲ್ಲಿ ಹಲವು ಖ್ಯಾತ ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವಿ ಶರಣ್ ಗದ್ವಾಲ್ ರವರು ಆಕ್ಷನ್ ಕಟ್ ಹೇಳಿದ್ದಾರೆ.

- Advertisement -

ಕಥೆ, ಚಿತ್ರಕಥೆ, ಪರಿಕಲ್ಪನೆ ಮಾಧವಾನಂದ y, ಛಾಯಾಗ್ರಾಹಣ – ಆರ್ ಗಿರಿ,ರವಿಶಂಕರ್ ಹಾಗೂ ಮಾಧವಾನಂದ ಸೇರಿ ಸಂಭಾಷಣೆ ಬರೆದಿದ್ದಾರೆ, ಸಂಗೀತ – ಕುಮಾರ್ ಈಶ್ವರ್,ಸಂಕಲನ – ಬಿ. ಎಸ್. ಕೆಂಪರಾಜು, ಪ್ರಸಾದನ – ರಮೇಶ ಬಾಬು, ವಸ್ತ್ರಾಲಂಕಾರ – ಬೆಳ್ಳಿಚುಕ್ಕಿ ವೀರೇಂದ್ರ, ಪ್ರಚಾರ ಕಲೆ – ಮಸ್ತಾನ್, ಪತ್ರಿಕಾ ಸಂಪರ್ಕ – ಎಂ. ಜಿ. ಲಿಂಗರಾಜ್, ಸ್ಥಿರ ಚಿತ್ರಣ – ಪ್ರೇಮ್ ರಾಜ್…ಈ ಚಿತ್ರವನ್ನು ಶುಕ್ರ ಫಿಲಂಸ್ ಸೋಮಣ್ಣರವರು ಕಾರ್ಯಕಾರಿ ನಿರ್ಮಾಪಕರು ವಿಶಾಲ ಕರ್ನಾಟಕಕ್ಕೆ ಹಂಚಿಕೆ ಮಾಡಲಿದ್ದಾರೆ.

- Advertisement -
- Advertisement -

Latest News

ಹನಿಗವನಗಳು

ಹನಿಗವನಗಳು 1) ಸುಳ್ಳುಗಾರರು ಹತ್ತು ನಾಲಿಗೆಯ ರಾವಣ ಹೇಳಲಿಲ್ಲ ಒಂದು ಸುಳ್ಳು ಒಂದೇ ನಾಲಿಗೆಯ ರಾಜಕಾರಣಿ ಹೇಳುತ್ತಾನೆ ದಿನಕ್ಕತ್ತು ಸುಳ್ಳು! 2) ಶೀಲಾ ನೆರೆಮನೆ ಶೀಲಾ ಪರ ಪುರುಷರೊಡನೆ ಸೇರಿ ಹೆಸರು ಕೆಡಿಸಿಕೊಂಡಳು 3) ಟಿವಿ ಹಾವಳಿ ಮನೆಯಲ್ಲಿ ಟಿವಿ ಮುಂದೆ ಸದಾ ಇರುವ ವಿದ್ಯಾ ರ್ಥಿಗಳು ಶಾಲೆಯಲ್ಲಿ ಹಿಂದೆ ಬೀಳುವರು. 4) ವಾಸ್ತವ ಕಟ್ಟುವವು...
- Advertisement -

More Articles Like This

- Advertisement -
close
error: Content is protected !!
Join WhatsApp Group