ಸುಶಾಂತ ಆತ್ಮಹತ್ಯೆ ಪ್ರಕರಣ ; ರಿಯಾ ಚಕ್ರವರ್ತಿಗೆ ಜಾಮೀನು ನೀಡಿದ ಮುಂಬೈ ಹೈಕೋರ್ಟ್

Must Read

ಖ್ಯಾತ ಬಾಲಿವುಡ್ ನಟ ಸುಶಾಂತ ಸಿಂಗ್ ರಾಜಪೂತ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಹಾಗೂ ಬಾಲಿವುಡ್ ನಲ್ಲಿ ಡ್ರಗ್ಸ್ ನ ಪ್ರಭಾವ ಕುರಿತಂತೆ ಮುಖ್ಯ ಆರೋಪಿಯಾಗಿದ್ದ ರಿಯಾ ಚಕ್ರವರ್ತಿಗೆ ಇಂದು ಮುಂಬೈ ಹೈಕೋರ್ಟ್ ಜಾಮೀನು ನೀಡಿದೆ.

ಸುಶಾಂತ ಅವರ ಪ್ರೇಯಸಿಯಾಗಿದ್ದ ರಿಯಾ ವಿರುದ್ಧ ಡ್ರಗ್ಸ್ ಸೇವನೆ ಹಾಗೂ ಮಾರಾಟದ ಆರೋಪವಿದೆ. ಸುಶಾಂತ ಅವರಿಗೆ ಡ್ರಗ್ಸ್ ನೀಡಿರುವ ಆರೋಪ ಕೂಡ ಇದ್ದು ರಿಯಾ ಜೊತೆ ಇನ್ನೂ ಅನೇಕ ಬಾಲಿವುಡ್ ನಟಿಯರನ್ನು ದಸ್ತಗಿರಿ ಮಾಡಲಾಗಿದೆ.

ತನಿಖಾ ತಂಡಕ್ಕೆ ರಿಯಾ ಕಡೆಯಿಂದ ಮಾರುವಷ್ಟು ಡ್ರಗ್ಸ್ ಸಿಕ್ಕಿಲ್ಲ, ರಿಯಾ ಕೂಡ ಡ್ರಗ್ಸ್ ಮಾರಿದ ಬಗ್ಗೆ ಹಾಗೂ ಕೊಂಡ ಬಗ್ಗೆ ಯಾವುದೆ ಸಾಕ್ಷಿ ಲಭ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
ಸುಶಾಂತ ಸಿಂಗ್ ಆತ್ಮಹತ್ಯೆ ಮಾಡಿಕೊಂಡಾಗ ಮೊದಲು ಚಿತ್ರರಂಗದ ಲ್ಲಿ ಸ್ವಜನ ಪಕ್ಷಪಾತದ ಹೆಸರು ಕೇಳಿಬಂದಿತು.

ಆಮೇಲೆ ಮಹಾರಾಷ್ಟ್ರ ಹಾಗೂ ಹರಿಯಾಣ ಸರ್ಕಾರಗಳ ನಡುವೆ ಮುಸುಕಿನ ಗುದ್ದಾಟಕ್ಕೆ ಸಾಕ್ಷಿಯಾಯಿತು. ಸುಶಾಂತ ಅವರಿಗೆ ನ್ಯಾಯದ ಬಗ್ಗೆ ಮಾತನಾಡಿದ ನಟಿ ಕಂಗನಾ ರಾಣಾವತ್ ಅವರನ್ನು ಮಹಾರಾಷ್ಟ್ರದ ಶಿವಸೇನಾ ಸರ್ಕಾರ ಸೇಡಿನ ಮನೋಭಾವದಿಂದ ನೋಡಿತು ಅಲ್ಲದೆ ಕಂಗನಾ ಅವರ ಬಂಗಲೆಯನ್ನೂ ಕೆಡವಿಸಿತು ಮಹಾರಾಷ್ಟ್ರ ಸರ್ಕಾರ.

ಆದರೆ ಸ್ವಜನ ಪಕ್ಷಪಾತದ ವಿಷಯ ಮರೆಯಾಗಿ ಸುಶಾಂತ ಅವರಿಗೆ ಡ್ರಗ್ಸ್ ನೀಡಲಾಗಿದೆ ಎಂಬಲ್ಲಿಂದ ಶುರುವಾದ ಪ್ರಕರಣವು ರಿಯಾ ಚಕ್ರವರ್ತಿ ಸೇರಿದಂತೆ ಹಲವು ಚಿತ್ರ ನಟ ನಟಿಯರು ಡ್ರಗ್ಸ್ ಹಗರಣದಲ್ಲಿ ಭಾಗಿಯಾಗಿದ್ದು ಬಹಿರಂಗವಾಗಿತ್ತು. ಈಗ ಕೇವಲ ರಿಯಾ ಚಕ್ರವರ್ತಿಗೆ ಜಾಮೀನು ಸಿಕ್ಕಿದೆ

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group