ಬೀದರ ಗಡಿ ಜಿಲ್ಲೆಯ ಬೀದರ್ ನಲ್ಲಿ ಭಾರೀ ಪ್ರಮಾಣದ ಜಿಲಿಟಿನ್ ಸ್ಫೋಟಕಗಳನ್ನು ವಶಪಡಿಸಿಕೊಂಡ ಬೀದರ ಪೋಲಿಸ್ ಇಲಾಖೆ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದೆಯೆಂದೇ ಹೇಳಬೇಕು.
ಆದರೂ ಇತ್ತೀಚೆಗೆ ಚಿಕ್ಕಬಳ್ಳಾಪುರ ಹಾಗೂ ಶಿವಮೊಗ್ಗದಲ್ಲಿ ನಡೆದಿರುವ ಅನಧಿಕೃತ ಜಿಲೆಟಿನ್ ಸ್ಫೋಟಗಳಿಂದ ಗಣಿ ಮಾಲೀಕರು ಪಾಠ ಕಲಿತಿಲ್ಲವೆಂಬುದು ಸಾಬೀತಾಗುತ್ತಿದೆ. ಮತ್ತೆ ಮತ್ತೆ ಇಂಥ ಘಟನೆಗಳು ಮರುಕಳಿಸುತ್ತಿವೆ.
ಆದರೆ ಬೀದರನಲ್ಲಿ ಪತ್ತೆಯಾಗಿರುವ ಜಿಲೆಟಿನ್ ಭರಿತ ಟಿಪ್ಪರ್ ಹಾಗೂ ಬಾಕ್ಸ್ ಗಳು ಜಿ ಕೆ ಕನ್ವೆನ್ಷನ್ ಮಾಲಿಕತ್ವದ ಕಂಪನಿಗೆ ಸಂಬಂಧಿಸಿದ್ದು ಬೀದರ್ ಪ್ರಭಾವಿ ನಾಯಕ ಬಿಜೆಪಿ ಪಕ್ಷದ ಮುಖಂಡ ಗುರುನಾಥ ಕಳೂರ್ ಮಾಲಿಕತ್ವದ್ದಾಗಿದೆ. ಕಲ್ಲು ಕ್ವಾರಿಗೆ ಬಳಸುವ 16 ಕ್ವಿಂಟಾಲ ತೂಕದ ಜಿಲಿಟಿನ ಸ್ಫೋಟ ಪತ್ತೆ ಆಗಿದೆ.
ಬೀದರ ನಗರದ ಹೊರವಲಯದಲ್ಲಿ ಸುಲ್ತಾನ್ ಪುರ ಗ್ರಾಮದ ಗಡಿ ಪ್ರದೇಶ ಹೊಂದಿದ ಗ್ರಾಮ. ಈ ಸುಲ್ತಾನ್ ಪುರ ಬಳಿ ಯಾವುದೆ ಸುರಕ್ಷತೆ ಇಲ್ಲದೆ ಜಲ್ಲಿ ಕಲ್ಲು ಸಾಗಿಸುವ ಟಿಪ್ಪರ ಒಂದರಲ್ಲಿ ಸುಮಾರು detenetor ೫೦೦(Ned)no’s. coredex 2500 167ಕ್ವಿಂಟಾಲ ತೂಕದ ೨೫, ಕೆ ಜಿ ಉಳ್ಳವ ಜಿಲಿಟಿನ್ ೬೭ ಗಾಡಿಯಲ್ಲಿ ಸಾಗಿಸುತ್ತಿರುವಾಗ ಬೀದರನ ಪೋಲಿಸ್ ಅಧಿಕಾರಿಗಳು ಪತ್ತೆ ಮಾಡಿ ಟಿಪರ್ ವಶ ಪಡಿಸಿಕೊಂಡು ಜಿ ಕೆ construction ನ ಮ್ಯಾನೇಜರ್ ಹಾಗೂ ಟಿಪ್ಪರನ ಮಾಲಿಕ ಹಾಗೂ ಚಾಲಕ ಸೇರಿದಂತೆ ಮೂರು ವ್ಯಕ್ತಿಗಳನ್ನು ವಶಪಡಿಸಿ ಕೊಂಡು ಜಿ ಕೆ construction ಮಾಲೀಕರಾದ ಗುರುನಾಥ ಕೋಳೂರು ಅವರ ಮೇಲೆ ದೂರನ್ನು ದಾಖಲಿಸಿ ಕೊಂಡಿದ್ದಾರೆ.
ಪೋಲಿಸರು ಈ ಪ್ರಕರಣದಲ್ಲಿ ಭಾರತಿಯ ಜನತಾಪಕ್ಷದ ಮುಖಂಡರಾದ ಗುರುನಾಥ ಕೋಳೂರ ಇದ್ದಾರೆ ಅನ್ನುವ ಒಂದೆ ಉದ್ದೇಶದಿಂದ ಜಿಲ್ಲಾ ಪೋಲಿಸ ವರಿಷ್ಠ ರಾದ D L ನಾಗೇಶ ಅವರ ಹೇಳಿಕೆ ನೋಡಿದರೆ ಈ ತನಿಖೆ ಯಾವ ರೀತಿ ನಡೆಯಬಹುದು ಎಂಬುದನ್ನು ಊಹಿಸಲು ಸಾಧ್ಯವಿದೆ ಎಂಬ ಪ್ರಶ್ನೆ ಏಳುತ್ತದೆ. ಮಾಧ್ಯಮ ರವರೊಂದಿಗೆ ಮಾತಾಡುವಾಗ, ಭಾರಿ ಪ್ರಮಾಣದ ಸ್ಫೋಟಕವನ್ನು ಯಾವುದೆ ಸುರಕ್ಷಿತವಾದ ಸಾಗಣೆ ಇಲ್ಲದೆ ಕೇವಲ ಜಲ್ಲಿ ಸಾಗಿಸುವ ಟಿಪರ್ ನಲ್ಲಿ ಸಾಗಿಸುತಿರುವದನ್ನು ಖಂಡಿಸದ ಇವರು ಸ್ಪೋಟಕ ವಸ್ತುಗಳ ಸಾಗಾಣಿಕೆ ಮತ್ತು ಸಂಗ್ರಹಣೆಗೆ ಸರ್ಕಾರದಿಂದ ಪರವಾನಿಗೆ ಇದೆಯೆ ಅಥವಾ ಇಲ್ಲ ಎಂಬುದನ್ನು ತಿಳಿದ ಮೇಲೆ ಅವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಹೇಳಿಕೆ ನೀಡಿದ್ದಾರೆ.
ಒಬ್ಬ ಅಧಿಕಾರಿ ಈ ತರ ಹೇಳಿಕೆ ನೋಡಿದರೆ ಈ ದೇಶದಲ್ಲಿ ಕಾನೂನು ಇರುವದು ಕೇವಲ ಬಡವರಿಗೆ ಮಾತ್ರ .. ಯಾರು ಏನೇ ತಪ್ಪುಮಾಡಿದರು ಶಿಕ್ಷೆ ಅನ್ನುವದು ಕೂಲಿಗಾಗಿ ಕೆಲಸ ಮಾಡುತಿರುವ ಕಾರ್ಮಿಕರಿಗೆ ಮಾತ್ರ ಎನ್ನುವಂತಾಗಿದೆ ಏಕೆಂದರೆ ಈ ಪ್ರಕರಣದಲ್ಲಿ ಒಟ್ಟಿನಲ್ಲಿ ಹೇಳುವದಾದರೆ ಪೋಲಿಸರು ಮೊದಲು ವಶಪಡಿಸಿಕೊಂಡಿರುವದು ಕೆಲಸ ಮಾಡುತ್ತಿರುವ ಕಂಪನಿಯ ಮ್ಯಾನೇಜರ್ ಸಾಲ ಸೋಲ ಮಾಡಿ ಟಿಪ್ಪರ ತಂದು ಕಂಪನಿಗೆ ಬಾಡಿಗೆ ನೀಡಿದ ಟಿಪ್ಪರ ಮಾಲಿಕ ಮತ್ತು ತನ್ನ ಜೀವವನ್ನೇ ಪಣಕ್ಕಿಟ್ಟು ಕೇವಲ ಕೂಲಿಗೋಸ್ಕರ ಭಾರೀ ಪ್ರಮಾಣದ ಸ್ಪೋಟಕ ವಸ್ತುಗಳನ್ನು ಯಾವುದೆ ಸುರಕ್ಷತೆ ಇಲ್ಲದೆ ಸಾಗಾಣಿಕೆ ಮಾಡುತ್ತಿರುವ ಟಿಪ್ಪರ್ ಚಾಲಕ ಎಂಬುದನ್ನು ಮರೆಯುವಹಾಗಿಲ್ಲ. ಪೋಲಿಸ್ ಅಧಿಕಾರಿಗಳು ತಾವು ವಶಪಡಿಸಿಕೊಂಡ ವ್ಯಕ್ತಿಗಳಿಗೆ ಯಾವುದೆ ತೊಂದರೆ ನೀಡದೆ ಈ ಪ್ರಕರಣದ ಪ್ರಮುಖ ರೂವಾರಿ ಹಾಗೂ ಆರೋಪಿಗಳಾದ ಭಾರತೀಯ ಜನತಾ ಪಕ್ಷದ ಮುಖಂಡರಾದ ಗುರನಾಥ ಕೋಳುರ ಅವರ ವಿರುದ್ಧ ಕ್ರಮಕ್ಕೆ ಮುಂದಾಗುವರೋ ಕಾದು ನೋಡಬೇಕು. ಇಲ್ಲದಿದ್ದರೆ ಲಾಭ ಏನೇ ಆದರು ಮಾಲಿಕರಿಗೆ, ಶಿಕ್ಷೆ ಏನೆ ಇದ್ರು ನೌಕರನಿಗೆ ಮಾತ್ರ ಎಂಬತಾಗುವುದೋ ಕಾದು ನೋಡಬೇಕು.
ನಂದಕುಮಾರ ಕರಂಜೆ
ಬೀದರ