ಡಾ|| ದೊಡ್ಡರಂಗೇಗೌಡ: ಕನ್ನಡ ಪ್ರಗಾಥಗಳ ಸಾಮ್ರಾಟ್ ಎಂದು ಪ್ರಸಿದ್ಧರಾದ ಕನ್ನಡದ ಕವಿ, ಸಾಹಿತಿ ಮತ್ತು ಕನ್ನಡ ಚಲನಚಿತ್ರ ಸಾಹಿತಿಗಳಲ್ಲೊಬ್ಬರು. ಇವರು ತುಮಕೂರು ಜಿಲ್ಲೆಯ ಕುರುಬರಹಳ್ಳಿಯಲ್ಲಿ 0೭ ಫೆಬ್ರುವರಿ ೧೯೪೬ರಲ್ಲಿ ಜನಿಸಿದರು.ತಂದೆ ಶ್ರೀ ಕೆ. ರಂಗೇಗೌಡರು,ತಾಯಿ ಶ್ರೀಮತಿ ಅಕ್ಕಮ್ಮ. ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದರು. ಇವರು “ಕನ್ನಡ ನವೋದಯ ಕಾವ್ಯ- ಒಂದು ಪುನರ್ ಮೌಲ್ಯಮಾಪನ” ಎಂಬ ವಿಷಯದ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಪಿಹೆಚ್‍ಡಿ(ಡಾಕ್ಟರೇಟ್) ಪದವಿ ದೊರಕಿತು.
೧೯೭೨ರಿಂದ ೨೦೦೪ರವರೆಗೂ ಬೆಂಗಳೂರಿನ ಕೃಷ್ಣರಾಜೇಂದ್ರ ಮಾರುಕಟ್ಟೆ ಬಳಿ ಇರುವ ಎಸ್.ಎಲ್.ಎನ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಅಧ್ಯಾಪಕರಾಗಿ, ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ.೧೯೮೨ರಲ್ಲಿ ಗೌಡರು ಆಲೆಮನೆ ಚಿತ್ರಕ್ಕಾಗಿ ಬರೆದ ಭಾವೈಕ್ಯ ಗೀತೆಗೆ ಸರ್ಕಾದಿಂದ ವಿಶೇಷ ಗೀತೆ ಪ್ರಶಸ್ತಿ ಹಾಗೂ ಬೆಳ್ಳಿ ಪದಕದೊಂದಿಗೆ ಸನ್ಮಾನ ದೊರೆಯಿತು. ವಿಶೇಷ ಗೀತೆ ಪ್ರಶಸ್ತಿ ಪಡೆದ ಮೊದಲ ಸಾಹಿತಿ ಇವರು. ಇವರು ಮನುಜ ಎಂಬ ಕಾವ್ಯ ನಾಮದಿಂದ ಬರೆಯುತ್ತಿದ್ದಾರೆ. “ನಮನ”
ಪ್ರಗಾಥ ಕೃತಿಗಳು:
- ಪ್ರೀತಿ ಪ್ರಗಾಥ.
- ಹಳ್ಳಿ ಹುಡುಗಿ ಹಾಡು-ಪಾಡು.
ಕವನ ಸಂಕಲನಗಳು:
- ಕಣ್ಣು ನಾಲಿಗೆ ಕಡಲು ಕಾವ್ಯ.
- ಜಗುಲಿ ಹತ್ತಿ ಇಳಿದು.
- ನಾಡಾಡಿ.
- ಮೌನ ಸ್ಪಂದನ.
- ಕುದಿಯುವ ಕುಲುಮೆ.
- ಚದುರಂಗಗ ಕುದುರೆಗಳು
- ಯುಗವಾಣಿ.
- ಬದುಕು ತೋರಿದ ಬೆಳಕು.
ಗದ್ಯ ಕೃತಿಗಳು:
- ವರ್ತಮಾನದ ವ್ಯಂಗ್ಯದಲ್ಲಿ
- ವಿಚಾರ ವಾಹಿನಿ
- ಪ್ರವಾಸ ಸಾಹಿತ್ಯ ಸಂಪಾದಿಸಿ
- ಅನನ್ಯನಾಡು ಅಮೇರಿಕ
- ಪಿರಮಿಡ್ಡುಗಳು ಪರಿಸರದಲ್ಲಿ
ಚಲನಚಿತ್ರಗಳು:
- ದೊಡ್ಡರಂಗೇಗೌಡ
- ರಂಗನಾಯಕಿ
- ಪರಸಂಗದ ಗೆಂಡೆತಿಮ್ಮ
- ಆಲೆಮನೆ
- ಅನುಪಮ
- ಅರುಣರಾಗ
- ತಾವರೆ ಅರಳಿತು
- ಏಳು ಸುತ್ತಿನ ಕೋಟೆ
- ಅಶ್ವಮೇಧ
- ಹೃದಯಗೀತೆ
- ಭೂಲೋಕದಲ್ಲಿ ಯಮರಾಜ
- ಜನುಮದ ಜೋಡಿ
- ಕುರುಬನ ರಾಣಿ
- ರಮ್ಯ ಚೈತ್ರಕಾಲ
- ತಂದೆಗೆ ತಕ್ಕ ಮಗ
- ಪಡುವಾರಳ್ಳಿ ಪಾಂಡವರು
- ಸಾಧನೆ ಶಿಖರ
ಭಾವಗೀತೆ ಆಲ್ಬಂಗಳು:
- ಮಾವು-ಬೇವು
- ಪ್ರಾಯ ಮೂಡಿತು
ಮಾಹಿತಿ ಕೃಪೆ: ವಿಕಿಪೀಡಿಯ
ಸಂಗ್ರಹ: ಶ್ರೀ ಇಂಗಳಗಿ ದಾವಲಮಲೀಕ