Homeಸುದ್ದಿಗಳುಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ ೧೦೩ನೇ ಅನ್ನದಾಸೋಹ

ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ ೧೦೩ನೇ ಅನ್ನದಾಸೋಹ

ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಒಳ ಮತ್ತು ಹೊರ ರೋಗಿಗಳಿಗೆ ಶಿವಯ್ಯ ದುಂಡಯ್ಯ ಹಿರೇಮಠ ಅವರ ಸ್ಮರಣೆಯಲ್ಲಿ ೧೦೩ನೇ ಅನ್ನದಾಸೋಹವನ್ನು ಏರ್ಪಡಿಸಲಾಗಿತ್ತು

ಬಸವೇಶ್ವರ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸೈಟಿ ನಿರ್ದೇಶಕ ಶ್ರೀಕಾಂತ ಹಿರೇಮಠ ಅವರು ಅನ್ನದಾಸೋಹಕ್ಕೆ ಚಾಲನೆ ನೀಡಿ ಮಾತನಾಡಿ, ‘ಹಸಿದವರಿಗೆ ಅನ್ನ ನೀಡುವುದು ಪುಣ್ಯದ ಕಾರ್ಯವಾಗಿದೆ. ಲಯನ್ಸ್ ಕ್ಲಬ್‌ವು ರೋಗಿಗಳಿಗೆ ಅನ್ನದಾಸೋಹ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ’ ಎಂದರು.

ಅನ್ನದಾಸೋಹಿ ಈಶ್ವರಯ್ಯ ಶ್ರೀಶೈಲಯ್ಯ ನಂದಗಾಂವಮಠ ಅವರು ತಮ್ಮ ಅಜ್ಜನವರಾದ ದಿ. ಶಿವಯ್ಯ ದುಂಡಯ್ಯ ಹಿರೇಮಠ ಅವರ ಸ್ಮರಣೆಯಲ್ಲಿ ದಾಸೋಹ ಸೇವೆ ಮಾಡಿರುವರು.

ಅತಿಥಿಯಾಗಿ ಸಮುದಾಯ ಆರೋಗ್ಯ ಕೇಂದ್ರ ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ, ಸುಜಾತಾ ಶ್ರೀಕಾಂತ ಹಿರೇಮಠ, ಲಯನ್ಸ್ ಅಧ್ಯಕ್ಷ ವಿಶಾಲ ಶೀಲವಂತ, ವೆಂಕಟೇಶ ಸೋನವಾಲಕರ, ಈರಣ್ಣ ಕೊಣ್ಣೂರ, ಡಾ. ಪ್ರಕಾಶ ನಿಡಗುಂದಿ, ಶಿವಾನಂದ ಕಿತ್ತೂರ, ಸುರೇಶ ನಾವಿ, ಕೃಷ್ಣಾ ಕೆಂಪಸತ್ತಿ, ಶಿವಾನಂದ ಗಾಡವಿ, ಪ್ರಮೋದ ಪಾಟೀಲ, ಸಂಜಯ ಮೋಕಾಶಿ ಇದ್ದರು.

ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು. ಲಯನ್ಸ್ ಕಾರ್ಯದರ್ಶಿ ಗಿರೀಶ ಅಸಂಗಿ ನಿರೂಪಿಸಿದರು.

 

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group