ಮುಧೋಳ – ಮುಧೋಳ ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಸೆಪ್ಟೆಂಬರ್ ದಿ.14 ರವಿವಾರ ದಿನ 114 ನೇ ಸತ್ಸಂಗ. ಕಾರ್ಯಕ್ರಮವು ಜರುಗಲಿದೆ ಎಂದು ಆಶ್ರಮದ ಕುಮಾರ ಗುರುಪ್ರಸಾದ್ ಸ್ವಾಮೀಜಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಿನ ಸಮಯದಲ್ಲಿ ಗುರು ಭಜನೆ. ಓಂಕಾರ, ಶ್ರೀ ಸಿದ್ಧಾರೂಢರ ಪಾರಾಯಣ, ಶ್ರೀಸಿದ್ದಾರೂಢರ ಪಂಚಾಮೃತ ಅಭಿಷೇಕ, ಸಹಸ್ರ ಬಿಲ್ವಾರ್ಚನೆ.ಜರುಗುವುದು ಎಂದ ಅವರು ಪರಮಪೂಜ್ಯರಾದ ಶರಣ ಬಸವ ಶಾಸ್ತ್ರಿಗಳಿಂದ ಪ್ರವಚನ ಜರುಗುವುದು ಎಂದು ಗುರುಪ್ರಸಾದ ಸ್ವಾಮೀಜಿ ಅವರು ತಿಳಿಸಿದ್ದಾರೆ .

