spot_img
spot_img

ವೇದಾಂತ ಫೌಂಡೇಶನ್ ವತಿಯಿಂದ 1700 ಪುಸ್ತಕ ಗಳ ವಿತರಣೆ

Must Read

- Advertisement -

ಬೆಳಗಾವಿ :ಪುಸ್ತಕ ವಾಚನದಿಂದ ವ್ಯಕ್ತಿಯ ವ್ಯಕ್ತಿತ್ವದಲ್ಲಿ ಸುಧಾರಣೆಯಾಗುವುದು. ಅದಕ್ಕಾಗಿ ಸದಾ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಶಾಲೆಯಲ್ಲಿ ಮಕ್ಕಳಿಗೆ ವಿವಿಧ ಪುಸ್ತಕಗಳನ್ನು ಓದಲು ಶಿಕ್ಷಕರು ಪ್ರೋತ್ಸಾಹಿಸಬೇಕು. ಅಂತೆಯೇ ಗ್ರಾಮೀಣ ಪ್ರದೇಶದಲ್ಲಿ ಗ್ರಂಥಾಲಯಗಳು ಓದಲು ಪ್ರೋತ್ಸಾಹ ನೀಡುವುದು ಅವಶ್ಯಕ ಎಂದು ಮರಾಠಿ ಹಿ . ಪ್ರಾ.ಶಾಲೆ ನಂ. 9, ತಿಲಕವಾಡಿ ಶಾಲೆಯ ಮುಖ್ಯ ಅಧ್ಯಾಪಕರಾದ ಸತೀಶ್ ಪಾಟೀಲ ಇವರು ಅಭಿಪ್ರಾಯಪಟ್ಟರು.

ವೇದಾಂತ ಫೌಂಡೇಶನ್ ವತಿಯಿಂದ ಕವಳೆವಾಡಿಯ ಮಹಾತ್ಮಾ ಗಾಂಧಿ ವಾಚನಾಲಯ ಮತ್ತು ನಗರದ ಮರಾಠಿ ಮತ್ತು ಕನ್ನಡ ಮಾಧ್ಯಮದ 5 ಶಾಲೆಗಳಿಗೆ ಸುಮಾರು 1700 ಪುಸ್ತಕಗಳನ್ನು ನೀಡಲಾಯಿತು. ತಿಲಕವಾಡಿಯ ಮರಾಠಿ ಶಾಲೆ. ನಂ. 9 ರಲ್ಲಿ ಬುಧವಾರ ದಿ. 3 ರಂದು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಆಸೀಫ್ ಅತ್ತಾರ್, ಕವಳೇವಾಡಿಯ ವಾಚನಾಲಯದ ಸತೀಶ್ ಜಾಧವ, ಸರಕಾರಿ ಗ್ರಂಥಾಲಯ ವಿಭಾಗದ ತಿಲಕವಾಡಿ ಶಾಖೆಯ ಗ್ರಂಥಪಾಲಕರಾದ ರಾಜಶೇಖರ ಕಟ್ಟಿಮನಿಯವರು ಉಪಸ್ಥಿತರಿದ್ದರು.

- Advertisement -

ಮುಖ್ಯ ಅಧ್ಯಾಪಕರಾದ ಸತೀಶ್ ಪಾಟೀಲರವರು ಮಾತನಾಡುತ್ತಾ, ಕಳೆದ 6ವರ್ಷಗಳಿಂದ ಕವಳೇವಾಡಿಯ ಗ್ರಂಥಾಲಯವು ಕಾರ್ಯನಿರ್ವಹಿಸುತ್ತಿದ್ದು ಈ ಗ್ರಂಥಾಲಯದ ಮುಖಾಂತರ ಹಲವು ಕಾರ್ಯಕ್ರಮಗಳು ನಡೆಯುತ್ತವೆ. ಆದುದರಿಂದ ಈ ವಾಚನಾಲಯಕ್ಕೆ ಪುಸ್ತಕಗಳನ್ನು ನೀಡಲಾಗಿದೆ. ನಗರದ ಹಲವು ಶಾಲೆಗಳಲ್ಲಿ ಸ್ವಂತ ವಾಚನಾಲಯವಿದ್ದು ಶಹಾಪುರ ಮತ್ತು ತಿಲಕವಾಡಿಯ ಶಾಲೆಗಳನ್ನು ಆರಿಸಿದ್ದು ಪುಸ್ತಕಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಆಸೀಫ್ ಅತ್ತಾರ ಮಾತನಾಡಿ, ವೇದಾಂತ ಫೌಂಡೇಶನ್ ವತಿಯಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಇಂದಿನ ಪುಸ್ತಕ ವಿತರಣಾ ಕಾರ್ಯಕ್ರಮವೂ ಉತ್ತಮವಾಗಿದೆ. ನಗರದ ಹಲವು ಗ್ರಂಥಾಲಯಗಳಿಗೆ ಪುಸ್ತಕರೂಪದಲ್ಲಿ ಸಹಾಯ ಮಾಡಲಾಗಿದೆ. ಪ್ರತಿಯೊಬ್ಬರೂ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದರು.

ಸ. ಕ. ಹಿ. ಪ್ರಾ. ಶಾಲೆ. ನಂ. 5, ತಿಲಕವಾಡಿ, ಚಿಂತಾಮಣಿ ರಾವ್ ಹೈ ಸ್ಕೂಲ್, ಶಹಾಪುರ, ಕೆ. ಹೆಚ್. ಪಿ. ಎಸ್. ಕಚೇರಿಗಲ್ಲಿ, ಕೆ. ಎಚ್. ಪಿ. ಎಸ್. ಚೆನ್ನಮ್ಮನಗರ ಶಾಲೆಗಳಿಗೆ ಪುಸ್ತಕಗಳನ್ನು ದೇಣಿಗೆ ನೀಡಲಾಯಿತು. ಸುಮನಾ ದೇಶಪಾಂಡೆ, ಆರ್. ಎಸ್. ಜೋಶಿ, ಎನ್. ಎಂ. ಕುಲಕರ್ಣಿ, ಮಹಾದೇವ ಮಾನೆ, ಎ. ಎಂ. ಹುಳಗಬಾಳಿ, ವರ್ಷಾ ಲಂಗರಕಾಂಡೆ, ರಾಜಶ್ರೀ ವರಾಳೆ ಮುಂತಾದವರು ಉಪಸ್ಥಿತರಿದ್ದರು.

- Advertisement -
- Advertisement -

Latest News

ವಚನ ವಿಶ್ಲೇಷಣೆ : ಕಾಯದ ಜೀವದ ಹೊಲಿಗೆ

*ಕಾಯದ ಜೀವದ ಹೊಲಿಗೆ* ----------------------------------- ದೇಹಭಾವವಳಿದಲ್ಲದೆ ಜೀವಭಾವವಳಿಯದು. ಜೀವಭಾವವಳಿದಲ್ಲದೆ ಭಕ್ತಿಭಾವವಳವಡದು. ಭಕ್ತಿಭಾವವಳವಟ್ಟಲ್ಲದೆ ಅರಿವು ತಲೆದೋರದು. ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಇದು ಕಾರಣ; ಕಾಯದ ಜೀವದ ಹೊಲಿಗೆಯ ಅಳಿವ ಭೇದವ ತಿಳಿಯಬಲ್ಲಡೆ ಗುಹೇಶ್ವರಲಿಂಗದ...
- Advertisement -

More Articles Like This

- Advertisement -
close
error: Content is protected !!
Join WhatsApp Group