ಮೂಡಲಗಿ: ಹತ್ತು ಶಾಖೆಗಳನ್ನು ಹೊಂದಿರುವ ನಾಗನೂರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು ಕಳೆದ ಮಾರ್ಚ ಅಂತ್ಯಕ್ಕೆ 2.25 ಕೋಟಿ ರೂ ಲಾಭಗಳಿಸಿ ಪ್ರಗತಿ ಪಥದತ್ತ ನಡೆದಿದೆ, ಸಂಘದ ಸಿಬ್ಬಂದಿಗಳಿಗೆ ಶೇ.10ರಷ್ಟು ವೇತನವನ್ನು ಹೆಚ್ಚಿಸಲ್ಲಾಗುವುದು ಎಂದು ಸಂಘದ ಅಧ್ಯಕ್ಷ ಬಸವರಾಜ ಗೌಡಪ್ಪ ತಡಸನವರ ಹೇಳಿದರು.
ಅವರು ತಾಲೂಕಿನ ನಾಗನೂರ ಪಟ್ಟಣದ ನಾಗನೂರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 2023 ಆರ್ಥಿಕ ವರ್ಷ ಸಂಘವು ಉತ್ತಮ ಲಾಭ ಹೊಂದಿದ ಪ್ರಯುಕ್ತ ಸಂಘದ ಸಭಾ ಭವನದಲ್ಲಿ ಶನಿವಾರದಂದು ಜರುಗಿದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ವರ್ಷದಿಂದ ವರ್ಷಕ್ಕೆ ಪ್ರಗತಿ ಪÀಥದತ್ತ ದಾಪುಗಾಲು ಹಾಕುತ್ತಿರುವದಕ್ಕೆ ಸಂಘ ಪ್ರದಾನ ಕಚೇರಿ ಆಡಳಿತ ಮಂಡಳಿ ಮತ್ತು ಶಾಖೆಗಳ ಸಲಹಾ ಸಮಿತಿಗಳ ನಿಸ್ವಾರ್ಥ ಸೇವೆ ಮತ್ತು ಸಿಬ್ಬಂದಿಗಳ ಪರಿಶ್ರಮದಿಂದ ಹಾಗೂ ಗ್ರಾಹಕರು ಸರಿಯಾದ ಸಮಯಕ್ಕೆ ಸಾಲ ಮರು ಪಾವತಿ ಮಾಡಿದ್ದರಿಂದ ಕಾರಣವಾಗಿದೆ ಎಂದರು.
ಮುಖ್ಯ ಅತಿಥಿ ಜೆ.ಜಿ.ಕೋ-ಆಸ್ಪತ್ರೆಯ ಅಧ್ಯಕ್ಷ ಬಸನಗೌಡ ಪಾಟೀಲ ಮಾತನಾಡಿ, ಪ್ರತಿಯೊಂದು ಸಹಕಾರಿ ಸಂಘವು ಉತ್ತಮ ಪ್ರಗತಿಯಲ್ಲಿ ಸಾಗಲು ಕಾರ್ಯನಿರ್ವಾಹಕರ ಪಾತ್ರ ಬಹು ಮುಖ್ಯವಾಗಿದೆ ಎಂದರು.
ಮಾಜಿ ಸಚಿವ ಆರ್.ಎಮ್.ಪಾಟೀಲ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸಹಕಾರಿ ಸಂಘವು ರಾಷ್ಟ್ರೀಕೃತ ಬ್ಯಾಂಕ್‍ಗಳೊಂದಿಗೆ ಪೈಪೋಟಿ ನೀಡಿ ಪ್ರಗತಿ ಹೊಂದಿರುವುದು ಶ್ಲಾಘನಿವಾದದ್ದು ಎಂದರು.
ಸಂಘದ ಪ್ರಧಾನ ವ್ಯವಸ್ಥಾಪಕ ಮಹೇಶ ಕುಲಕರ್ಣಿ ಮಾತನಾಡಿ, ಸಂಘವು 2023ರ ಮಾರ್ಚ ಅಂತ್ಯಕ್ಕೆ 80.70 ಲಕ್ಷ ಶೇರು ಬಂಡವಾಳ, 7.96 ಕೋಟಿ ನಿಧಿಗಳು, 120.66 ಕೋಟಿ ರೂ ಸಾರ್ವಜನಿಕ ವಲಯದಿಂದ ಠೇವು ಸಂಗ್ರಹಿಸಿ, ವಿವಿಧ ತೆರನಾದ 89.80 ಕೋಟಿ ರೂ ಸಾಲ ವಿತರಿಸಿ, ಒಟ್ಟು 131.94 ಕೋಟಿ ರೂ ದುಡಿಯುವ ಬಂಡವಾಳದೊಂದಿಗೆ 2.25 ಕೋಟಿ ರೂ ಲಾಭ ಹೊಂದುವದರೊಂದಿಗೆ ಸಾಲ ವಸೂಲಾತಿಯಲ್ಲಿ ಶೇ.99.5 ರಷ್ಟು ಹೊಂದಿದೆ ಎಂದರು.
ಸಮಾರಂಭದಲ್ಲಿ ಬಾಳಗೌಡ ಪಾಟೀಲ, ಸಹಕಾರಿಯ ಉಪಾಧ್ಯಕ್ಷ ಶಿವಲಿಂಗಪ್ಪ ಗೋಟೂರ ಮತ್ತು ಪ್ರದಾನ ಕಚೇರಿಯ ನಿರ್ಧೆಶಕರಾದ ವೆಂಕಪ್ಪ ಪೂಜೇರಿ, ಕೆಂಪಣ್ಣ ನೀಡಸೋಸಿ, ಮಲ್ಲಪ್ಪ ಬಂಡಿ, ಶಿವಾನಂದ ದಡ್ಡಿ, ಅಲ್ಲಗೌಡ ಪದ್ದಿ, ಶೋಭಾ ಕೊಗನೋಳ್ಳಿ, ಸುಭಾಸ ಸಣ್ಣಕ್ಕಿ, ಬಾಳಪ್ಪ ಬಡಕುಂದ್ರಿ, ದುಂಡಪ್ಪ ಬೆಳಕೂಡ, ಗಂಗಪ್ಪ ಗೋಟುರ, ರುದ್ರಪ್ಪ ಬಾಗೋಜಿ, ವಿಜಯಲಕ್ಷ್ಮೀ ಕರೊಳಿ ಹಾಗೂ ತುಕ್ಕಾನಟ್ಟಿ, ಕುಲಗೋಡ, ಬೇಟಗೇರಿ, ಅರಭಾವಿಮಠ, ಮೂಡಲಗಿ, ಗೋಕಾಕ, ಹುಲಕುಂದ, ಯರಗಟ್ಟಿ, ಮುಗಳಕೋಡ, ಹಾರೂಗೇರಿಕ್ರಾಸ್ ಶಾಖೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸಮೀತಿ ಸದಸ್ಯರು ಮತ್ತು ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
ಉಪಪ್ರಧಾನ ವ್ಯವಸ್ಥಾಪಕ ಪ್ರಕಾಶ ಅಂಗಡಿ ನಿರೂಪಿಸಿ, ಮುಗಳಖೋಡ ಶಾಖಾ ವ್ಯವಸ್ಥಾಪಕ ಸಿದ್ದಾರೂಡ ಕೆಸರಗೊಪ್ಪ ವಂದಿಸಿದರು.