ಧಾರವಾಡ : ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಜ್ಞಾನ ಪೀಠದ ಶ್ರೀ ಜಗದ್ಗುರು ವಿಶ್ವಾರಾಧ್ಯ ಗುರುಕುಲದ ವಿದ್ಯಾರ್ಥಿ ಬಾರ್ಶಿ ದಹಿವಾಡಕರಮಠದ ಶ್ರೀಗುರುಸಿದ್ದ ಮಣಿಕಂಠ ಶಿವಾಚಾರ್ಯ ಸ್ವಾಮಿಗಳು ವಾರಾಣಸಿಯ ಸಂಪೂರ್ಣಾನ0ದ ಸಂಸ್ಕೃತ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ವಿಭಾಗದ ಶಕ್ತಿವಿಶಿಷ್ಟಾದ್ವೈತ ವೇದಾಂತ ಆಚಾರ್ಯ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ ಪಡೆದು 3 ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ಬುಧವಾರ ಜರುಗಿದ ಸಂಪೂರ್ಣಾನ0ದ ಸಂಸ್ಕೃತ ವಿಶ್ವವಿದ್ಯಾಲಯದ 43ನೆಯ ಘಟಿಕೋತ್ಸವದಲ್ಲಿ ಉತ್ತರಪ್ರದೇಶ ರಾಜ್ಯಪಾಲರಾದ ಆನಂದೀ ಬೆನ್ ಅವರು ಶ್ರೀಗಳಿಗೆ ಪ್ರಥಮ ರ‍್ಯಾಂಕ್ ಪ್ರಮಾಣ ಪತ್ರ ಹಾಗೂ 3 ಚಿನ್ನದ ಪದಕಗಳನ್ನು ಪ್ರದಾನ ಮಾಡಿದರು.
ಕೇಂದ್ರ ಸರಕಾರದ ಸಂಸ್ಕೃತಿ ಸಚಿವ ಗಜೇಂದ್ರಸಿ0ಗ್ ಶೇಖಾವತ್, ರ‍್ಯಾಂಕ್ ವಿಜೇತ ಶ್ರೀಗಳ ಪೂರ್ವಾಶ್ರಮದ ಮಾತೋಶ್ರೀ ಸರಸ್ವತಿ ಇದ್ದರು. ಈ ಹಿಂದೆ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹಾಗೂ ಶ್ರೀಶೈಲ ಪೀಠದ ಜಗದ್ಗುರು ಡಾ.ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಪ್ರಥಮ ರ‍್ಯಾಂಕ್ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.
ಮೂರು ಚಿನ್ನದ ಪದಕಗಳೊಂದಿಗೆ ಮೊದಲ ರ‍್ಯಾಂಕ್ ಸಂಪಾದಿಸಿ ಕಾಶಿ ಪೀಠದ ಶ್ರೀ ಜಗದ್ಗುರು ವಿಶ್ವಾರಾಧ್ಯ ಗುರುಕುಲಕ್ಕೆ ವ್ಯಾಪಕ ಗೌರವವನ್ನು ತಂದಿರುವ ಶ್ರೀ ಗುರುಸಿದ್ದ ಮಣಿಕಂಠ ಶಿವಾಚಾರ್ಯ ಸ್ವಾಮಿಗಳನ್ನು ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಬುಧವಾರ ಸಂಜೆ ನಡೆದ ವಿಶೇಷ ಸಮಾರಂಭದಲ್ಲಿ ಗೌರವಿಸಿ ಆಶೀರ್ವದಿಸಿದರು.
ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಭಾಗಗಳ ವಿವಿಧ ಜಿಲ್ಲೆಗಳಲ್ಲಿ ರ‍್ಯಾಂಕ್ ವಿಜೇತರಾದ ಶ್ರೀಗುರುಸಿದ್ದ ಮಣಿಕಂಠ ಶಿವಾಚಾರ್ಯ ಸ್ವಾಮೀಜಿ ಶಿಷ್ಯಸದ್ಭಕ್ತರಿದ್ದಾರೆ.
ವರದಿ : ಗುರುಮೂರ್ತಿ ಯರಗಂಬಳಿಮಠ (ಕನ್ನಡ ಪತ್ರಿಕೋದ್ಯಮದ ಹಿರಿಯ ನಿಯತಕಾಲಿಕೆ ಧಾರವಾಡದ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ವಿಶ್ರಾಂತ ಸಂಪಾದಕ), ಅಮ್ಮಿನಬಾವಿ ೫೮೧೨೦೧ ಮೊ : ೯೯೪೫೮೦೧೪೨೨

