೨೦೧೯ ರ ಪ್ರವಾಹ ಸಂತ್ರಸ್ತರಿಗೆ ಇನ್ನೂ ಸಿಗದ ಪರಿಹಾರ ; ಸಾಮೂಹಿಕ ಆತ್ಮಹತ್ಯೆಗೆ ಸಂತ್ರಸ್ತರ ನಿರ್ಧಾರ

Must Read

ಮೂಡಲಗಿ – ಗೋಕಾಕ ಹಾಗೂ ಮೂಡಲಗಿ ತಹಶಿಲ್ದಾರರು ೨೦೧೯ ರಲ್ಲಿ ಉಂಟಾದ ಭಾರೀ ಪ್ರವಾಹದಲ್ಲಿ ಬಿದ್ದ ಮನೆಗಳಿಗೆ ಪರಿಹಾರ ಕೊಡದೆ ೫೦-೭೦ ಸಾವಿರ ರೂ. ಹಣ ಕೊಟ್ಟ, ಮನೆ ಬೀಳದೆ ಇರುವವರಿಗೆ ಹಣ ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಹಲವು ಬಾರಿ ಸರ್ಕಾರಕ್ಕೆ ಪತ್ರ ಬರೆದಿದ್ದರೂ ಸರ್ಕಾರ ಗಮನ ಕೊಡುತ್ತಿಲ್ಲ ಹೀಗಾಗಿ ಮನೆ ಕಳೆದುಕೊಂಡ ಸಂತ್ರಸ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಹೇಳಿದ್ದಾರೆ.

ಪತ್ರಿಕಾ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿರುವ ಅವರು, ಪ್ರವಾಹದಲ್ಲಿ ಮನೆ ಬಿದ್ದಿರುವುದನ್ನು ಜಿಲ್ಲಾಧಿಕಾರಿಗಳು, ತಹಶೀಲ್ದಾರರು ಖುದ್ದು ಪರಿಶೀಲಿಸಬೇಕು.ಅದು ನಿಜವಾಗಿದ್ದರೆ ಮಾತ್ರ ಪರಿಹಾರ ನೀಡಿರಿ. ಮನೆ ಕಳೆದುಕೊಂಡ ಸಂತ್ರಸ್ತರು ತಲೆಯ ಮೇಲೆ ಸೂರು ಇಲ್ಲದೆ ಎಲ್ಲಿಗೆ ಹೋಗಬೇಕು ಆದ್ದರಿಂದ ಸಂತ್ರಸ್ತರು ಸಾಮೂಹಿಕ ಆತ್ಮಹತ್ಯೆಗೆ ನಿರ್ಧರಿಸಿದ್ದು, ತಮ್ಮ ಆತ್ಮಹತ್ಯೆ ಗೆ ಮುಖ್ಯಮಂತ್ರಿ, ಕಂದಾಯ ಸಚಿವ ಆರ್. ಆಶೋಕ, ಜಿಲ್ಲಾಧಿಕಾರಿಗಳು ಹಾಗೂ ಗೋಕಾಕ,ಮೂಡಲಗಿ ತಹಶಿಲ್ದಾರರೇ ಕಾರಣ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಘೋಷಣೆ ಮಾಡಿದ್ದಾರೆ ಎಂದರು.

ಮನೆಗಳು ಬಿದ್ದಿದ್ದರೂ ಬಿದ್ದಿಲ್ಲ ಎಂದು ಈ ಅಧಿಕಾರಿಗಳು ವರದಿ ನೀಡಿ ಜನತೆಗೆ ವಂಚನೆ ಮಾಡಿದ್ದಾರೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಸಂತ್ರಸ್ತರು ಅತಂತ್ರರಾಗಿದ್ದಾರೆ. ಅಧಿಕಾರಿಗಳು ೫೦ ರಿಂದ ೭೦ ಸಾವಿರ ಲಂಚ ಕೊಟ್ಟವರಿಗೆ ಮನೆ ಕೊಟ್ಟಿದ್ದಾರೆ ಆದರೆ ನಿಜವಾಗಲೂ ಮನೆ ಕಳಕೊಂಡವರಿಗೆ ಕೊಡುತ್ತಿಲ್ಲ. ಕಾರಣ, ‘ ಮನೆ ಕೊಡಿ, ಇಲ್ಲಾ ವಿಷ ಕೊಡಿ ‘ ಎಂಬ ಅಭಿಯಾನದಲ್ಲಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಲು ಸಜ್ಜಾಗಿದ್ದಾರೆ ಎಂದು ಹೇಳಿದ ಗಡಾದ ಅವರು, ಭಾರತದ ಇತಿಹಾಸದ ಪುಟಗಳಲ್ಲಿ ದಾಖಲಾಗುವಂತಿರುವ ಈ ಸಾಮೂಹಿಕ ಆತ್ಮಹತ್ಯೆ ಪ್ರಕರಣವನ್ನು ಸರ್ಕಾರ ತಡೆಯಬೇಕು. ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group