ಆ ಮಹಡಿ,ಮೆಟ್ಟಿಲು,ಎತ್ತರದ ಸೂರು,
ಹೊಳೆವ ಗಾಜು ಒರೆಸಿ ಬಣ್ಣ ಮೆತ್ತಿದ ಕೈ...
ನಲ್ಲಿಗೆ ನೆಲ ಅಗೆದು ಕಟ್ಟಿದ ಮೋರಿಯ ಕೆಸರು ಎತ್ತಿ ಪಾಯ್ ಖಾನೆಯನ್ನೂ ಸ್ವಚ್ಚಗೊಳಿಸಿದರು
ಮತ್ತದೇ ಹಸನಾಗದ ಬದುಕು
ಇಟ್ಟಿಗೆ,ಜಲ್ಲಿ,ಕಬ್ಬಿಣ,ಕಲ್ಲು ಹೊತ್ತ ತಲೆ
ಅದೇ ಮಾಸಿದ ಬಟ್ಟೆ,
ಉಳ್ಳವರಿಗೆ ರೇಜಿಗೆ ಹುಟ್ಟಿಸಿದ ಬೆವರ ಘಮ.
ಛೇ ಕಂದೀಲು,ಕ್ಯಾಂಡಲ್ಲು,ದೀಪ ಹಚ್ಚಿದರೂ ಬದಲಾಗದ ಬದುಕು.
ಗಂಟೆ,ಜಾಗಟೆ,ಹೋಮ ಹವನ
ಯಾವುದೂ ಇಲ್ಲದಿದ್ದರೂ
ಸೈರನ್ನಿನ ಕೂಗಿಗೆ ಮೈ ಬಗ್ಗಿಸಿ ದುಡಿವ ದೇಹ.
ಬೇಲ್ ಪೂರಿ,ಪಾನಿಪೂರಿ,ಹಣ್ಣು-ತರಕಾರಿ...
ಕೊರೋನಾ ಮಹಾಮಾರಿಯ ಈ ಬಿಕ್ಕಟ್ಟಿನ ಸಮಯದಲ್ಲಿ ತಮ್ಮ ಜೀವ - ಜೀವನ ಪಣಕ್ಕಿಟ್ಟು ರೋಗಿಗಳ ಸೇವೆಗೆ ನಿಂತಿರುವ ದಾದಿಯರ ಸೇವೆಗೆ ನಮ್ಮ " Times of ಕರ್ನಾಟಕ " ಬಳಗದ ವತಿಯಿಂದ ಒಂದು ಸೆಲ್ಯೂಟ್.
ಇಂದು ಮೇ - 11 ರಾಷ್ಟ್ರೀಯ ತಂತ್ರಜ್ಞಾನ ದಿನ
ಭಾರತದ ತಾಂತ್ರಿಕ ಸಾಧನೆಗಳ ಜ್ಞಾಪಕವಾಗಿ ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಪ್ರತಿವರ್ಷ ಮೇ 11 ರಂದು ಆಚರಿಸಲಾಗುತ್ತದೆ.
1998 ಮೇ 11 ಭಾರತದ ಪಾಲಿಗೆ ಅತ್ಯಂತ ಮಹತ್ವದ ದಿನ. ಅಂದು ಭಾರತದ ವಾಜಪೇಯಿ ಸರ್ಕಾರವು ರಾಜಸ್ಥಾನದ ಪೋಖ್ರಾನ್ ನಲ್ಲಿ ಸರಣಿ ಅಣುಬಾಂಬ್ ಪರೀಕ್ಷೆ ಯನ್ನು ಯಶಸ್ವಿಯಾಗಿ ನಡೆಸಿತು. ಅದೇ...
★ ಕಮಲಿ ★
ಮಲ್ಲಿಗೆಪುರ ಒಂದು ಪುಟ್ಟ ಹಳ್ಳಿ. ಅಲ್ಲಿಯ ಮಕ್ಕಳು ಪ್ರತಿದಿನ ಗ್ರಾಮದೇವಿಗೆ ನಮಸ್ಕರಿಸಿ ಶಾಲೆಗೆ ಹೋಗುವುದು ವಾಡಿಕೆ.
ಅದರಂತೆ ಕಮಲಿ ಕೂಡ ದೇವಸ್ಥಾನಕ್ಕೆ ಬಂದಾಗ ಪೂಜಾರಪ್ಪ ಅವಳನ್ನು ಒಳಗೆ ಬಿಡದೆ ಅವಮಾನ ಮಾಡಿದ್ದ.
"ನೀನು ಗುಡಿ ಮೆಟ್ಟಿಲು ಕೂಡ ಮುಟ್ಟಬ್ಯಾಡ ನಡಿ ಇಲ್ಲಿಂದ" ಎಂದು ಗದರಿಸಿ ಕಳಿಸಿದ್ದ.
ಈ ಅವಮಾನದಿಂದ ಅವಳ ಸ್ವಾಭಿಮಾನ ಕೆರಳಿತ್ತು.
ಕಾಲವು ಯಾರಿಗಾಗಿಯೂ ಕಾಯುವುದಿಲ್ಲ....
ಕ್ಷಮಯಾಧರಿತ್ರಿ..
ಅಮ್ಮಾ, ನೀ ಸುಖ-ದುಃಖಗಳ ಗಣಿ,
ಬಾಲ್ಯದಲ್ಲೇ ತಾಯಿಯಿಲ್ಲದ ತಬ್ಬಲಿಯಾಗಿ,
ತುಂಬಿದ ಅವಿಭಕ್ತ ಕುಟುಂಬವ
ಸಂತೈಸುವುದರಲ್ಲೇ ಅರ್ಧ ಜೀವನ ಕಳೆದ,
ಗೃಹಿಣಿಯಾಗಿ ಅರ್ಧದಶಕ ಕಳೆದರೂ ಮಕ್ಕಳಾಗಲಿಲ್ಲವೆಂಬ
ಜನರ ಮಾತ,ಮನದ ಕೊರಗ ಹೇಗೆ ಸಹಿಸಿದೆಯಮ್ಮಾ ?
ಅರ್ಧದಶಕದ ನಂತರ ನಾ ಜನಿಸಿದಾಗ
ಗಂಡಾದರೇನು ಕಾಲು ಸರಿಯಿಲ್ಲ,
ಎಂಬ ಚುಚ್ಚುಮಾತ ಹೇಗೆ ಸಹಿಸಿದೆಯಮ್ಮಾ?
ಮಗುವಾದ ಸಂತಸ ಒಂದೆಡೆ,
ವಿಕಲಾಂಗನೆಂಬ ದುಃಖ ಮತ್ತೊಂದೆಡೆ
ಹೇಗೆ ಎದುರಿಸಿದೆಯಮ್ಮಾ ಆ ದಿನಗಳ....
ಮನೆಗೆಲಸದಲ್ಲಿ ನೀನೊಬ್ಬ ಸಿಪಾಯಿ
"ಹಾಸಿಗೆ ಇದ್ದಷ್ಟು ಕಾಲು ಚಾಚು"...
ನೀನೊಂದು ಸಂಪಿಗೆಮರ
ನಿನ್ನ ಹಿತವಚನದ ಕಂಪಿನಲ್ಲಿ
ಜೀವನಾರ್ಥ ತುಂಬಿದೆ.
ನನ್ನ ಹೃದಯದ ಚಿನ್ನದ ಕಿರೀಟ
ತ್ಯಾಗಕ್ಕೆ ಪರ್ಯಾಯ ಪದವಾದೆ ನೀ
ಜೀವ-ಜೀವದ ಚೇತನ....
ನೀನೊಂದು ಅಮೃತಕಲಶ
ಹೆಕ್ಕಿದಷ್ಟು ಜೇನಸಿಹಿ
ನಿನ್ನ ಸಮ ದೇವರಿಲ್ಲ
ನೀನಿಲ್ಲದ ಅವನೂ ಅನಾಥನೇ...
ಬುದ್ಧನಾಗಿರುವೆ ನಾ
ನಿನ್ನ ಮಮತೆಯ ವೃಕ್ಷದಡಿಯಲಿ
ಸರಿರಾತ್ರಿಯಲ್ಲೂ ನಿನ್ನ ಮಡಿಲ
ಸುಖವನರಸಿ ಬರುವ ಕೂಸು ನಾ...
ನಿನ್ನ ಮಾತು-ಮುತ್ತುಗಳೆಲ್ಲ
ಸುಂದರ ಹೂ ದಳಗಳಂತೆ
ತಾವರೆಯ ಅರಸಿ ಬಂದ ಸೂರ್ಯನಂತೆ
ನಿನ್ನಪ್ರೀತಿಯೊ ಪ್ರಕಾಶಮಾನ...
ಹಗಲು- ಇರುಳಗಳ ಕಿರುಬೆರಳ ನೀಡಿ
ಕನಸ ಪೋಣಿಸಿ ಲಾಲಿ ಹಾಡಿದವಳು...
ಅಂಜಿದಾಗ...
ಸರ್ವೇ ಭವಂತು ಸುಖಿನ: ಸರ್ವೇ ಸಂತು ನಿರಾಮಯಾ: ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದು:ಖಭಾಗ್ ಭವೇತ್ |
ಜಗತ್ತಿನ ಸರ್ವ ಜನರೂ ಸುಖದಿಂದ ಇರಬೇಕು ಎಂಬ ಆಶಯದೊಂದಿಗೆ ಸನ್ ರಲ್ಲಿ 1948 ಸ್ಥಾಪನೆಗೊಂಡ ' ರೆಡ್ ಕ್ರಾಸ್' ಸಂಸ್ಥೆಯ ಸ್ಥಾಪನಾ ದಿನವನ್ನು ಇಂದು ವಿಶ್ವಾದ್ಯಂತ ಆಚರಿಸಲಾಗುತ್ತಿದೆ.
ವಿಶ್ವವನ್ನು ಕೊರೋನಾ ಎಂಬ ಮಹಾಮಾರಿ ಸಾವಿನ ಕೂಪದಲ್ಲಿ ತಳ್ಳುತ್ತಿರುವಾಗ...
Times of ಕರ್ನಾಟಕ ಎಂಬ ವೆಬ್ ಪತ್ರಿಕೆ ಮಾಡಬೇಕೆಂಬ ಯೋಚನೆ ಬಂದಾಗ ಮೊದಲು ಅನ್ನಿಸಿದ್ದೇ ಇದು ಕನ್ನಡದ ಕಾಲ ಎಂಬ ಅನಿಸಿಕೆ. ಕನ್ನಡಕ್ಕೊಂದು ಕಾಲವೆಂಬುದಿಲ್ಲ. ಅದು ಪುರಾತನ ಭಾಷೆ. ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದ್ದು. ಒಂದು ವೈಭವಯುತ ಸಾಂಪ್ರದಾಯಿಕ ಪರಂಪರೆಯನ್ನೇ ಹೊಂದಿದೆ. ಅನೇಕ ಜಗದ್ವಿಖ್ಯಾತ ಕವಿಗಳು ಕನ್ನಡದ ದೀಪವನ್ನು ಪ್ರಾಚೀನ ಕಾಲದಿಂದಲೂ ಬೆಳಗಿಸುತ್ತ ಬಂದಿದ್ದು...
ಸಿಂದಗಿ - ಪಟ್ಟಣದ ಆರಾಧ್ಯ ದೈವ ತಾಯಿ ನೀಲಗಂಗಾ ದೇವಿ ಜಾತ್ರೆ ಗುರುವಾರ ಅತ್ಯಂತ ಅರ್ಥಪೂರ್ಣವಾಗಿ ಮತ್ತು ಅದ್ದೂರಿಯಾಗಿ ಜರುಗಿತು.
ಸ್ಥಳೀಯ ಸಾರಂಗಮಠದ ಪರಮಪೂಜ್ಯಶ್ರೀ ಡಾ. ಪ್ರಭುಸಾರಂಗದೇವ...