Monthly Archives: December, 2022

ಜ.1ರಿಂದ 3 ವರಿಗೆ ಪಿ.ಜಿ.ಹುಣಶ್ಯಾಳದ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಅಪ್ಪನ ಜಾತ್ರೆ

ಮೂಡಲಗಿ: ತಾಲೂಕಿನ ಹುಣಶ್ಯಾಳ ಪಿ.ಜಿ ಗ್ರಾಮದಲ್ಲಿ ಶೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಜ.೧ ರಿಂದ ೩ ರವರೆಗೆ “ಅಪ್ಪನ ಜಾತ್ರೆ” ೨೪ನೇ ಸತ್ಸಂಗ ಮಹೋತ್ಸವ, ತೊಟ್ಟಿಲೋತ್ಸವ, ಶ್ರೀ ಸಿದ್ಧಲಿಂಗ ರಥೋತ್ಸವ ಕಾರ್ಯಕ್ರಮ ಜರುಗಲಿದೆ. ಜ.೧ ರಂದು ಮುಂಜಾನೆ ಶ್ರೀ ಸಿದ್ಧಲಿಂಗ ಯತಿರಾಜ ಶ್ರೀಶಾಂಭವಿ ಮಾತೆಯ ಶ್ರೀ ಸಿದ್ಧಲಿಂಗ ಮಹಾರಾಜರ ಮೂರ್ತಿಗೆ ರುದ್ರಾಭಿಷೇಕ ಮತ್ತು ಮುತೈದೆಯರ ಉಡಿ ತುಂಬುವುದು,...

ದಲಿತ ವಿದ್ಯಾರ್ಥಿ ಪರಿಷತ್ ಧಾರವಾಡ ಜಿಲ್ಲಾ ಘಟಕದ ಪದಾಧಿಕಾರಿಗಳ ಸಭೆ

ಧಾರವಾಡ: ಇದೇ ಜನವರಿ 03, 2023ರಂದು ವಿಜಯಪುರದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಕೊಡಮಾಡುವ ಮಾತೆ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಸಮಾರಂಭಕ್ಕೆ ಪದಾಧಿಕಾರಿಗಳ ಸಿದ್ಧತೆ ಮತ್ತು ತಯಾರಿ ಕುರಿತು ದಲಿತ ವಿದ್ಯಾರ್ಥಿ ಪರಿಷತ್ ಧಾರವಾಡ ಜಿಲ್ಲಾ ಘಟಕ ಪದಾಧಿಕಾರಿಗಳ ಸಭೆ ನಡೆಯಿತು. ಈ ಸಭೆಯಲ್ಲಿ ಪರಿಷತ್ ನ ವಿಭಾಗೀಯ ಸಂಚಾಲಕರಾದ ಕುಮಾರ್ ಚವ್ಹಾಣ ಮಾತನಾಡಿ,...

ಕಾಕಿ ಸೊಪ್ಪಿನ ಗಿಡ

ಆರೋಗ್ಯಕ್ಕೆ ಮನೆ ಅಂಗಳದಲ್ಲಿ ಇರುವ ಕಳೆ ಇದು ಆರೋಗ್ಯಕ್ಕೆ ಸಂಜೀವಿನಿ ಕಾಕೆ ಸೊಪ್ಪು: ಅಡಿಗೆ ಸವಿರುಚಿ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.ಸೊಪ್ಪಿನ ಚಟ್ಣಿ  ಬೇರೆ ತರಕಾರಿಯೊಂದಿಗೆ ಕಾಯಿಯಿಂದ ಪಲ್ಯ ಸಾಂಬಾರು ರಾಯತಾ ಮಾಡಬಹುದು. ಕಾಯಿಯನ್ನು ತುಪ್ಪದಲ್ಲಿ ಹುರಿದು ಮಾಡಿದ ಚಟ್ನಿ ತುಂಬಾ ರುಚಿ. ಹೂವು ಚಟ್ನಿಗೆ ಉಪಯೋಗಿಸಬಹುದು. ಇದರ ಪಂಚಾಂಗವು ಉಪಯೋಗ ಔಷದಿಯಾಗಿ. ಆದರೆ ಸೊಪ್ಪು...

ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ, ಮಾನವೀಯತೆ ಕಲಿಸಬೇಕು – ಡಿಡಿಪಿಐ ಹಂಚಾಟೆ

ಮೂಡಲಗಿ: ‘ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ, ಮಾನವೀಯತೆಯ ಅಂಶಗಳನ್ನು ಕಲಿಸಿ ದೇಶದ ಶ್ರೇಷ್ಠ ಪ್ರಜೆಗಳನ್ನಾಗಿಸಬೇಕು’ ಎಂದು ಚಿಕ್ಕೋಡಿಯ ಸಾಕ್ಷರತಾ ಮತ್ತು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಹನಕುಮಾರ ಹಂಚಾಟೆ ಹೇಳಿದರು. ಇಲ್ಲಿಯ ಚೈತನ್ಯ ಆಶ್ರಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ‘ಚೈತನ್ಯ ಬೆಳ್ಳಿ ಹಬ್ಬ-2022’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,  ಪಾಲಕರು ಮಕ್ಕಳಿಗೆ ಮನೆಯಲ್ಲಿ ಹೆಚ್ಚು ಓದುವ ಅವಕಾಶವನ್ನು...

ಹಿಂಡಲಗಾ ಬಿಜೆಪಿ ಕಾರ್ಯಾಲಯಕ್ಕೆ ಈಶ್ವರಪ್ಪ ಭೇಟಿ

ಬೆಳಗಾವಿ - ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳ ವಿಜಯ ನಗರ, ಹಿಂಡಲಗಾ ಕಾರ್ಯಾಲಯಕ್ಕೆ ಮಾಜಿ ಪಂಚಾಯತ ರಾಜ್ ಮಂತ್ರಿಯಾದ ಕೆ.ಎಸ್. ಈಶ್ವರಪ್ಪ ಶನಿವಾರ ಭೇಟಿ ಕೊಟ್ಟರು. ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳ ಅಧ್ಯಕ್ಷ ಧನಂಜಯ ಜಾಧವ ಅವರು ಈಶ್ವರಪ್ಪ ಅವರನ್ನು ಸ್ವಾಗತಿಸಿ ಸತ್ಕರಿಸಿದರು. ಈ ಸಮಯದಲ್ಲಿ ಉಪಸ್ಥಿತರಿದ್ದ ಬಿಜೆಪಿ ಎಲ್ಲ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ಬಿಜೆಪಿ...

ಯುವ ಪ್ರತಿಭೆ ಬೆಳಗಲು ವೇದಿಕೆ ಯುವಜನೋತ್ಸವ-ಟೆನ್ನಿಸ್ ಕೃಷ್ಣ

ಹೊಳೆಆಲೂರ : ಹೊಸದನ್ನು ಸಾಧಿಸಬೇಕೆನ್ನುವ ನೂರಾರು ಕನಸುಗಳನ್ನು ಕಟ್ಟಿಕೊಂಡು ಕಾಲೇಜಿನ ಮೆಟ್ಟಲು ಹತ್ತಿರುವ ಯುವ ವಿದ್ಯಾರ್ಥಿಗಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಅನಾವರಣ ಮಾಡಲು ಯುವಜನೋತ್ಸವ ವೇದಿಕೆಯನ್ನು ಒದಗಿಸಿಕೊಡುತ್ತದೆ ಎಂದು ಆರನೂರಕ್ಕೂ ಮಿಕ್ಕಿ ಚಲನಚಿತ್ರಗಳಲ್ಲಿ ಅಭಿನಯಿಸಿ ಹಾಸ್ಯಪಾತ್ರಗಳ ಮೂಲಕವೇ ಗುರುತಿಸಿಕೊಂಡಿರುವ ಜನಪ್ರಿಯ ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ ಹೇಳಿದರು. ಅವರು ಇಲ್ಲಿನ ಶ್ರೀ ಕವಿಪ್ರ ಸಮಿತಿಯ ಕಲಾ...

ಡಾ. ಭೇರ್ಯ ಅವರಿಗೆ ಸನ್ಮಾನ

ಮೈಸೂರು - ಜಿಲ್ಲೆಯ ಕೃಷ್ಣರಾಜ ನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಜಯಂತ್ಯುತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಾಹಿತ್ಯ ಹಾಗೂ ನಾಡು-ನುಡಿಗಾಗಿ ಸೇವೆ ಸಲ್ಲಿಸಿದ ಹಿರಿಯ ಸಾಹಿತಿ, ಪತ್ರಕರ್ತ ಹಾಗು ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಸದಸ್ಯರಾದ ಡಾ. ಭೇರ್ಯ ರಾಮಕುಮಾರ ಅವರನ್ನು ಸನ್ಮಾನಿಸಲಾಯಿತು.

ಕೆ.ಎಸ್.ನ. ಬಾಲ್ಯ ಕಳೆದ ಕಿಕ್ಕೇರಿಯ ಮನೆ ಸಂರಕ್ಷಣೆಗೆ ಡಾ.ಭೇರ್ಯ ರಾಮಕುಮಾರ್ ಒತ್ತಾಯ

ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಅವರು ತಮ್ಮ ಪ್ರೇಮಕವನಗಳ ಮೂಲಕ ವಿಶ್ವದಾದ್ಯಂತ ಲಕ್ಷಾಂತರ ಸಾಹಿತ್ಯ ಪ್ರೇಮಿಗಳ ಮನಗೆದ್ದಿದ್ದಾರೆ. ಅವರ ಕವನಗಳು ಜನಪ್ರಿಯ ಗಾಯಕರಿಂದ ಭಾವಗೀತೆಗಳಾಗಿ ಸಂಗೀತ ಲೋಕಕ್ಕೆ ನೀಡಲ್ಪಟ್ಟಿವೆ. ಮೈಸೂರು ಮಲ್ಲಿಗೆ ಖ್ಯಾತಿಯ ಕೆ.ಎಸ್.ನ ಅವರು ಬಾಲ್ಯ ಕಳೆದ ಮನೆಯು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿಯಲ್ಲಿ ಅಳಿವಿನ ಅಂಚಿನಲ್ಲಿದೆ. ಇದು ಅತ್ಯಂತ ನೋವಿನ ಸಂಗತಿ ಎಂದು...

ಸದಾಶಿವ ಆಯೋಗದ ವರದಿ ಮಂಡಿಸಿ ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡುವಂತೆ ಆಗ್ರಹಿಸಿ ಮನವಿ

ಮೂಡಲಗಿ: ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಮುಂಬರುವ ಅಧಿವೇಶನದಲ್ಲಿ ಮಂಡಿಸಿ ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಮಾದರ ಸಮಾಜ ಹಿತರಕ್ಷಣಾ ವೇದಿಕೆಯ ತಾಲೂಕಾ ಘಟಕದ ಪದಾಧಿಕಾರಿಗಳು ತಹಸೀಲ್ದಾರ ಮೂಲಕ ಮಂತ್ರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದರು. ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡುವ ಹೈಕೋರ್ಟ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ  ಆಯೋಗ...

ಹೊಟೇಲ್ ಮೇಲೆ ಅಬಕಾರಿ ದಾಳಿ

ಸಿಂದಗಿ: ಪಟ್ಟಣದ ಬೈಪಾಸ ರಸ್ತೆಯ ಗೋಲಗೇರಿ ಕ್ರಾಸನಲ್ಲಿರುವ ಶಿವಾನಿ ಹೋಟೇಲ ಮೇಲೆ ಅಬಕಾರಿ ದಾಳಿ ಮಾಡಿ ಒಟ್ಟು-6.120 ಲೀ ಮದ್ಯ ಹಾಗೂ ಒಟ್ಟು-21.490 ಲೀ ಬೀಯರ ಜಪ್ತಿ ಪಡಿಸಿಕೊಂಡು ಆರೋಪಿತನನ್ನು ದಸ್ತಗಿರಿ ಮಾಡಿ ಅಬಕಾರಿ ನಿರೀಕ್ಷಕಿ ಆರತಿ ಖೈನೂರ ರವರು ಪ್ರಕರಣವನ್ನು ದಾಖಲಿಸಿಕೊಂಡ ಘಟನೆ ಬೆಳಕಿಗೆ ಬಂದಿದೆ. ತಾಲೂಕ ದಂಡಾಧಿಕಾರಿ ನಿಂಗಣ್ಣ ಬಿರಾದಾರ, ಪುರಸಭೆ ಮುಖ್ಯಾಧಿಕಾರಿ...
- Advertisement -spot_img

Latest News

ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ !

ಮೂಡಲಗಿ - ಎಮ್ಮೆ ಮಾರಿ ಬಂದ ಹಣ ಕೇಳಿದ್ದಕ್ಕೆ ಕುಪಿತಗೊಂಡ ವ್ಯಕ್ತಿಯೊಬ್ಬ ಕುಡಿತದ ನಶೆಯಲ್ಲಿ ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ತಾಲೂಕಿನ ಫುಲಗಡ್ಡಿ...
- Advertisement -spot_img
close
error: Content is protected !!
Join WhatsApp Group