Monthly Archives: November, 2023
ಕವನ
ಕವನ: “ತುಳಸಿ ಮಾತೆ”
"ತುಳಸಿ ಮಾತೆ"
ಕೃಷ್ಣನ ನೆನೆವುದೆ ಭಾಗ್ಯವು ನಮಗೆ
ತುಳಸಿಯ ಪೂಜಿಸೆ ಸಂತೃಪ್ತಿಯೆಮಗೆ ಪ
ಗೋಪಾಲ ಕಂದನ ಪೂಜಿಸ ಬನ್ನಿರೆ
ಹೆಂಗಳೆಯರೆಲ್ಲ ಬೇಗ ತುಳಸಿ ತನ್ನಿರೆ ಅ.ಪ
ಜಗದಲಿ ನಾನಾ ಕಲಹ ಕಾರ್ಮೋಡ
ಕಲಿಯುಗದಲಿ ಕಟ್ಟೆಯೊಡೆದಿದೆ ನೋಡ
ನಾನು ನನ್ನದೆಂಬ ಅಹಂಭಾವ ಬಿಡ
ಭವ ಬಂಧನ ಬಿಟ್ಟು ಭಕ್ತಿಯಲಿ ಹಾಡ ೧
ಕರುಣಾಮಯಿ ಮಾತೆ ತುಳಸಿಮಾತೆ
ಸಕಲರಿಗೂ ಮಂಗಲ ಭಾಗ್ಯವಿಧಾತೆ
ದಯೆ ತೋರೆಂದು ಬೇಡೋಣ ಮತ್ತೆ
ಜನುಮ ಜನುಮಕೂ ತುಳಸಿ ಮಾತೆ ೨
ಮನೆಮನೆಯಲಿ...
ಕವನ
ವಚನ ಸಾರ 2: ಅಲ್ಲಮಪ್ರಭು ವಚನ
ಅಲ್ಲಮಪ್ರಭು ವಚನ
ರಕ್ಕಸಿಗಿಬ್ಬರು ಮಕ್ಕಳು, ತೊಟ್ಟಿಲ ಮೇಲೈವರು,
ರಕ್ಕಸಿ ಬಾಣತಿಯಾದಡೆ ಮಕ್ಕಳಿಗಿನ್ನೆಂತೊ!
ತೊಟ್ಟಿಲ ತೂಗುವೆ ಜೋಗುಳವಾಡುವೆ
ರಕ್ಕಸಿಬಾಣತಿಯ ತೊಟ್ಟಿಲು ನುಂಗಿತ್ತು.
ಇದೇನು ಹೇಳಾ ಗುಹೇಶ್ವರಾ?ಭವಕ್ಕೆ ಬಂದ ಜೀವ ಅಜ್ಞಾನವಶದಿಂದಾಗಿ ಭವಾವಳಿಯ ಚಕ್ರದಲ್ಲಿ ಸಿಲುಕಿ ಒದ್ದಾಡುತ್ತಿದೆ ತನ್ನ ಅಜ್ಞಾನವನ್ನು ಕಳೆದುಕೊಳ್ಳದ ಹೊರತು ಆ ಜೀವಕ್ಕೆ ಮುಕ್ತಿ ಇಲ್ಲವೆಂಬುದನ್ನು ಈ ಬೆಡಗಿನ ವಚನ ಧ್ವನಿಸುತ್ತದೆ.
ಎಲ್ಲವನ್ನೂ ನುಂಗಿ ನೊಣೆದು ಹಾಕುವ ಅವಿದ್ಯೆಯೆಂಬ ಮಾಯೆಯೇ...
ಸುದ್ದಿಗಳು
ಸಾಯಿಬಾಬಾ ಜನ್ಮದಿನ ಹಾಗೂ ಪಾದುಕಾ ಪ್ರತಿಷ್ಠಾಪನೆ ಕಾರ್ಯಕ್ರಮ
ಮೈಸೂರ: ನಗರದ ಜಯಲಕ್ಷ್ಮೀಪುರಂನ ಶ್ರೀ ಸತ್ಯಸಾಯಿ ಕಾಲೇಜು ಆವರಣದಲ್ಲಿ ಗುರುವಾರ(ನ-23) ಸಾಯಿಬಾಬಾರವರ ಹುಟ್ಟು ಹಬ್ಬ ಆಚರಣೆ ಹಾಗೂ ಪಾದುಕೆ ಪ್ರತಿಷ್ಠಾಪನೆ ಮಹೋತ್ಸವ ನಡೆಯಿತು.ಬೆಳಿಗ್ಗೆ ನಗರ ಸಂಕೀರ್ತನೆ, ನಾರಾಯಣ(ಪ್ರಸಾದ) ಸೇವೆ ನೆರವೇರಿಸಿದರು.ಇದೇ ಸಂದರ್ಭದಲ್ಲಿ ಕಾಲೇಜ ವಾರ್ಡನ,ಚಿಂತಕರಾದ ಸಚಿನ ಬಾಗೋಜಿ ಅವರು ಬರೆದ 'ಪ್ರೇಮಾಮ್ರತಂ' ಕಿರು ಹೊತ್ತಿಗೆ ಬಿಡುಗಡೆ ಮಾಡಿದರು.ಮುಖ್ಯ ಅತಿಥಿಗಳಾಗಿದ್ದ ಚಂದ್ರಯಾನ 2 ಮತ್ತು 3...
ಸುದ್ದಿಗಳು
ಜಿಲ್ಲೆಗೊಂದು ಕಾನೂನು, ಹುಮನಾಬಾದಗೊಂದು ಕಾನೂನಾ? ; ಸಿದ್ದು ಪಾಟೀಲ ಪ್ರಶ್ನೆ
ಬೀದರ - ಜಿಲ್ಲೆಯ ಹುಮನಾಬಾದ ತಾಲೂಕಾ ಪಂಚಾಯತ ಕಾರ್ಯಾಲಯದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಬಿಜೆಪಿ ಶಾಸಕ ಸಿದ್ದು ಪಾಟೀಲರು ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ದ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ ಪ್ರಸಂಗ ನಡೆಯಿತು.ಜಿಲ್ಲೆಗೊಂದು ಕಾನೂನು, ಹುಮನಾಬಾದ್‌ಗೆ ಒಂದು ಕಾನೂನು ಇರುತ್ತಾ ಎಂದು ಪ್ರಶ್ನಿಸಿದ ಅವರು, ಒಂದು ಗಂಟೆ ತಡವಾಗಿದ್ದಕ್ಕೆ ಕೆಡಿಪಿ ಸಭೆ ಮುಂದೂಡಿ ಅಂತಾ ಎಮ್‌ಎಲ್‌ಸಿಗಳು...
ಸುದ್ದಿಗಳು
ಅಡುಗೆ ಮಾಡುವುದರ ಜೊತೆಗೆ ಅದನ್ನು ಸಂರಕ್ಷಿಸುವ ಜವಾಬ್ದಾರಿ ಮಹತ್ವದ್ದು: ಮೋಹನ ದಂಡಿನ
ಸವದತ್ತಿ: ’ನಾವು ಎಷ್ಟೇ ಆರಿವು ಹೊಂದಿದ್ದರೂ ಕೆಲವು ಮುಂಜಾಗೃತಾ ಕ್ರಮಗಳು ಮುಖ್ಯ. ಅಡುಗೆ ಮಾಡುವುದರ ಜೊತೆಗೆ ನಿರ್ವಹಿಸಬೇಕಾದ ಇನ್ನಿತರ ಪ್ರಮುಖ ಕೆಲಸಗಳ ಬಗ್ಗೆಯೂ ನಿಗಾ ವಹಿಸುವುದು ಮಹತ್ವದ್ದು. ಯಾವುದೇ ಅಹಿತಕರ ಘಟನೆ ಜರುಗದಂತೆ ಕಾರ್ಯ ನಿರ್ವಹಿಸುವುದು ಮುಖ್ಯ’ ಎಂದು ಸವದತ್ತಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ ದಂಡಿನ ಕರೆ ನೀಡಿದರು. ಅವರು ಪಟ್ಟಣದ ಸಾಮರ್ಥ್ಯ...
ಸುದ್ದಿಗಳು
ಇತಿಹಾಸದಿಂದ ಪಾಠ ಕಲಿಯದಿದ್ದರೆ ಭವಿಷ್ಯದ ದಿನಗಳು ಭೀಕರ: ಡಾ. ಭೇರ್ಯ ರಾಮಕುಮಾರ್ ಎಚ್ಚರಿಕೆ
ಇತಿಹಾಸದಿಂದ ಪಾಠ ಕಲಿಯದಿದ್ದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಡಾ. ಭೇರ್ಯ ರಾಮಕುಮಾರ್ ನುಡಿದರು.ಮೈಸೂರು ಜಿಲ್ಲೆಯ ಸಾಲಿಗ್ರಾಮದ ಪದವಿ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ, ರಾಜ್ಯಕಾಲೇಜು ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇತಿಹಾಸ ವಿಭಾಗಗಳು ಸಂಯುಕ್ತವಾಗಿ...
ಸುದ್ದಿಗಳು
ಪಂಚರಾಜ್ಯಗಳಲ್ಲಿ ಬಿಜೆಪಿಗೆ ಮೇಲುಗೈ – ಬಿಎಸ್ ವೈ
ಬೀದರ - ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದು ಆಯ್ಕೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.ಬೀದರ್ ಏರ್ಪೋರ್ಟ್ ನಲ್ಲಿ ಮಾಧ್ಯಮದವರೊಡನೆ ಮಾತನಾಡಿದ ಅವರು, ಹೋದ ಕಡೆಗಳಲ್ಲಿ ಜನತೆಯ ಪ್ರತಿಕ್ರಿಯೆ ಚೆನ್ನಾಗಿದೆ, ಇನ್ನೂ ಸ್ವಲ್ಪ ಪ್ರಯತ್ನ ಮಾಡಿದರೆ ಒಳ್ಳೆಯ ರಿಜಲ್ಟ್ ಬರಲಿದೆ ಎಂದರು.ನಾಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಪ್ರಮುಖರು...
ಸುದ್ದಿಗಳು
ಕನ್ನಡ ಸಾಹಿತ್ಯ ಪರಿಷತ್ತಿನಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಶ್ಲಾಘನೀಯ; ಅಶೋಕ ಅಲ್ಲಾಪೂರ
ಸಿಂದಗಿ: ಕನ್ನಡ ಸಾಹಿತ್ಯ ಪರಿಷತ್ತು ಹತ್ತು ಜನ ಸಾಧಕರಿಗೆ ಗೌರವ ಪುರಸ್ಕಾರ ನೀಡಿದ್ದು ಅತ್ಯಂತ ಶ್ಲಾಘನೀಯ ಎಂದು ರಾಜ್ಯ ಲಿಂಬೆ ಅಭಿವೃದ್ಧಿಯ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ ಅಭಿಪ್ರಾಯ ವ್ಯಕ್ತಪಡಿಸಿದರುಪಟ್ಟಣದ ಸರಕಾರಿ ಆದರ್ಶ ವಿದ್ಯಾಲಯದಲ್ಲಿ ಜಿಲ್ಲಾ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸರಕಾರಿ ಆದರ್ಶ ವಿದ್ಯಾಲಯ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ...
ಸುದ್ದಿಗಳು
ಸಹಕಾರ ಶಿಕ್ಷಣ ಮತ್ತು ತರಬೇತಿಯಲ್ಲಿ ಬದಲಾವಣೆ ಅವಶ್ಯಕ-ಪ್ರೊ.ನಾಗರಾಜ
ಮೂಡಲಗಿ: ಬದಲಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಸಹಕಾರ ಕ್ಷೇತ್ರದಲ್ಲಿ ಇರುವ ಶಿಕ್ಷಣ ಪದ್ಧತಿ ಹಾಗೂ ಸಿಬ್ಬಂದಿಗೆ ಬದಲಾಗುತ್ತಿರುವ ಸನ್ನಿವೇಶಗಳನ್ನು ಅರ್ಥೈಸಿಕೂಂಡು ಮತ್ತು ಅವರಿಗೆ ತರಬೇತಿ ನೀಡಿ ಸಿದ್ಧಗೊಳಿಸುವದು ಅತಿ ಅವಶ್ಯಕವಾಗಿದೆ ಎಂದು ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಜಿ.ವ್ಹಿ.ನಾಗರಾಜ ಹೇಳಿದರು.ಪಟ್ಟಣದ ಕುರುಹಿನಶೆಟ್ಟಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ಸಭಾ...
ಸುದ್ದಿಗಳು
ನ. 25ರಂದು ಮೂಡಲಗಿಯಲ್ಲಿ ಸುವರ್ಣ ಕನ್ನಡ ರಾಜ್ಯೋತ್ಸವ ಆಚರಣೆ – ಮರೆಪ್ಪಗೋಳ
ಮೂಡಲಗಿ: ನಮ್ಮ ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣವಾಗಿ 50 ವರ್ಷ ತುಂಬಿದ ಪ್ರಯುಕ್ತ ನ.25 ರಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ತಾಲೂಕಿನ ಕನ್ನಡಪರ ಸಂಘಟನೆ ಮತ್ತು ಕನ್ನಡ ಅಭಿಮಾನಿಗಳ ಸಹಯೋಗದೊಂದಿಗೆ ಮೂಡಲಗಿ ಪಟ್ಟಣದಲ್ಲಿ ನಾಡಿನ ವಿವಿಧ ರೂಪಕ ಹಾಗೂ ವಾದ್ಯಮೇಳಗಳ ಮೆರವಣಿಗೆಯೊಂದಿಗೆ ಸಡಗರ ಸಂಭ್ರಮದಿಂದ ಸುವರ್ಣ ಕನ್ನಡ ರಾಜ್ಯೋತ್ಸವ-2023 ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು...
Latest News
ಕವನ : ಅನುಬಂಧ
ಅನುಬಂಧಕಾಣದ ದಾರಿಯಲ್ಲಿ
ಬೆಸೆದ ನಂಟು,
ಹೆಸರಿಲ್ಲದಿದ್ದರೂ ಹೃದಯಕ್ಕೆ
ಪರಿಚಿತವಾದ ಬಂಧ…
ಕಾಲದ ಹೊಳೆ ಹರಿದರೂ
ಕಳೆಯದ ಗುರುತು, ಗಂಟು
ಅದು ಅನುಬಂಧ.
ಮೌನದಲ್ಲೂ ಮಾತಾಡುವ
ಸಂಬಂಧ, ಬಂಧ..
ಕಣ್ಣಂಚಿನ ನೀರನ್ನೂ
ಓದುತ್ತದೆ ಒರೆಸುತ್ತದೆ.
ಹೃದಯ ಮುರಿದು
ನೊಂದ ಕ್ಷಣದಲ್ಲಿ
ಅದೃಶ್ಯವಾಗಿ ಕೈ
ಹಿಡಿದುಕೊಳ್ಳುತ್ತದೆ.
ಮಣ್ಣಿನ ವಾಸನೆಯಂತೆ
ಸಹಜ,
ಬೆಳಗಿನ ಬೆಳಕಿನಂತೆ
ಮೃದುವು.
ನಗುವಿನಲ್ಲೂ,...



