Monthly Archives: February, 2025

ಭೀಕರ ಅಪಘಾತ ; ಕುಂಭಮೇಳ ಪುಣ್ಯ ಸ್ನಾನಕ್ಕೆ ಹೋಗಿದ್ದ ಬೀದರ ಜಿಲ್ಲೆಯ ಐವರು ಸಾವು

ಕಾಶಿ ಬಳಿ ಲಾರಿ ಮತ್ತು ಕ್ರೂಸರ್ ನಡುವೆ ಭೀಕರ ರಸ್ತೆ ಅಪಘಾತಬೀದರ : ಕಾಶಿ ಬಳಿ ಲಾರಿ ಮತ್ತು ಕ್ರೂಸರ್ ನಡುವೆ ಭೀಕರ ರಸ್ತೆ ಅಪಘಾತವಾಗಿ ಕಂಭಮೇಳಕ್ಕೆ ಹೋಗಿದ್ದ ಬೀದರ್ ಮೂಲದ ಐದು ಜನ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಮಿರಜಾಪೂರ್ ಜಿಲ್ಲೆಯ ರೂಪಾಪೂರ ಬಳಿ ನಡೆದಿದೆ... ಬೀದರ್ ನಗರದ...

“ಕರ್ನಾಟಕದ ಗಾಂಧೀ” ಹರ್ಡೇಕರ್ ಮಂಜಪ್ಪನವರು ಅಪ್ಪಟ ಸ್ವಾಭಿಮಾನಿಯಾಗಿದ್ದರು

ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲೆ ಹಾಗೂ ಕನ್ನಡ ಭವನ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ದಿ. ೨೦ ರಂದು ಕನ್ನಡ ಭವನದಲ್ಲಿ ನಡೆದ "ಶತಮಾನ ಕಂಡ ಸಾಹಿತಿಗಳು" ಎಂಬ ತಿಂಗಳ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೊ.ಶ್ರೀಕಾಂತ ಶಾನವಾಡ ಅವರು ಮಾತನಾಡಿದರು.ಕರ್ನಾಟಕದವರೇ ಆದ ಅಪ್ಪಟ ಗಾಂಧೀವಾದಿ ದಿ.ಹರ್ಡೇಕರ್ ಮಂಜಪ್ಪನವರು ೧೮-೨-೧೮೮೬ ರಂದು ಉತ್ತರಕನ್ನಡ ಜಿಲ್ಲೆಯ ಬನವಾಸಿಯಲ್ಲಿ ಜನಿಸಿದರು....

ವೈಭವದಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ

ಬೆಂಗಳೂರು-  ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕತಿ ಇಲಾಖೆ ಹಾಗೂ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು  ನಗರದ ಜೆಸಿ ರಸ್ತೆ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿತ್ತು.ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಚಿವರಾದ ಶಿವರಾಜ ಎಸ್‌ ತಂಗಡಗಿರವರು ಸಮಾರಂಭ ವನ್ನು ಉದ್ಘಾಟಿಸಿದರು....

ಕಮತಗಿ ಶ್ರೀಮಠದಿಂದ ಪತ್ರಕರ್ತರಿಗೆ ಗೌರವ ಶ್ರೀರಕ್ಷೆ

ಬಾಗಲಕೋಟೆ,,: ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಆರಾಧ್ಯ ದೈವ ಶ್ರೀ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ಶ್ರೀ ಹುಚ್ಚೇಶ್ವರ ಮಹಾಸ್ವಾಮಿಗಳ ಪಟ್ಟಾಧಿಕಾರದ ರಜತಮಹೋತ್ಸವದ ಹಿನ್ನೆಲೆಯಲ್ಲಿ ಕೊನೆಯ ದಿನವಾದ ದಿ. 19 ರಂದು ಬುಧವಾರ ವಿವಿಧ ಪತ್ರಿಕೆಗಳ ಮೂಲಕ ಪ್ರಸಾರ ಮಾಡಿದ ಪತ್ರಿಕಾ ಪ್ರತಿನಿಧಿಗಳಿಗೆ ಗೌರವ ಸತ್ಕಾರ ಮಾಡಲಾಯಿತು.ಸಂಗಮೇಶ ಸಿನ್ನೂರು (ಸಂಯುಕ್ತ ಕರ್ನಾಟಕ ), ವಿಜಯ್...

ಸ್ವಾವಲಂಬಿಗಳಾಗಿ ಉತ್ತಮ ಜೀವನ ಸಾಗಿಸಿ: ವಿದ್ಯಾರ್ಥಿಗಳಿಗೆ ಎನ್.ಆರ್. ಠಕ್ಕಾಯಿ ಕರೆ

ರಾಮದುರ್ಗ: ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆ ಮಾಡಿ ಸ್ವಾವಲಂಬಿಗಳಾಗಿ ಉತ್ತಮ ಜೀವನವನ್ನು ನಡೆಸಬೇಕು ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್. ಆರ್.ಠಕ್ಕಾಯಿ ಹೇಳಿದರು.ತಾಲೂಕಿನ ಚಂದರಗಿಯ ಸ್ಪೋಕೋ ಸಂಸ್ಥೆಯ ಎಸ್.ಪಿ.ಡಿ.ಸಿ.ಎಲ್ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.ಸದೃಢ ದೇಹದಲ್ಲಿ...

ಕವನ : ವಿಧವೆಯಾದಳು ವೀರ ಮಡದಿ

ಹಿಮದ ಅಡಿಯಲ್ಲಿ ಸಿಕ್ಕು ೭ ದಿನ ಬದುಕಿ ಹೊರಗೆ ಬಂದು ಪ್ರಾಣ ಬಿಟ್ಟ ಹಣಮಂತ ಕೊಪ್ಪದ ಇವರ ಸ್ಮರಣೆಗೆ ವಿಧವೆಯಾದಳು ವೀರ ಮಡದಿ ------------------------------------- ಅಂದು ಸೂರ್ಯ ಮುಳುಗಿರಲಿಲ್ಲ. ದನಕರು ಮೇಕೆ ಹಟ್ಟಿಗೆ ಬಂದವು. ರೈತರ ಜಗುಲಿಯ ಮೇಲೆ ಹರಟೆ ಸಂಜೆ ಟಿವಿ ಬಾನುಲಿಯ ಸುದ್ಧಿ. ಹಿಮದಡಿಗೆ ಹೂತು ಹೋದ ಯೋಧರು. ಹುಡುಕಲಾಗಲಿಲ್ಲ ಅವನ ವಾರ ಕಳೆಯಿತು ದಿನಗಳುರುಳಿ ದುಗುಡು ನೋವು ಮಡುವಾಯಿತು. ಉಸಿರುಗಟ್ಟಿ ದರೂ ಬದುಕಿಬಿಟ್ಟ ಹೊರಗೆ ಬಂದು ನಸು...

ಎಸ್ ಎಲ್ ಸಿ ವಿದ್ಯಾರ್ಥಿಗಳಿಗಾಗಿ ಅಭಿಪ್ರೇರಣಾ ಕಾರ್ಯಾಗಾರ ಮತ್ತು ಸಂವಾದ ಕಾರ್ಯಕ್ರಮ

ಸವದತ್ತಿ: ಪಟ್ಟಣದ ಗುರುಭವನದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗಾಗಿ ತಾಲೂಕ ಮಟ್ಟದ ಅಭಿಪ್ರೇರಣೆ ಕಾರ್ಯಾಗಾರ ಮತ್ತು ಸಂವಾದ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಶಾಸಕ ವಿಶ್ವಾಸ ವಸಂತ ವೈದ್ಯರವರು ವಿದ್ಯಾರ್ಥಿಗಳು ಭಯಮುಕ್ತ ವಾತಾವರಣದಲ್ಲಿ ಪರೀಕ್ಷೆಯನ್ನು ಎದುರಿಸಲು ಸಜ್ಜಾಗಲು ಕರೆ ನೀಡಿದರು.2023- 24 ನೇ ಸಾಲಿನಲ್ಲಿ ತಾಲೂಕಿಗೆ ಪ್ರಥಮ...

ನಾಮದೇವ ಶಿಂಪಿ ವಧುವರರ ಸಮಾವೇಶ ಶೀಘ್ರದಲ್ಲಿ

ಮೂಡಲಗಿ: ರಾಜ್ಯದಲ್ಲಿ ಕಡಿಮೆ ಜನಸಂಖ್ಯೆ ಹೊಂದಿರುವ ನಾಮದೇವ ಶಿಂಪಿ ಸಮಾಜದ ವಧು-ವರರ ಹಿತಕ್ಕಾಗಿ ಶೀಘ್ರದಲ್ಲಿಯೇ ಉತ್ತರ ಕರ್ನಾಟಕದ ಭಾಗದಲ್ಲಿ ರಾಜ್ಯ ಮಟ್ಟದ ವಧು-ವರರ ಸಮಾವೇಶವನ್ನು ವಿಶಿಷ್ಟವಾಗಿ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ನಾಮದೇವ ಸಿಂಪಿ ಸಮಾಜ ವಧು-ವರರ ವೇದಿಕೆಯ ರಾಜ್ಯಾಧ್ಯಕ್ಷ ಸತೀಶಕುಮಾರ ಪಿಸೆ ಹೇಳಿದರು.ಅವರು ಗುರುವಾರದಂದು ಪಟ್ಟಣದಲ್ಲಿ ಜರುಗಿದ ನಾಮದೇವ ಶಿಂಪಿ ಸಮಾಜದ ಸಭೆಯಲ್ಲಿ ಮಾತನಾಡಿ,...

ತಾಲೂಕ ಪಂಚಾಯಿತಿ ಮೂಡಲಗಿ ಅನಿರ್ಬಂದಿತ ಅನುದಾನದಲ್ಲಿ ಅಂಗನವಾಡಿಗಳಿಗೆ ಟಿ.ವಿ ವಿತರಣೆ ಕಾರ್ಯಕ್ರಮ

ಮೂಡಲಗಿ -  ಶಿಶು ಅಭಿವೃದ್ಧಿ ಯೋಜನೆ ಅರಬಾವಿ, ವ್ಯಾಪ್ತಿಗೆ ಬರುವ ವಡೇರಹಟ್ಟಿ ಅಂಗನವಾಡಿ ಕೇಂದ್ರಕ್ಕೆ ತಾಲೂಕ ಪಂಚಾಯತ್ ಮೂಡಲಗಿ ವತಿಯಿಂದ ಅನಿರ್ಬಂಧಿತ ಅನುದಾನದ ಸ್ಮಾರ್ಟ್ ಕ್ಲಾಸ್ ಮಾಡಲು ಟಿವಿ ವಿತರಿಸಲಾಯಿತು.ಸದರಿ ಕಾರ್ಯಕ್ರಮಕ್ಕೆ ಮೂಡಲಗಿ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರಾದ ಶ್ರೀಮತಿ ಜ್ಯೋತಿ ಪಾಟೀಲ್ ರವರು ಚಾಲನೆ ನೀಡಿ ಮಾದರಿ ಅಂಗನವಾಡಿ ಕೇಂದ್ರ ಮೂಲಭೂತ ಸೌಕರ್ಯಗಳನ್ನು ಹಾಗೂ...

ಅತಿಥಿ ಶಿಕ್ಷಕರಿಗೆ ಸ್ವಂತ ಸುಮಾರು ೨೫.೧೫ ಲಕ್ಷ ರೂಪಾಯಿ ಗೌರವ ಸಂಭಾವನೆ ವಿತರಿಸಿದ ಬಾಲಚಂದ್ರ ಜಾರಕಿಹೊಳಿ

ಅತಿಥಿ ಶಿಕ್ಷಕರ ಪಾಲಿಗೆ ದೈವೀ ಸ್ವರೂಪಿಯಾದ ಶಾಸಕ ಬಾಲಚಂದ್ರ ಜಾರಕಿಹೊಳಿ೧.೫೫ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಶಾಲಾ ಬ್ಯಾಗ್, ಸ್ವೆಟರ್, ಸಮವಸ್ತ್ರ ನೀಡಿದ ಶಾಸಕರುಗೋಕಾಕ; ಸಮಾಜದ ಸುಧಾರಣೆಯಲ್ಲಿ ಶಿಕ್ಷಣವು ಮಹತ್ತರ ಪಾತ್ರ ವಹಿಸುತ್ತದೆ. ನಮ್ಮ ಮೂಡಲಗಿ ವಲಯವು ಶಿಕ್ಷಣದಲ್ಲಿ ಪ್ರಗತಿಯನ್ನು ಸಾಧಿಸುವ ಮೂಲಕ ಪ್ರತಿ ವರ್ಷವೂ ಉತ್ತಮವಾದ ಫಲಿತಾಂಶವನ್ನು ನೀಡುತ್ತ...
- Advertisement -spot_img

Latest News

ಶ್ರೀಕೃಷ್ಣನ ಪಾತ್ರದಾರಿ ಎ.ಹೆಚ್.ಗಣೇಶ ಅಂಕಪುರ

ನಿವೃತ್ತ ಪ್ರಾಂಶುಪಾಲರು ಎ.ಹೆಚ್.ಗಣೇಶ್ ಮೂಲತಃ ಅಂಕಪುರ ಗ್ರಾಮದವರು. ಹಾಲಿ ಹಾಸನದ ವಾಸಿ. ಹಾಸನ ತಾಲ್ಲೂಕು ಕಟ್ಟಾಯ ಹೋಬಳಿ ಅಂಕಪುರ ಗ್ರಾಮದಲ್ಲಿತಂದೆ ಹನುಮಂತೇಗೌಡ ತಾಯಿ ಹೊಂಬಾಳಮ್ಮ ದಂಪತಿಗಳ...
- Advertisement -spot_img
error: Content is protected !!
Join WhatsApp Group