ಮುಧೋಳ – ತಾಲೂಕಿನ ಸುಕ್ಷೇತ್ರ ಹಿರೇಆಲಗುಂಡಿಯ ಶ್ರೀ ಶಿವಲಿಂಗೇಶ್ವರ ಮಠದಲ್ಲಿ ರಾಷ್ಟ್ರೀಯ ಬಸವ ಚಿಂತನ ಬಳಗವು ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳ ಸಮ್ಮುಖದಲ್ಲಿ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಶಿವಾನುಭವ ಕಾರ್ಯಕ್ರಮವು ರವಿವಾರ ದಿ. 7 ರಂದು ಸಂಜೆ 8 ರಿಂದ 9 ರ ವರೆಗೆ ಶಿವಾನುಭವ ಸತ್ಸಂಗವು ಜರುಗಲಿದೆ.
23 ನೇ ಶಿವಾನುಭವ ಕಾರ್ಯಕ್ರಮದಲ್ಲಿ “ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ “ಎಂಬ ವಚನವನ್ನು ಆಧಾರವಾಗಿಟ್ಟುಕೊಂಡು ಪ.ಪೂ.ಶರಣಬಸವ ಶಾಸ್ತ್ರಿಗಳು ಉಪದೇಶಾಮೃತವ ನ್ನು ನೀಡಲಿದ್ದಾರೆಂದು ಬಳಗದ ಮುಖ್ಯಸ್ಥರಾದ ಶ್ರೀಮತಿ ಸುಹಾಸಿನಿ ಮುರುನಾಳ ಹಾಗೂ ಗಿರಿಜಮ್ಮ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಗಳಖೋಡದಲ್ಲಿ 113.ನೇ ಸತ್ಸಂಗ ; ತಾಲೂಕಿನ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ರವಿವಾರ ದಿ.7 ರಂದು ಮುಂಜಾನೆ 8.30ಕ್ಕೆ 1113 ನೇ ಸತ್ಸಂಗ ಕಾರ್ಯಕ್ರಮವು ಪ.ಪೂ.ಶರಣಬಸವ ಶಾಸ್ತ್ರಿಗಳ ಸಮ್ಮುಖದಲ್ಲಿ ಜರುಗಲಿದೆ.
ಇದೆ ವೇಳೆಯಲ್ಲಿ ಸಿದ್ಧಾರೂಢರ ಅಭಿಷೇಕ, ಪಾರಾಯಣ, ಸಹಸ್ರ ಬಿಲ್ವಾರ್ಚನೆ, ನಾಮಜಪ ಕಾರ್ಯಕ್ರಮ ಜರುಗಲಿದೆ ಎಂದು ಆಶ್ರಮದ ಪರಮಪೂಜ್ಯ ಕುಮಾರ ಗುರುಪ್ರಸಾದ ಸ್ವಾಮೀಜಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

