ಕಾರಂಜಿಮಠದಲ್ಲಿ ೨೪೭ ನೆಯ ಶಿವಾನುಭವ ಕಾರ್ಯಕ್ರಮ

Must Read

ಬೆಳಗಾವಿ: ಇಲ್ಲಿಯ ಶಿವಬಸವ ನಗರದ ಪ್ರತಿಷ್ಠಿತ ಕಾರಂಜಿಮಠದಲ್ಲಿ ಇದೇ ಜನೇವರಿ ೩ ಸೋಮವಾರದಂದು ಸಂಜೆ ೬ ಗಂಟೆಗೆ ೨೪೭ನೆಯ ಶಿವಾನುಭವ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ.

ಮಠದ ಶಿವಾನುಭವ ಮಂಟಪದಲ್ಲಿ ಜರುಗುವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಕಾರಂಜಿಮಠದ ಪೂಜ್ಯರಾದ ಗುರುಸಿದ್ಧ ಮಹಾಸ್ವಾಮಿಗಳು ವಹಿಸಲಿದ್ದು, ಅಧ್ಯಕ್ಷತೆಯನ್ನು ಕಡೋಲಿಯ ದುರದುಂಡೇಶ್ವರ ವಿರಕ್ತಮಠದ ಪೂಜ್ಯರಾದ ಗುರುಬಸವಲಿಂಗ ಮಹಾಸ್ವಾಮಿಗಳು ವಹಿಸುವರು.

ಈ ಕಾರ್ಯಕ್ರಮದಲ್ಲಿ ಸಾಹಿತಿ ಪ್ರಕಾಶ ಗಿರಿಮಲ್ಲನವರ ಅವರು ” ನಿಡಸೋಸಿ ಶ್ರೀ ದುರದುಂಡೇಶ್ವರ ಮಠದ ಭವ್ಯ ಪರಂಪರೆ ಹಾಗೂ ಶ್ರೀ ಮಠದ ಸಾಮಾಜಿಕ ಕೊಡುಗೆ” ವಿಷಯದ ಕುರಿತು ಉಪನ್ಯಾಸ ನೀಡುವರು.

ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷೆ ಶ್ರೀಮತಿ ಮಂಗಳಾ ಮೆಟಗುಡ್ಡ ಹಾಗೂ ಶ್ರೀಮತಿ ಡಾ: ಮಂಜುಳಾ ರಾಮಣ್ಣವರ (ಪಾಟೀಲ) ಅವರನ್ನು ಸನ್ಮಾನಿಸಲಾಗುತ್ತಿದೆ. ಶ್ರೀ ಕಾರಂಜಿಮಠದ ಮಾತೃಮಂಡಳಿ ತಾಯಂದಿರಿಂದ ಸಾಮೂಹಿಕ ಪ್ರಾರ್ಥನೆ ಜರುಗುವುದು. ಭಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸಲು ಕಾರಂಜಿಮಠ ಕೋರಿದೆ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group