ಬೀದರ – ಜಿಲ್ಲೆಯ ಹುಮನಾಬಾದ್ ತಾಲೂಕಿನ ದುಬಲಗುಂಡಿ ಕ್ರಾಸ್ ಬಳಿ ಪೊಲೀಸರು ಭರ್ಜರಿ ಬೇಟೆಯಾಡಿದ್ದು ಸುಮಾರು 34 ಲಕ್ಷ ರೂ. ಬೆಲೆಬಾಳುವ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಮೂವರು ಆರೋಪಿಗಳು ಪರಾರಿಯಾಗಿದ್ದು ಒಬ್ಬನ ಬಂಧನವಾಗಿದೆ. ಪರಾರಿಯಾದವರ ಹುಡುಕಾಟದಲ್ಲಿ ಹುಮನಾಬಾದ್ ಪೊಲೀಸರು ತೀವ್ರ ಬಲೆ ಬೀಸಿದ್ದಾರೆ.
ತೆಲಂಗಾಣದಿಂದ ಬೀದರ್ ಮಾರ್ಗವಾಗಿ ಸೊಲ್ಲಾಪೂರ್ ನತ್ತ ಕಾರಿನಲ್ಲಿ ಗಾಂಜಾವನ್ನು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲಿಸರು ನೂತನ ಎಸ್ ಪಿ ಡೆಕ್ಕಾ ಕಿಶೋರ್ ಬಾಬು ಮಾರ್ಗದರ್ಶನದಲ್ಲಿ ದಾಳಿ ನಡೆಸಿ ಗಾಂಜಾ ಸಾಗಾಟಕ್ಕೆ ಬ್ರೇಕ್ ಹಾಕಿದರು.
೩೪ ಲಕ್ಷ ರೂ. ಗಳ ಗಾಂಜಾ ವಶಪಡಿಸಿಕೊಂಡಿದ್ದಲ್ಲದೆ ಅದನ್ನು ಸಾಗಿಸುತ್ತಿದ್ದ ಆರು ಲಕ್ಷ ರೂ. ಮೌಲ್ಯದ ಶವರ್ಲೆ ಕಾರೊಂದನ್ನು ಜಪ್ತಿ ಮಾಡಿದ್ದಾರೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ