spot_img
spot_img

ದೀಪಾವಳಿಯಲ್ಲಿ ಆತ್ಮನಿರ್ಭರ ಭಾರತ ಮಾಡೋಣ ಬನ್ನಿ

Must Read

- Advertisement -

 ” ಇದು ದೀಪಗಳ ಹಬ್ಬ , ದೀಪಗಳನ್ನು ಬೆಳಗೋಣ “

“ದೀಪಗಳ ಹಬ್ಬ ದೀಪಾವಳಿ ” ” ವೋಕಲ್ ಫಾರ್ ಲೋಕಲ್  ಮಂತ್ರ ” 

ಬೆಳಕಿನ ಹಬ್ಬ ಪರಿಸರ ಸ್ನೇಹಿ ಯಾಗಿದ್ದರೆ ಮನಸ್ಸಿಗೆ ಮುದ ಹಾಗೂ ಪರಿಸರಕ್ಕೂ ಒಳ್ಳೆಯದು.ಹಬ್ಬದಂದು ಹಚ್ಚುವ  ದೀಪದಲ್ಲಿ  ವೈವಿಧ್ಯತೆ ಇರಲಿ .

- Advertisement -

ಬೆಂಗಳೂರು ನಗರದ ಶ್ರೀನಿವಾಸ  ನಗರದ  ಪ್ರಮುಖ  ರಸ್ತೆಯ ಬದಿಯಲ್ಲಿ ಇರುವ ಪುಟ್ ಪಾತ್ ಮೇಲೆ ಮಣ್ಣಿನ  ಹಣತೆ ದೀಪದ   ವ್ಯಾಪಾರ ಮಾಡುತ್ತಾ ಕುಳಿತಿರುವ ರೂಪಾ ಅವರ ಬಳಿ ಹಣತೆ ತೆಗೆದುಕೊಂಡು ಅವರ ಬದುಕಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಹೇಳುವ ಕೆಲಸ ಸಿಲಿಕಾನ್ ಸಿಟಿಯ ನಾಗರೀಕರು ಮಾಡಲಿ ಎಂಬುದು ನನ್ನ ಈ ಲೇಖನದ  ಮೂಲ ಉದ್ದೇಶ !!

ನಾಡಿನೆಲ್ಲೆಡೆ  ಮಣ್ಣಿನ ಹಣತೆ ದೀಪ ಮಾರುವರ ಬಳಿ ದೀಪ ತೆಗೆದುಕೊಂಡು ಅವರ ಮನೆಯ ದೀಪ ಬೆಳಗಿಸೋಣ ಹಾಗೂ ನಮ್ಮ ಮನೆಯಲ್ಲಿ  ದೀಪಾವಳಿಯ ದೀಪ  ಬೆಳಗೋಣ !!

ದೇಶದ ಜನತೆ ಪ್ರಧಾನಿ ಮೋದಿಯವರ ಕನಸಾದ ಆತ್ಮ ನಿರ್ಭರ ಭಾರತ ನಿರ್ಮಾಣದಲ್ಲಿತೊಡಗಿ ಸ್ವಾವಲಂಬಿ ಬದುಕನ್ನು ತಮ್ಮದಾಗಿಸಿಕೊಂಡ ಜನರ ಬದುಕಿನಲ್ಲಿ ಈ ದೀಪಾವಳಿ ಹಬ್ಬ ಹಣತೆಯ ದೀಪ ಬೆಳಗಿಸಲಿ .

- Advertisement -

ವೋಕಲ್ ಫಾರ್ ಲೋಕಲ್  ಮಂತ್ರ ದೇಶದ ಹಿರಿಮೆಯನ್ನು ಹೆಚ್ಚಿಸುವ ಜೊತೆಗೆ ನಮ್ಮವರನ್ನು ಬೆಳಿಸಿದರೆ ನಾವು ಬೆಳೆದಂತೆ ನಮ್ಮ ಆರ್ಥಿಕ ಸ್ಥಿತಿ ಉನ್ನತ ಮಟ್ಟ  ತಲುಪಿ ದೇಶದ ಆರ್ಥಿಕ ಪರಿಸ್ಥಿತಿ ಸುಸ್ಥಿತಿಯಲ್ಲಿ ಸಾಗುತ್ತದೆ ಅಲ್ಲವೆ !!

ಭವ್ಯ ಭಾರತದಲ್ಲಿ  ನಮ್ಮವರನ್ನು ಬೆಳೆಸಿದರೆ ನಾವು ಬೆಳೆದತೆ ,ನಮ್ಮದೇ ಆದ  ಉತ್ಪನ್ನಗಳನ್ನು ಕೊಂಡರೆ ಭಾರತದ ಆರ್ಥಿಕ ವ್ಯವಸ್ಥೆ ಇನ್ನೂ ಉನ್ನತ ಮಟ್ಟ ಕ್ಕೆ ಹೋಗಿ ನಾವುಗಳು ಉನ್ನತ ಸ್ಥಾನ ತಲುಪುವ ಜೊತೆಗೆ   ದೇಶದ ಹಿರಿಮೆಯನ್ನು ಎತ್ತಿ ಹಿಡಿಯುವ ಜೊತೆ ಜೊತೆಗೆ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಆತ್ಮ ನಿರ್ಭರ ಭಾರತಕ್ಕೆ ದೀಪಾವಳಿ ಹಬ್ಬದ ಸಮಯದಲ್ಲಿ ದೀಪ ಬೆಳಗಿಸುವ ಕಾಯಕ ಆರಂಭ ಮಾಡುವ ಸಂಕಲ್ಪ ಮಾಡೋಣ ಅಲ್ಲವೇ !!

ಬೆಳಕಿನ ಹಬ್ಬ ಆಚರಿಸಿ ದೀಪಗಳ ಹಚ್ಚಿ  ನಾಡಿಗೆ ಕವಿದಿರುವ ಕರೊನಾ ಎಂಬ ಅಂಧಕಾರವನ್ನು  ಹೊಡೆದೋಡಿಸುವ  ಕೆಲಸ ನಮ್ಮೆಲ್ಲರ ಆದ್ಯ ಕರ್ತವ್ಯ ಆಗಲಿ ಎಂದು ಆಶಿಸುತ್ತೇನೆ .

ಪುಟ್ ಪಾತ್ ಮೇಲೆ ವ್ಯಾಪಾರ ವಹಿವಾಟು  ಮಾಡುವವರ ಬಳಿಯೇ ಹಣತೆ ದೀಪ ತೆಗೆದು ಕೊಂಡು ಅವರ ಮನೆಯಲ್ಲಿ ದೀಪಾವಳಿ ಯ ದೀಪ ಬೆಳಗಿಸಲೂ ನಾವೆಲ್ಲ ಕೈ ಜೋಡಿಸೋಣ ಅಲ್ಲವೇ  !! 

ಹಣತೆ  ದೀಪಗಳ ವ್ಯಪಾರ ರೂ. 5 ರಿಂದ ಹಿಡಿದು ರೂ. 200 ರವರೆಗೆ  ತಮಿಳುನಾಡು ಕಡೆಯಿಂದ ತರಿಸಿ  ದೀಪಾವಳಿ ಹಬ್ಬಕ್ಕೆ ಹಣತೆ  ವ್ಯಾಪಾರ ವಹಿವಾಟು ಮಾಡುತ್ತಿರುವುದಾಗಿ ಶ್ರೀನಿವಾಸ ನಗರದ ಪುಟ್ ಪಾತ್ ಮೇಲೆ ವ್ಯಾಪಾರ ವಹಿವಾಟು ನಡೆಸುತ್ತಿದ್ದ ರೂಪ ನುಡಿದರು.

ಪುಟ್ ಪಾತ್ ಮೇಲೆಯೇ ವ್ಯಾಪಾರ,ಅಲ್ಲಿಯೇ ಊಟ ಮಾಡುತ್ತಾ ಕುಳಿತಿದ್ದರು ತಾಯಿ ಮತ್ತು ಮಗಳು.  ಅವರ ಬಳಿ ನನ್ನ ಮಾತು ಮುಂದುವರೆದಿತ್ತು. ಪ್ರತಿ ವರ್ಷ ಇದ್ದ ವ್ಯಾಪಾರ ವಹಿವಾಟು ಈ ಬಾರಿ ಇಲ್ಲ ಕಾರಣ ಕರೊನಾ. ನಾಳೆ ನಾಡಿದ್ದರಲ್ಲಿ  ವ್ಯಾಪಾರ ದಲ್ಲಿ ಚೇತರಿಕೆ  ಬರುವ ಸಾಧ್ಯತೆ ಇದೆ ಎಂದು ಆಶಾ ಭಾವನೆ ವ್ಯಕ್ತಪಡಿಸಿದ್ದರು .

ದೀಪಾವಳಿ ಹಬ್ಬ ದೀಪಗಳ ಸಾಲು ಸಾಲು ಹಣತೆ ಹಚ್ಚುವ ಹಬ್ಬ. ರೂಪಾ ಅವರ ಪುಟ್ ಪಾತ್ ಮೇಲೆ ಇದ್ದ   ಹಣತೆ ದೀಪಗಳ ಸಾಲು ಸಾಲು ಜನರನ್ನು ತನ್ನತ್ತ ಸೆಳೆಯುತ್ತಾ ಇತ್ತು. ನಾಡಿಗೆ ಬೆಳಕು ಚೆಲ್ಲುವ ಹಬ್ಬ ದೀಪಾವಳಿ ನವೆಂಬರ್ 13 ರಿಂದ ಮೂರು ದಿನಗಳ ಕಾಲ. ಜಲಪೂರ್ಣ ತ್ರಯೋದಶಿ ( ನೀರು ತುಂಬುವ  ಹಬ್ಬ 13.11.2020 – ದೀಪಾವಳಿ ಹಬ್ಬದ ಆರಂಭ )

 ” ಆತ್ಮ ನಿರ್ಭರ ಭಾರತ “

ದೀಪಾವಳಿಯನ್ನು ಆಧ್ಯಾತ್ಮಿಕ ಹಿನ್ನೆಲೆಯಿಂದ ಆಚರಿಸಿ ನಮ್ಮ ಆತ್ಮದೀಪಗಳನ್ನು ಬೆಳಗಿಸಿ ಅನ್ಯರ ಆತ್ಮದೀಪಗಳನ್ನು ಬೆಳಗಿಸುವ  ಕಾಯಕ ಮಾಡೋಣ , ಮಣ್ಣಿನ ದೀಪದ ಬೆಳಕಿನಲ್ಲಿ ಹಬ್ಬ ಆಚರಿಸಿ ದೀಪಾವಳಿಗೆ ಮೆರುಗು ಹೆಚ್ಚುವ ಮೂಲಕ ಮೋದಿ ರವರು ನುಡಿದಂತೆ ;

ಆತ್ಮ ನಿರ್ಭರ ಭಾರತ  ಮಾಡೋಣ !!

ನಮ್ಮವರ ಬಳಿ ಮಣ್ಣಿನಿಂದ ಮಾಡಿದ ಹಣತೆ ದೀಪ ತೆಗೆದುಕೊಂಡು  ಆತ್ಮ ನಿರ್ಭರ ಭಾರತ ಮಾಡುವ ಸಂಕಲ್ಪ ಮಾಡೋಣ !

ಮಣ್ಣಿನ ಹಣತೆ ದೀಪ  ಬೆಳಗಿಸಿ ಕುಂಬಾರರ ಬದುಕು ಹಸನು ಮಾಡೋಣ , ಪರಿಸರ ಮಾಲಿನ್ಯ ನಿಯಂತ್ರಣ ಮಾಡೋಣ , ಇದು ದೀಪಗಳ ಹಬ್ಬ , ದೀಪಗಳನ್ನು ಬೆಳಗೋಣ ಅಲ್ಲವೇ !!

 ” ದೀಪಾವಳಿ ಹಬ್ಬದ ಬಗ್ಗೆ ಪೌರಾಣಿಕ ಹಿನ್ನೆಲೆ  ” 

ಶ್ರೀ ರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸುತ್ತಾರೆ, ಅಮಾವಾಸ್ಯೆಯ ಹಿಂದಿನ ದಿನ (ನರಕ ಚತುರ್ದಶಿ) ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ದೀಪಾವಳಿಯಲ್ಲಿ ಕೇಡಿನ ಮೇಲೆ ಶುಭದ ವಿಜಯವನ್ನು ಆಚರಿಸಲಾಗುತ್ತದೆ.

ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ ಬಲಿಪಾಡ್ಯಮಿ ದೀಪಾವಳಿಯೊಂದಿಗೆ ಇನ್ನಿತರ ಪುರಾಣಗಳೂ ಸಂಬಂಧಿತವಾಗಿದೆ. ಉದಾಹರಣೆಗೆ, ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತದೆ.

ಹಿಂದೂ ಧರ್ಮದಜನರು ಪ್ರತಿ ವರ್ಷವೂ ಪ್ರಪಂಚದಿ ಎಲ್ಲೆಡೆ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಹೊಸ ಬಟ್ಟೆಗಳು, ಸಿಹಿ ತಿಂಡಿಗಳು ಎಲ್ಲಕ್ಕೂ ಹೆಚ್ಚಾಗಿ ಪಟಾಕಿಗಳಿಗೆ ದೀಪಾವಳಿ ಪ್ರಸಿದ್ಧ. ಉತ್ತರ ಭಾರತದಲ್ಲಿ ದೀಪಾವಳಿಯ ಸಮಯವೇ ಹೊಸ ಆರ್ಥಿಕ ವರ್ಷದ ಪ್ರಾರಂಭ ಸಹ; ಹೊಸ ಲೆಕ್ಕದ ಪುಸ್ತಕಗಳನ್ನು ಈ ಸಮಯದಲ್ಲೇ ತೆರೆಯಲಾಗುತ್ತದೆ.

ದೀಪಾವಳಿಯ ಅಂಗವಾಗಿ ನಡೆಯುವ ಇತರ ಸಮಾರಂಭಗಳಲ್ಲಿ ಆಯುಧಪೂಜೆ ಮತ್ತು ಗೋಪೂಜೆಗಳನ್ನು ಹೆಸರಿಸಬಹುದು.

ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಮೂರು ದಿನಗಳ ಆಚರಣೆ ನಡೆಯುತ್ತದೆ. ದಕ್ಷಿಣ ಭಾರತದಲ್ಲಿ ನರಕ ಚತುರ್ದಶಿ ಪ್ರಮುಖವಾದರೆ, ಉತ್ತರ ಭಾರತದಲ್ಲಿ ಅಮಾವಾಸ್ಯೆಯಂದು ಆಚರಿಸಲಾಗುವ ಲಕ್ಷ್ಮಿ ಪೂಜೆ ಮುಖ್ಯವಾದದ್ದು.

ತೀರ್ಥಹಳ್ಳಿ ಅನಂತ ಕಲ್ಲಾಪುರ

- Advertisement -

1 COMMENT

  1. […] ಆತ್ಮನಿರ್ಭರ ಭಾರತ ಮಾಡೋಣ ಬ… ದೀಪಾವಳಿಯಲ್ಲಿ ಆತ್ಮನಿರ್ಭರ ಭಾರತ ಮಾಡೋಣ ಬ… ತೀರ್ಥಹಳ್ಳಿ ಅನಂತ […]

Comments are closed.

- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ನೂರಾರು ದೃಶ್ಯಗಳು ತೋರುವವು ಕನಸಿನಲಿ ನೂರಾರು ಭಾವಗಳು ಜಾಗರದಲಿ ಸುಖನಿದ್ದೆಯೊಳಗಾವ ದೃಶ್ಯಭಾವಗಳಿಲ್ಲ ನಿದ್ದೆಯೊಲು‌ ಸಿದ್ಧಿಪಡೆ - ಎಮ್ಮೆತಮ್ಮ ಶಬ್ಧಾರ್ಥ ಜಾಗರ = ಎಚ್ಚರ ಶಬ್ಧಾರ್ಥ ಮನುಷ್ಯನಿಗೆ‌ ಜಾಗ್ರತೆ ಸುಷುಪ್ತಿ ಮತ್ತು ಸುಪ್ತಿ ಎಂಬ ಮೂರು ಅವಸ್ಥೆಗಳಿವೆ‌....
- Advertisement -

More Articles Like This

- Advertisement -
close
error: Content is protected !!
Join WhatsApp Group