ಸಿಂದಗಿ; ನಾಲ್ಕು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಒಟ್ಟು ೪೯೮೮ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು ಸದರಿ ಪ್ರಕರಣಗಳಲ್ಲಿ ಒಟ್ಟು ೪೫೧೧ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ನಾಗೇಶ ಕೆ ಮೊಗೇರ ಹೇಳಿದರು.
ಪಟ್ಟಣದ ನ್ಯಾಯಾಲಯಗಳ ಸಂಕೀರ್ಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ರಾಷ್ಟ್ರೀಯ ಲೋಕ ಅದಾಲತನ್ನು ಇತ್ಯರ್ಥಗೊಳಿಸಿ ಮಾತನಾಡಿ, ಅಪರಾಧ ಪ್ರಕರಣಗಳು, ಎಂವಿಸಿ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣ ಗಳು, ಮೆಂಟೇನೆನ್ಸ್ ಪ್ರಕರಣಗಳು , ಪಾಲು ವಾಟ್ನಿ ದಾವೆಗಳು, ಎಲ್ ಎ ಸಿ ಇಪಿ ಪ್ರಕರಣಗಳು , ಎಮ್ ವಿ ಸಿ, ಇ ಪಿ ಪ್ರಕರಣಗಳು , ಅಪರಾಧ ದಂಡ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥ ಪಡಿಸಲಾಯಿತು ಮತ್ತು ಪೂರ್ವದಾವೆ (Pre cases) ಪ್ರಕರಣಗಳಲ್ಲಿ, ಟ್ರಾಫಿಕ್ ಚಲನ್ ಪ್ರಕರಣಗಳು, ಕಂದಾಯ ಇಲಾಖೆಯ ಕಂದಾಯ ಅದಾಲತ್ ಪ್ರಕರಣಗಳು ಹಾಗೂ ಬ್ಯಾಂಕಿನ ಪ್ರಕರಣಗಳು, ಒಟ್ಟು ೧೩೫೬ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಗಿದೆ ಎಂದರು.
ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ಪಂಕಜಾ ಕೊಣ್ಣೂರ ಮತ್ತು ಹೆಚ್ಚುವರಿ ಹಿರಿಯ ಶ್ರೇಣಿ ದಿವಾಣಿ ನ್ಯಾಯಾದೀಶರಾದ ಎ ಆರ್ ಎ ಮುಲ್ಲಾ ಗೌರವಾನ್ವಿತ ನ್ಯಾಯಾದೀಶ ರವರ ನ್ಯಾಯಾಲಯದಲ್ಲಿ ದಂಪತಿಗಳನ್ನು ರಾಜೀಸಂಧಾನದ ಮೂಲಕ ಒಂದುಗೂಡಿಸಿದರು. ಮತ್ತು ಹಲವು ಪ್ರಕರಣಗಳು ಇತ್ಯರ್ಥಗೊಂಡವು
ಈ ವೇಳೆ ನ್ಯಾಯಾಂಗ ಸಂಧಾನಕಾರರಾಗಿ ಬಿ.ಎಸ್.ಪಾಟೀಲ, ಎಂ.ಬಿ.ಅಂಗಡಿ ಆರ್.ಜೆ. ಐಹೊಳಿ ವಕೀಲರುಗಳು, ಹಾಗೂ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್ ಬಿ ಪಾಟೀಲ ಮತ್ತು ಅಪರ ಸರ್ಕಾರಿ ವಕೀಲ ಬಿ.ಜಿ.ನೆಲ್ಲಗಿ, ಸಹಾಯಕ ಅಭಿಯೋಜಕರಾದ ಆನಂದ ರಾಠೋಡ, ಕುಮಾರಿ ಎಫ್. ಝಡ. ಖತೀಬ, ಕುಮಾರಿ ಎಮ್ ಎಸ್ ಗೊಳಸಂಗಿಮಠ ಮತ್ತು ನ್ಯಾಯವಾದಿಗಳಾದ ಆರ್. ಆಯ್ ಮೊಗಲಾಯಿ, ಕೆ.ಬಿ. ಜನಗೊಂಡ, ಎ.ಕೆ. ಕನ್ನೂರ, ಎಸ್. ಎಸ್. ಸಿಂಗಾಡಿ, ಆರ್.ಎಮ್.ಚೌರ, ಎಸ್. ಬಿ. ದೊಡಮನಿ, ಶಿರಸ್ತೇದಾರರಾದ ಸಿದ್ದಲಿಂಗ ಬಳೂಂಡಗಿ, ಎಸ್.ಎಸ್.ಯರನಾಳ ಮತ್ತು ಎಲ್ಲ ನ್ಯಾಯವಾದಿಗಳು ನ್ಯಾಯಾಲಯದ ಎಲ್ಲ ಸಿಬ್ಬಂದಿಗಳು ಭಾಗವಹಿಸಿದ್ದರು .

